Osteoporosis Disease: ಮೂಳೆಗಳನ್ನು ದೌರ್ಬಲ್ಯಗೊಳಿಸೋ ಆಸ್ಟಿಯೊಪೊರೋಸೀಸ್​ನಿಂದ ರಕ್ಷಿಸಿಕೊಳ್ಳುವುದು ಹೇಗೆ?

ಮೂಳೆಗಳು ಕ್ಯಾಲ್ಸಿಯಂನಿಂದ ಮಾಡಲ್ಪಟ್ಟಿದೆ. ಜೊತೆಗೆ ದೇಹವು 99 ಪ್ರತಿಶತ ಕ್ಯಾಲ್ಸಿಯಂ ಅನ್ನು ಸಂಗ್ರಹಿಸುತ್ತದೆ. ಆಸ್ಟಿಯೊಪೊರೋಸಿಸ್ ಗಂಭೀರ ಮೂಳೆ ಸಂಬಂಧಿ ಸಮಸ್ಯೆ. ನೀವು ದೇಹದಲ್ಲಿ ಸರಿಯಾದ ಪ್ರಮಾಣದ ಕ್ಯಾಲ್ಸಿಯಂ ಹೊಂದಿರದೇ ಹೋದರೆ ಆಸ್ಟಿಯೊಪೊರೋಸಿಸ್ ಕಾಯಿಲೆ ಕಾಡುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುವ ಈ ಕಾಯಿಲೆಯು ಮೂಳೆಗಳನ್ನು ಟೊಳ್ಳಾಗಿಸುತ್ತದೆ.

First published:

  • 18

    Osteoporosis Disease: ಮೂಳೆಗಳನ್ನು ದೌರ್ಬಲ್ಯಗೊಳಿಸೋ ಆಸ್ಟಿಯೊಪೊರೋಸೀಸ್​ನಿಂದ ರಕ್ಷಿಸಿಕೊಳ್ಳುವುದು ಹೇಗೆ?

    ಆಸ್ಟಿಯೊಪೊರೋಸಿಸ್ ಎಂಬುದು ಗಂಭೀರವಾದ ಮೂಳೆ ಸಂಬಂಧಿ ಸಮಸ್ಯೆ. ಇದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ ಆಗಿದೆ. ಈ ರೋಗವು ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುತ್ತದೆ. ಈ ರೋಗದಲ್ಲಿ ಮೂಳೆಗಳು ದುರ್ಬಲ ಆಗುತ್ತವೆ. ಜೊತೆಗೆ ಮೂಳೆಗಳು ನಿರ್ಜೀವವಾಗುತ್ತವೆ. ಸ್ವಲ್ಪ ಗಾಯವಾದ್ರೂ ಮೂಳೆ ಮುರಿಯುವ ಅಪಾಯ ಹೆಚ್ಚಿರುತ್ತದೆ.

    MORE
    GALLERIES

  • 28

    Osteoporosis Disease: ಮೂಳೆಗಳನ್ನು ದೌರ್ಬಲ್ಯಗೊಳಿಸೋ ಆಸ್ಟಿಯೊಪೊರೋಸೀಸ್​ನಿಂದ ರಕ್ಷಿಸಿಕೊಳ್ಳುವುದು ಹೇಗೆ?

    ಮೂಳೆಗಳು ಕ್ಯಾಲ್ಸಿಯಂನಿಂದ ಮಾಡಲ್ಪಟ್ಟಿದೆ. ಜೊತೆಗೆ ದೇಹವು 99 ಪ್ರತಿಶತ ಕ್ಯಾಲ್ಸಿಯಂ ಅನ್ನು ಸಂಗ್ರಹಿಸುತ್ತದೆ. ಆಸ್ಟಿಯೊಪೊರೋಸಿಸ್ ಗಂಭೀರ ಮೂಳೆ ಸಂಬಂಧಿ ಸಮಸ್ಯೆ. ನೀವು ದೇಹದಲ್ಲಿ ಸರಿಯಾದ ಪ್ರಮಾಣದ ಕ್ಯಾಲ್ಸಿಯಂ ಹೊಂದಿರದೇ ಹೋದರೆ ಆಸ್ಟಿಯೊಪೊರೋಸಿಸ್ ಕಾಯಿಲೆ ಕಾಡುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುವ ಈ ಕಾಯಿಲೆಯು ಮೂಳೆಗಳನ್ನು ಟೊಳ್ಳಾಗಿಸುತ್ತದೆ.

    MORE
    GALLERIES

  • 38

    Osteoporosis Disease: ಮೂಳೆಗಳನ್ನು ದೌರ್ಬಲ್ಯಗೊಳಿಸೋ ಆಸ್ಟಿಯೊಪೊರೋಸೀಸ್​ನಿಂದ ರಕ್ಷಿಸಿಕೊಳ್ಳುವುದು ಹೇಗೆ?

    ದೈನಂದಿನ ಆಹಾರದಿಂದ ನೀವು ಸಾಕಷ್ಟು ಕ್ಯಾಲ್ಸಿಯಂ ಪಡೆಯದಿದ್ದರೆ, ದೇಹವು ಇತರ ಕಾರ್ಯಗಳನ್ನು ನಿರ್ವಹಿಸಲು ಮೂಳೆಗಳಿಂದ ಕ್ಯಾಲ್ಸಿಯಂ ಪಡೆಯಲು ಶುರು ಮಾಡುತ್ತದೆ. ಜೊತಗೆ ಸ್ವಲ್ಪ ಪ್ರಮಾಣದ ಕ್ಯಾಲ್ಸಿಯಂ ಮೂತ್ರದ ಮೂಲಕ ಹೊರ ಹೋಗುತ್ತದೆ.

    MORE
    GALLERIES

  • 48

    Osteoporosis Disease: ಮೂಳೆಗಳನ್ನು ದೌರ್ಬಲ್ಯಗೊಳಿಸೋ ಆಸ್ಟಿಯೊಪೊರೋಸೀಸ್​ನಿಂದ ರಕ್ಷಿಸಿಕೊಳ್ಳುವುದು ಹೇಗೆ?

    ಕಡಿಮೆ ಕ್ಯಾಲ್ಸಿಯಂ ಭರಿತ ವಸ್ತುಗಳ ಸೇವನೆಯಿಂದ ಮೂಳೆಗಳ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ. ಇದು ಆಸ್ಟಿಯೊಪೊರೋಸಿಸ್ ಕಾಯಿಲೆ ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಕೊರತೆ ಸರಿಪಡಿಸಲು ಏನು ಮಾಡಬೇಕು? ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವಿಸಿ. ದಿನವೂ ಮೊಸರು, ಹಾಲು ಮತ್ತು ಪನೀರ್‌ ಡೈರಿ ಉತ್ಪನ್ನಗಳ ಸೇವನೆ ಹೆಚ್ಚಿಸಿ.

    MORE
    GALLERIES

  • 58

    Osteoporosis Disease: ಮೂಳೆಗಳನ್ನು ದೌರ್ಬಲ್ಯಗೊಳಿಸೋ ಆಸ್ಟಿಯೊಪೊರೋಸೀಸ್​ನಿಂದ ರಕ್ಷಿಸಿಕೊಳ್ಳುವುದು ಹೇಗೆ?

    ಸಸ್ಯಾಹಾರಿಗಳು, ಡೈರಿ ಉತ್ಪನ್ನಗಳನ್ನು ಸೇವಿಸುವುದಿಲ್ಲ. ಹೀಗಾಗಿ ತಮ್ಮ ದೈನಂದಿನ ಕ್ಯಾಲ್ಸಿಯಂ ಅಗತ್ಯ ಪೂರೈಸಿಕೊಳ್ಳಲು ಸಾಧ್ಯವಾಗಲ್ಲ. ಕ್ಯಾಲ್ಸಿಯಂ ಕೊರತೆ ತಪ್ಪಿಸಲು, ಮೂಳೆಗಳನ್ನು ಆರೋಗ್ಯಕರವಾಗಿರಿಸಲು ಆಹಾರ ಮುಖ್ಯ. ಕ್ಯಾಲ್ಸಿಯಂ ಫುಡ್ಸ್ ಸೇವನೆಯು ಮೂಳೆಗಳನ್ನು ಬಲವಾಗಿಡುತ್ತದೆ.

    MORE
    GALLERIES

  • 68

    Osteoporosis Disease: ಮೂಳೆಗಳನ್ನು ದೌರ್ಬಲ್ಯಗೊಳಿಸೋ ಆಸ್ಟಿಯೊಪೊರೋಸೀಸ್​ನಿಂದ ರಕ್ಷಿಸಿಕೊಳ್ಳುವುದು ಹೇಗೆ?

    ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ನೀವು ಪ್ರತಿದಿನ ಕನಿಷ್ಠ 1,000 ಮಿಲಿಗ್ರಾಂ ಕ್ಯಾಲ್ಸಿಯಂ ಸೇವಿಸಿ. ಟರ್ನಿಪ್ ಸೇವಿಸಿ. ಹಸಿರು ಎಲೆಗಳ ತರಕಾರಿ ಟರ್ನಿಪ್ ಕ್ಯಾಲ್ಸಿಯಂನ ಉತ್ತಮ ಮೂಲ. ಸಸ್ಯಾಹಾರಿಗಳು ಈ ತರಕಾರಿ ಸೇವಿಸಿ. ಸೋಯಾಬೀನ್ ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲ. ಕಪ್ ಸೋಯಾಬೀನ್‌ನಲ್ಲಿ 175 ಮಿಗ್ರಾಂ ಕ್ಯಾಲ್ಸಿಯಂ ಇದೆ.

    MORE
    GALLERIES

  • 78

    Osteoporosis Disease: ಮೂಳೆಗಳನ್ನು ದೌರ್ಬಲ್ಯಗೊಳಿಸೋ ಆಸ್ಟಿಯೊಪೊರೋಸೀಸ್​ನಿಂದ ರಕ್ಷಿಸಿಕೊಳ್ಳುವುದು ಹೇಗೆ?

    ಸಾಸಿವೆ ಗ್ರೀನ್ಸ್ ಸೇವಿಸಿ. ಸಾಸಿವೆ ಸೊಪ್ಪು ಕಬ್ಬಿಣ ಮತ್ತು ಕ್ಯಾಲ್ಸಿಯಂನ ಶಕ್ತಿ ಕೇಂದ್ರವಾಗಿದೆ. ಕ್ಯಾಲ್ಸಿಯಂ ಕೊರತೆಯಿದ್ದರೆ ಸಾಸಿವೆ ಸೊಪ್ಪು ಸೇವಿಸಿ. ಒಂದು ಕಪ್ ಸಾಸಿವೆ ಸೊಪ್ಪಿನಲ್ಲಿ 120 ಮಿಗ್ರಾಂ ಕ್ಯಾಲ್ಸಿಯಂ ಇದೆ. ಬೆಂಡೆಕಾಯಿ ತಪ್ಪದೇ ನಿಮ್ಮ ಆಹಾರದಲ್ಲಿ ಸೇರಿಸಿ.

    MORE
    GALLERIES

  • 88

    Osteoporosis Disease: ಮೂಳೆಗಳನ್ನು ದೌರ್ಬಲ್ಯಗೊಳಿಸೋ ಆಸ್ಟಿಯೊಪೊರೋಸೀಸ್​ನಿಂದ ರಕ್ಷಿಸಿಕೊಳ್ಳುವುದು ಹೇಗೆ?

    ಬೆಂಡೆ ಕಾಯಿ ಸಾರ್ವಕಾಲಿಕ ಸಿಗುವ ತರಕಾರಿ. ತುಂಬಾ ಜನರಿಗೆ ಬೆಂಡೆಕಾಯಿ ಇಷ್ಟವಾಗುತ್ತದೆ. ಮಕ್ಕಳಿಗೆ ಬೆಂಡೆಕಾಯಿ ಕರಿದು ಕೊಟ್ಟರೆ, ಬೆಂಡೆಕಾಯಿ ಬೋಂಡಾ ತಿನ್ನಲು ಸಖತ್ ಆಗಿರುತ್ತದೆ. ಈ ತರಕಾರಿಯು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಒಂದು ಕಪ್ ಭಿಂಡಿಯಿಂದ ನೀವು ಸುಮಾರು 120 ಮಿಲಿಗ್ರಾಂ ಕ್ಯಾಲ್ಸಿಯಂ ಪಡೆಯಬಹುದು.

    MORE
    GALLERIES