ಕೊರೋನಾದಿಂದ ಪಾರಾಗಲು ಹಲವರು ನಾನಾ ಮದ್ದುಗಳನ್ನು ಹೇಳುತ್ತಿದ್ದಾರೆ. ಬೆಲಾರಸ್ ಅಧ್ಯಕ್ಷ ವೋಡ್ಕಾ ಕುಡಿಯುವುದರಿಂದ ಕೊರೋನಾವನ್ನು ಕೊಲ್ಲಬಹುದು ಅಂದರೆ, ಅಸ್ಸಾಂನ ಶಾಸಕರೊಬ್ಬರು ಗೊ ಮೂತ್ರ ಕುಡಿಯುವುದರಿಂದ ಈ ಸಾಂಕ್ರಾಮಿಕ ರೋಗದಿಂದ ಪಾರಾಗಬಹುದು ಎಂದಿದ್ದರು.
2/ 17
ಆದರೆ ಈ ಎಲ್ಲಾ ವಿತಂಡ ವಾದಗಳನ್ನು ಮೀರಿಸುವಂತೆ ಇದೀಗ ದೂರದ ಲಂಡನ್ನಿಂದ ಮತ್ತೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಹೆಸರು ಟ್ರೇಸಿ ಕಿಸ್. ಈಕೆ ಕೊರೋನಾದಿಂದ ಪಾರಾಗಲು ವಿರ್ಯ ಸೇವಿಸುತ್ತಿದ್ದಾರಂತೆ.
3/ 17
ವೀರ್ಯದ ಸ್ಮೂಥಿ ಮಾಡಿ ಕುಡಿಯುವುದರಿಂದ ಕೊರೋನಾದಿಂದ ಪಾರಾಗಬಹುದು. ಇದನ್ನು ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಟ್ರೇಸಿ ಕಿಸ್ ಹೇಳಿದ್ದಾರೆ.
4/ 17
ಇದಕ್ಕಾಗಿ ನಾನು ಬಾಯ್ ಫ್ರೆಂಡ್ನ ವೀರ್ಯದ ಸ್ಮೂಥಿಯನ್ನು ಕುಡಿಯುತ್ತಿದ್ದು, ಕಳೆದ ಮೂರು ವರ್ಷಗಳಿಂದ ಒಂದು ದಿನವೂ ನನಗೆ ಜ್ವರವಾಗಲಿ, ಅನಾರೋಗ್ಯವಾಗಿ ಉಂಟಾಗಿಲ್ಲ ಎಂದು ಹೇಳಿದ್ದಾರೆ.
5/ 17
ಬಾಯ್ಫ್ರೆಂಡ್ನಿಂದ ವೀರ್ಯದೊಂದಿಗೆ ಬಾಳೆಹಣ್ಣು ಮತ್ತು ಇನ್ನಿತರ ಹಣ್ಣುಗಳನ್ನು ಸೇರಿಸಿ ಜ್ಯೂಸ್ ಮಾಡಿ ವಾರಕ್ಕೆ ಮೂರು ಬಾರಿ ಸೇವಿಸುತ್ತಾ ಬಂದಿದ್ದೇನೆ. ಇದು ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಮ್ನಿಂದ ಕೂಡಿರುತ್ತದೆ.
6/ 17
ಪ್ರಸ್ತುತ ಸಾಂಕ್ರಾಮಿಕ ರೋಗಗಳಿಂದ ಜನರು ಪಾರಾಗಲು ಮತ್ತು ಆರೋಗ್ಯವಂತರಾಗಿರಲು ವೀರ್ಯ ಸ್ಮೂಥಿ ಸಹಾಯ ಮಾಡುತ್ತದೆ ಎಂದು ಫಿಟ್ನೆಸ್ ಫ್ರೀಕ್ ಆಗಿರುವ ಟ್ರೇಸಿ ಹೇಳುತ್ತಾರೆ.
7/ 17
ಈ ಹಿಂದೆ ವೀರ್ಯದಿಂದ ಫೇಸ್ಪ್ಯಾಕ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಸುದ್ದಿಯಾಗಿದ್ದ ಟ್ರೇಸಿ ಕಿಸ್, ತಮ್ಮ ಚರ್ಮದ ಹೊಳಪಿಗೆ ಇದುವೇ ಕಾರಣ ಎಂದು ಬಹಿರಂಗಪಡಿಸಿದ್ದರು.
8/ 17
ನೈಸರ್ಗಿಕ ಪರಿಹಾರಗಳ ಬಗ್ಗೆ ನಾವು ಮುಜುಗರಪಡಬೇಕಾಗಿಲ್ಲ. ಏಕೆಂದರೆ ಆ ಮುಜುಗರವು ನಮ್ಮನ್ನು ಪ್ರಯತ್ನಿಸುವುದನ್ನು ತಡೆಯುತ್ತದೆ ಎಂಬ ವಾದವನ್ನು ಟ್ರೇಸಿ ಮುಂದಿಟ್ಟಿದ್ದಾರೆ.
9/ 17
ಆದರೆ ಈ ವಿಲಕ್ಷಣ ವಿಧಾನವು 'ಅಸಂಬದ್ಧ' ಎಂದಿರುವ ಡಾ. ಸಾರಾ ಜಾರ್ವಿಸ್, ಇಂತಹ ಅವೈಜ್ಞಾನಿಕ ನಡೆಯಿಂದ ಲೈಂಗಿಕವಾಗಿ ಹರಡುವ ಸೋಂಕಿನ ಅಪಾಯವಿದೆ ಎಂದು ತಿಳಿಸಿದ್ದಾರೆ.
10/ 17
ಒಟ್ಟಿನಲ್ಲಿ ವಿಲಕ್ಷಣ ಸ್ಮೂಥಿ ಪರಿಚಯಿಸುವ ಮೂಲಕ ಟ್ರೇಸಿ ಕಿಸ್ ಇದೀಗ ವಿಶ್ವದಾದ್ಯಂತ ಸಖತ್ ಸುದ್ದಿಯಲ್ಲಿದ್ದಾರೆ.