Uric Acid: ಯೂರಿಕ್‌ ಆಮ್ಲ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಪದಾರ್ಥಗಳನ್ನು ಮುಟ್ಟೋಕೆ ಹೋಗ್ಬೇಡಿ!

ಯೂರಿಕ್ ಆಮ್ಲ ಹೆಚ್ಚಳವು ಕೀಲು ನೋವಿಗೆ ಮುಖ್ಯ ಕಾರಣವಾಗುತ್ತದೆ. ಇದು ಗೌಟ್ ಕಾಯಿಲೆ ಉತ್ಪತ್ತಿ ಮಾಡುತ್ತದೆ. ದೇಹದಲ್ಲಿನ ಪ್ಯೂರಿನ್ ಗಳು ವಿಭಜನೆ ಆದಾಗ ತ್ಯಾಜ್ಯ ಉತ್ಪತ್ತಿ ಆಗುತ್ತದೆ. ಇದನ್ನೇ ಯೂರಿಕ್ ಆಮ್ಲ ಎನ್ನುತ್ತಾರೆ. ಇದು ಆಹಾರ ಮತ್ತು ಪಾನೀಯಗಳ ಮೂಲಕ ಉಂಟಾಗುತ್ತದೆ. ಯೂರಿಕ್ ಆಮ್ಲ ಹೆಚ್ಚಿಸುವ ಪದಾರ್ಥಗಳ ಹೆಚ್ಚಿನ ಸೇವನೆಯು ರಕ್ತದಲ್ಲಿ ಯೂರಿಕ್ ಆಮ್ಲದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ನೀವು ಈ ಪದಾರ್ಥಗಳ ಸೇವನೆ ತಪ್ಪಿಸಿ.

First published:

  • 18

    Uric Acid: ಯೂರಿಕ್‌ ಆಮ್ಲ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಪದಾರ್ಥಗಳನ್ನು ಮುಟ್ಟೋಕೆ ಹೋಗ್ಬೇಡಿ!

    ಯೂರಿಕ್ ಆಮ್ಲದ ಹೆಚ್ಚಳವು ದೇಹದಲ್ಲಿ ಗೌಟ್ ಮತ್ತು ಮೂತ್ರಪಿಂಡದ ಕಲ್ಲು ಉಂಟಾಗಲು ಕಾರಣವಾಗುತ್ತದೆ. ರಕ್ತದ ಈ ಕೊಳಕು ಹೆಚ್ಚಾದರೆ, ದೇಹದ ವಿವಿಧ ಸ್ಥಳಗಳಲ್ಲಿ ನೋವುಂಟಾಗುತ್ತದೆ. ಕೀಲುಗಳ ಮೇಲೆ ಚರ್ಮ ಕೆಂಪಾಗುತ್ತದೆ. ಬೆನ್ನು ನೋವು, ಮೂತ್ರದ ದುರ್ವಾಸನೆ, ಕೀಲುಗಳ ನೋವು ಉಂಟಾಗುತ್ತದೆ.

    MORE
    GALLERIES

  • 28

    Uric Acid: ಯೂರಿಕ್‌ ಆಮ್ಲ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಪದಾರ್ಥಗಳನ್ನು ಮುಟ್ಟೋಕೆ ಹೋಗ್ಬೇಡಿ!

    ಹಸಿರು ಬಟಾಣಿ ಸೇವನೆಯಿಂದ ದೇಹಕ್ಕೆ ಸಾಕಷ್ಟು ಫೈಬರ್ ಸಿಗುತ್ತದೆ. ಇದು ಹಸಿರು ತರಕಾರಿ. ಇದು ಹೆಚ್ಚಿನ ಪ್ಯೂರಿನ್ ಅಂಶ ಹೊಂದಿರುತ್ತದೆ ಎಂದು ವರದಿಯೊಂದು ಹೇಳಿದೆ. ಹಸಿರು ಬಟಾಣಿ ಕಾಳುಗಳ ಅತಿಯಾದ ಸೇವನೆಯಿಂದ ದೇಹದಲ್ಲಿ ಅತಿಯಾದ ಯೂರಿಕ್ ಆಮ್ಲ ಉಂಟಾಗುತ್ತದೆ. ಮುಂದೆ ಇದು ಹಲವು ಕಾಯಿಲೆಗೆ ಕಾರಣವಾಗುತ್ತದೆ.

    MORE
    GALLERIES

  • 38

    Uric Acid: ಯೂರಿಕ್‌ ಆಮ್ಲ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಪದಾರ್ಥಗಳನ್ನು ಮುಟ್ಟೋಕೆ ಹೋಗ್ಬೇಡಿ!

    ಅವರೆಕಾಳು ಸೀಸನಲ್ ಪದಾರ್ಥ. ಹೀಗಾಗಿ ಇದನ್ನು ಹೆಚ್ಚಿನ ಜನರು ತಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳುತ್ತಾರೆ. ಆದರೆ ಅತಿಯಾಗಿ ಅವರೆಕಾಳು ತಿಂದರೆ ಇದು ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಿಸುತ್ತದೆ. ಹಾಗಾಗಿ ಆಹಾರ ತಜ್ಞರನ್ನು ಸಂಪರ್ಕಿಸಿ, ಸಲಹೆ ಪಡೆಯುವುದು ಮುಖ್ಯ.

    MORE
    GALLERIES

  • 48

    Uric Acid: ಯೂರಿಕ್‌ ಆಮ್ಲ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಪದಾರ್ಥಗಳನ್ನು ಮುಟ್ಟೋಕೆ ಹೋಗ್ಬೇಡಿ!

    ಹೆಚ್ಚಿನ ಮೊಸರು ಸೇವನೆ ಸಹ ಯೂರಿಕ್ ಆಮ್ಲ ಹೆಚ್ಚು ಮಾಡುತ್ತದೆ. ಹಾಗಾಗಿ ನೀವು ಯೂರಿಕ್ ಆಮ್ಲ ನಿಯಂತ್ರಿಸಲು ಬಯಸಿದರೆ ಕಡಿಮೆ ಕೊಬ್ಬಿನಂಶ ಹೊಂದಿರುವ ಮೊಸರು ತಿನ್ನುವುದನ್ನು ರೂಢಿಸಿಕೊಳ್ಳಿ. ನೀವು ಬೆಳಗಿನ ಉಪಾಹಾರದಲ್ಲಿ ಕಡಿಮೆ ಕೊಬ್ಬಿನ ಮೊಸರು ಹಾಗೂ ಹಣ್ಣು ಬೆರೆಸಿ ಸೇವಿಸಿ.

    MORE
    GALLERIES

  • 58

    Uric Acid: ಯೂರಿಕ್‌ ಆಮ್ಲ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಪದಾರ್ಥಗಳನ್ನು ಮುಟ್ಟೋಕೆ ಹೋಗ್ಬೇಡಿ!

    ಯೂರಿಕ್ ಆಮ್ಲ ಹೆಚ್ಚಿಸುವ ಪದಾರ್ಥಗಳಲ್ಲಿ ಕೆಂಪು ಮಾಂಸ ಕೂಡ ಒಂದು. ಇದರ ಹೆಚ್ಚಿನ ಸೇವನೆ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಿಸುತ್ತದೆ. ಇದು ಗೌಟ್ ಅಂದ್ರೆ ಸಂಧಿವಾತ ಕಾಯಿಲೆ ಉಂಟು ಮಾಡುತ್ತದೆ. ಹಾಗಾಗಿ ಯೂರಿಕ್ ಆಸಿಡ್ ಕಡಿಮೆ ಮಾಡಲು ಕೆಂಪು ಮಾಂಸ ಸೇವನೆ ತಪ್ಪಿಸಿ. ಆರ್ಗನ್ ಮಾಂಸ ಮತ್ತು ಸಮುದ್ರಾಹಾರ ಹೆಚ್ಚು ಪ್ಯೂರಿನ್ ಹೊಂದಿದ್ದು, ಮಿತವಾಗಿ ಸೇವಿಸಿ.

    MORE
    GALLERIES

  • 68

    Uric Acid: ಯೂರಿಕ್‌ ಆಮ್ಲ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಪದಾರ್ಥಗಳನ್ನು ಮುಟ್ಟೋಕೆ ಹೋಗ್ಬೇಡಿ!

    ಸೇವನೆ ಕಡಿಮೆ ಮಾಡಿ. ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡಲು ಮತ್ತು ನಿಯಂತ್ರಣದಲ್ಲಿಡಲು ಸೋಡಾ ಮತ್ತು ತಂಪು ಪಾನೀಯ ಹಾಗೂ ಸಿಹಿ ಪಾನೀಯ ಸೇವನೆ ತಪ್ಪಿಸಿ. ಸಕ್ಕರೆ ಸೇರಿಸಿದ ಜ್ಯೂಸ್ ಮತ್ತು ಹೆಚ್ಚಿನ ಫ್ರಕ್ಟೋಸ್ ಪಾನೀಯ ಸೇವನೆ ತಪ್ಪಿಸಿ. ಹಾಗಾಗಿ ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯಿರಿ.

    MORE
    GALLERIES

  • 78

    Uric Acid: ಯೂರಿಕ್‌ ಆಮ್ಲ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಪದಾರ್ಥಗಳನ್ನು ಮುಟ್ಟೋಕೆ ಹೋಗ್ಬೇಡಿ!

    ಆಲ್ಕೋಹಾಲ್ ಸೇವನೆ ತಪ್ಪಿಸಿ. ಆಲ್ಕೋಹಾಲ್ ಮತ್ತು ವಿಶೇಷವಾಗಿ ಬಿಯರ್ ಸೇವನೆ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಿಸುತ್ತದೆ. ಇದು ಗೌಟ್ ಅಪಾಯ ತಂದೊಡ್ಡುತ್ತದೆ. ಯೂರಿಕ್ ಆಸಿಡ್ ಕಡಿಮೆ ಮಾಡಲು ಸಾಧ್ಯವಾದಷ್ಟು ಬೇಗ ಆಲ್ಕೋಹಾಲ್ ಸೇವನೆ ತಪ್ಪಿಸಿ.

    MORE
    GALLERIES

  • 88

    Uric Acid: ಯೂರಿಕ್‌ ಆಮ್ಲ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಪದಾರ್ಥಗಳನ್ನು ಮುಟ್ಟೋಕೆ ಹೋಗ್ಬೇಡಿ!

    ವಿಟಮಿನ್ ಸಿ ಇರುವ ಹಣ್ಣುಗಳ ಸೇವನೆ ಹೆಚ್ಚು ಮಾಡಿ. ಬೆರ್ರಿ ಹಣ್ಣುಗಳು ಅಥವಾ ಸಿಟ್ರಸ್ ಹಣ್ಣುಗಳು ಯೂರಿಕ್ ಆಮ್ಲ ಕಡಿಮೆ ಮಾಡುತ್ತವೆ. ಹಾಗಾಗಿ ವಿಟಮಿನ್ ಸಿ ಪೋಷಕಾಂಶ ಹೊಂದಿರುವ ಪದಾರ್ಥ ಸೇವಿಸಿ.

    MORE
    GALLERIES