ಇತ್ತೀಚೆಗೆ Boiled Egg ಎಷ್ಟು ಬಳಸಬೇಕು ಎನ್ನುವ ಬಗ್ಗೆ ಅಮೇರಿಕಾದ ವಿಶ್ವವಿದ್ಯಾಲಯವೊಂದರಲ್ಲಿ ಸಂಶೋಧನೆ ನಡೆಯಿತು. ಅದರಂತೆ ಬೆಳಗ್ಗೆ ತಿಂಡಿಯ ಸಂದರ್ಭದಲ್ಲಿ ಎರಡು ಬೇಯಿಸಿದ ಮೊಟ್ಟೆ ಮತ್ತು ಹಣ್ಣು, ಮಧ್ಯಾಹ್ನ ಬೇಕೆನಿಸಿದರೆ ಒಂದು ಮೊಟ್ಟೆ ಮತ್ತು ರಾತ್ರಿ ಕೇವಲ ತರಕಾರಿ ತಿನ್ನಬೇಕು ಎನ್ನಲಾಗಿದೆ. ಮೊಟ್ಟೆಯ ಜೊತೆಗೆ ಮೀನು ಮತ್ತು lean meat ಪದಾರ್ಥಗಳನ್ನೂ ಬಳಸಬಹುದು ಎನ್ನಲಾಗಿದೆ.
ಮತ್ತೊಂದು ಸಂಶೋಧನೆ ಪ್ರಕಾರ ಪ್ರತಿದಿನ ಮೊಟ್ಟೆ ತನ್ನುವವರಿಗೆ ಶೇಕಡಾ 20ರಷ್ಟು ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದಂತೆ. ಹಾಗಾಗಿ ದಿನಕ್ಕಿಷ್ಟು ಎಂದು ಮೊಟ್ಟೆ ತಿಂದರೆ ಅದರಲ್ಲಿರೋ ಕೊಲೆಸ್ಟರಾಲ್ ಮತ್ತಿತರ ಅಂಶಗಳು ಲಿವರ್ ಗೆ ಹೊಡೆತ ನೀಡುತ್ತವೆ. ಆದ್ದರಿಂದ ವಾರಕ್ಕೆ 2ರಿಂದ 3 ಮೊಟ್ಟೆ ಮಾತ್ರ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.