Uric Acid Problem: ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್​ ಮಟ್ಟ ಕಡಿಮೆಗೊಳಿಸಲು ಟ್ರೈ ಮಾಡಿ ಈ ನ್ಯಾಚುರಲ್ ಟಿಪ್ಸ್​!

ಕೆಲವೊಮ್ಮೆ ಮೊಣಕಾಲು ಮತ್ತು ದೇಹದ ಇತರೆ ಭಾಗದ ಕೀಲುಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕೀಲು ನೋವು ಮತ್ತು ಒಸಡುಗಳಲ್ಲಿ ಉರಿಯೂತ ಉಂಟಾಗುತ್ತದೆ. ಇದು ಯೂರಿಕ್ ಆಮ್ಲದ ಕಾರಣದಿಂದ ಆಗಿರುತ್ತದೆ. ಈ ಸ್ಥಿತಿಯನ್ನು ಗೌಟ್ ಎಂದು ಕರೆಯುತ್ತಾರೆ.

First published:

 • 18

  Uric Acid Problem: ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್​ ಮಟ್ಟ ಕಡಿಮೆಗೊಳಿಸಲು ಟ್ರೈ ಮಾಡಿ ಈ ನ್ಯಾಚುರಲ್ ಟಿಪ್ಸ್​!

  ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟ ತುಂಬಾ ಹೆಚ್ಚಾದಾಗ ಗೌಟ್ ಸಮಸ್ಯೆ ಉಂಟಾಗುತ್ತದೆ. ಇದು ಪಾದಗಳು, ಕಾಲ್ಬೆರಳು ಮತ್ತು ಇತರ ಕೀಲುಗಳಲ್ಲಿ ಹರಳು ರೂಪಿಸುತ್ತದೆ. ನೈಸರ್ಗಿಕವಾಗಿ ಯೂರಿಕ್ ಆಸಿಡ್ ಅನ್ನು ಹೇಗೆ ಕಡಿಮೆ ಮಾಡುವುದು ಎಂಬುದನ್ನು ಇಲ್ಲಿ ನೋಡೋಣ.

  MORE
  GALLERIES

 • 28

  Uric Acid Problem: ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್​ ಮಟ್ಟ ಕಡಿಮೆಗೊಳಿಸಲು ಟ್ರೈ ಮಾಡಿ ಈ ನ್ಯಾಚುರಲ್ ಟಿಪ್ಸ್​!

  ಆಹಾರ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಂಡರೆ ಗೌಟ್ ಸಮಸ್ಯೆ ಮತ್ತು ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡಬಹುದು. ಆಹಾರ ಮತ್ತು ಜೀವನಶೈಲಿಯ ಬದಲಾವಣೆ, ಔಷಧಿ ಮತ್ತು ಪೂರಕಗಳು ಯೂರಿಕ್ ಆಮ್ಲ ಕಡಿಮೆ ಮಾಡುತ್ತದೆ. ರಕ್ತದಲ್ಲಿ ಯೂರಿಕ್ ಆಮ್ಲವು ಹೆಚ್ಚಾಗುತ್ತದೆ ಎಂದಾಗ ನೈಸರ್ಗಿಕವಾಗಿ ಕಡಿಮೆ ಮಾಡಬಹುದು.

  MORE
  GALLERIES

 • 38

  Uric Acid Problem: ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್​ ಮಟ್ಟ ಕಡಿಮೆಗೊಳಿಸಲು ಟ್ರೈ ಮಾಡಿ ಈ ನ್ಯಾಚುರಲ್ ಟಿಪ್ಸ್​!

  ಯೂರಿಕ್ ಆಮ್ಲವು ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಮೊದಲು ತಿಳಿಯಿರಿ. ತಜ್ಞರ ಪ್ರಕಾರ ಯೂರಿಕ್ ಆಮ್ಲವು ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಕಂಡು ಬರುತ್ತದೆ. ದೇಹದಲ್ಲಿ ಪ್ಯೂರಿನ್ಗಳು ವಿಭಜನೆಯಾದಾಗ ಯೂರಿಕ್ ಆಮ್ಲವು ಉತ್ಪತ್ತಿ ಆಗುತ್ತದೆ. ಕೆಲವು ಆಹಾರಗಳಲ್ಲಿ ಫ್ಯೂರಿನ್ ಇದೆ.

  MORE
  GALLERIES

 • 48

  Uric Acid Problem: ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್​ ಮಟ್ಟ ಕಡಿಮೆಗೊಳಿಸಲು ಟ್ರೈ ಮಾಡಿ ಈ ನ್ಯಾಚುರಲ್ ಟಿಪ್ಸ್​!

  ಯೂರಿಕ್ ಆಸಿಡ್ ಹೆಚ್ಚಿಸುವ ಫ್ಯೂರಿನ್ , ಕೆಂಪು ಮಾಂಸ, ಯಕೃತ್ತು ಮುಂತಾದ ಅಂಗ ಮಾಂಸಗಳಲ್ಲಿದೆ. ಸಾರ್ಡೀನ್ಗಳು, ಟ್ರೌಟ್ ಅಥವಾ ಟ್ಯೂನ ಮೀನು ಸೇರಿದಂತೆ ಕೆಲವು ಸಮುದ್ರಾಹಾರದಲ್ಲಿ ಪ್ಯೂರಿನ್ ಇದೆ. ಬೊಜ್ಜು ಮತ್ತು ಇತರೆ ಕಾರಣಗಳಿಂದ ಯೂರಿಕ್ ಆಮ್ಲ ಹೆಚ್ಚುತ್ತದೆ.

  MORE
  GALLERIES

 • 58

  Uric Acid Problem: ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್​ ಮಟ್ಟ ಕಡಿಮೆಗೊಳಿಸಲು ಟ್ರೈ ಮಾಡಿ ಈ ನ್ಯಾಚುರಲ್ ಟಿಪ್ಸ್​!

  ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಪ್ಯೂರಿನ್ ಆಹಾರ ಸೇವನೆ ಕಡಿಮೆ ಮಾಡಿ. ಪ್ಯೂರಿನ್ ಭರಿತ ಆಹಾರದಿಂದ ಚಯಾಪಚಯಗೊಳಿಸುವ ಪ್ರಕ್ರಿಯೆ ಹೆಚ್ಚು ಯೂರಿಕ್ ಆಮ್ಲ ಉತ್ಪಾದಿಸುತ್ತದೆ. ಇದು ಗೌಟ್ ಸಾಧ್ಯತೆ ಹೆಚ್ಚಿಸುತ್ತದೆ. ವೈನ್, ಡೈರಿ ಉತ್ಪನ್ನ, ಕೆಂಪು ಮಾಂಸ, ಸಿಹಿ ಆಹಾರ, ಕಾರ್ಬೊನೇಟೆಡ್ ಪಾನೀಯ ಹೆಚ್ಚಿನ ಕೊಬ್ಬಿನ ಆಹಾರ ಸೇವನೆ ತಪ್ಪಿಸಿ.

  MORE
  GALLERIES

 • 68

  Uric Acid Problem: ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್​ ಮಟ್ಟ ಕಡಿಮೆಗೊಳಿಸಲು ಟ್ರೈ ಮಾಡಿ ಈ ನ್ಯಾಚುರಲ್ ಟಿಪ್ಸ್​!

  ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಕಡಿಮೆ ಪ್ಯೂರಿನ್ ಅಂಶವಿರುವ ಕೆಲವು ಆಹಾರ ಸೇವಿಸಿ. ಕೊಬ್ಬು-ಮುಕ್ತ ಡೈರಿ ಉತ್ಪನ್ನಗಳು, ಕಡಲೆಕಾಯಿ ಬೆಣ್ಣೆ, ಹೆಚ್ಚಿನ ಹಣ್ಣು ಮತ್ತು ತರಕಾರಿ, ಕಾಫಿ, ಧಾನ್ಯ, ಆಲೂಗಡ್ಡೆ ಸೇವಿಸಿ. ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸುವ ಔಷಧ ಸೇವನೆ ತಪ್ಪಿಸಿ.

  MORE
  GALLERIES

 • 78

  Uric Acid Problem: ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್​ ಮಟ್ಟ ಕಡಿಮೆಗೊಳಿಸಲು ಟ್ರೈ ಮಾಡಿ ಈ ನ್ಯಾಚುರಲ್ ಟಿಪ್ಸ್​!

  ತೂಕ ನಿಯಂತ್ರಣ ಮಾಡಿ. ತೂಕ ಹೆಚ್ಚಾದಂತೆ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚುತ್ತದೆ. ಹಾಗಾಗಿ ಸಾಮಾನ್ಯ ದೇಹದ ತೂಕ ಕಾಪಾಡಿ. ಗೌಟ್ ಅಥವಾ ಯೂರಿಕ್ ಆಸಿಡ್ ಮಟ್ಟ ನಿಯಂತ್ರಿಸಲು ಇದು ಸಹಕಾರಿ. ದೈಹಿಕ ಚಟುವಟಿಕೆ ಹೆಚ್ಚಿಸಿ, ಸಮತೋಲಿತ ಆಹಾರ ಸೇವಿಸಿ ಮತ್ತು ಪೌಷ್ಟಿಕಾಂಶ-ಭರಿತ ಪದಾರ್ಥ ಸೇವಿಸಿ.

  MORE
  GALLERIES

 • 88

  Uric Acid Problem: ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್​ ಮಟ್ಟ ಕಡಿಮೆಗೊಳಿಸಲು ಟ್ರೈ ಮಾಡಿ ಈ ನ್ಯಾಚುರಲ್ ಟಿಪ್ಸ್​!

  ಗೌಟ್ ಸಮಸ್ಯೆಯಿದ್ದರೆ ಅದು ಮಧುಮೇಹದ ಅಪಾಯ ಹೆಚ್ಚಿಸುತ್ತದೆ. ಅಧಿಕ ತೂಕ ಮತ್ತು ಅಧಿಕ ಕೊಲೆಸ್ಟ್ರಾಲ್ ನಿಯಂತ್ರಿಸಿ. ಮಧುಮೇಹದಿಂದ ಬಳಲುತ್ತಿರುವವರು ಅಪಾಯಕಾರಿ. ವಿಟಮಿನ್ ಸಿ ಸೇವನೆ ಮಾಡಿ. ಕಿತ್ತಳೆ, ಚೆರ್ರಿ, ಸ್ಟ್ರಾಬೆರಿ, ನಿಂಬೆಹಣ್ಣು ದೈನಂದಿನ ಆಹಾರದಲ್ಲಿ ಸೇರಿಸಿ.

  MORE
  GALLERIES