ಇತ್ತೀಚಿನ ದಿನಗಳಲ್ಲಿ ಹಸುವಿನ ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಇದರ ಸೇವನೆ ಹೆಚ್ಚಿದೆ. ಯಾಕಂದ್ರೆ ಹಸುವಿನ ಹಾಲಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇದೆ. ಆದರೆ ಸಸ್ಯಾಹಾರಿ ಆಹಾರ ಸೇವಿಸುವವರು, ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ಹಸುವಿನ ಹಾಲು ಸೇವಿಸುವುದಿಲ್ಲ. ಅಂತಹವರು ತೆಂಗಿನ ಹಾಲು ಮತ್ತು ಬಾದಾಮಿ ಹಾಲು ಕುಡಿಯುತ್ತಾರೆ.