ಯೂರಿಕ್ ಆಮ್ಲವು ದೇಹದಲ್ಲಿನ ಪ್ಯೂರಿನ್ ವಿಭಜನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನ. ನೀವು ಸೇವಿಸುವ ಆಹಾರದಿಂದ ಪ್ಯೂರಿನ್‌ಗಳು ದೇಹಕ್ಕೆ ಸೇರುತ್ತವೆ. ಯೂರಿಕ್ ಆಮ್ಲವು ರಕ್ತದಲ್ಲಿ ಸಂಗ್ರಹ ಆಗುತ್ತದೆ. ಈ ಕೊಳಕು ವಸ್ತುವು ಮೂತ್ರದ ಮೂಲಕ ಹೊರ ಬರುತ್ತದೆ. ಆದರೆ ಕೀಲುಗಳಲ್ಲಿ ಇದು ಸಂಗ್ರಹವಾಗಿ ಸಣ್ಣ ಕಲ್ಲುಗಳ ರೂಪವನ್ನು ಪಡೆಯುತ್ತದೆ. ರಕ್ತದಲ್ಲಿ ಯೂರಿಕ್ ಆಮ್ಲ ಹೆಚ್ಚಿದರೆ ಇದು ಗೌಟ್ ಸಮಸ್ಯೆ ಹೆಚ್ಚಿಸುತ್ತದೆ. ಕಿಡ್ನಿಯಲ್ಲಿ ಕಲ್ಲು ಆಗುತ್ತದೆ.
ಹಣ್ಣಿನ ರಸ. ಫ್ರಕ್ಟೋಸ್ ಮತ್ತು ಸಕ್ಕರೆಯ ಪಾನೀಯಗಳು ಯೂರಿಕ್ ಆಮ್ಲವನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಗೌಟ್ ಕಾಯಿಲೆಯ ತೀವ್ರತೆ ಹೆಚ್ಚಿಸಬಹುದು. ಹಣ್ಣಿನ ರಸದಲ್ಲಿ ಪ್ಯೂರಿನ್ ಪ್ರಮಾಣವು ಹೆಚ್ಚಿಲ್ಲ. ಆದರೆ ಫ್ರಕ್ಟೋಸ್ನ ಕಾರಣ ಇದು ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸಬಹುದು. ಇವು ದೇಹದಲ್ಲಿ ಸೆಲ್ಯುಲಾರ್ ಪ್ರಕ್ರಿಯೆ ಸಕ್ರಿಯಗೊಳಿಸುವ ಮೂಲಕ ಯೂರಿಕ್ ಆಮ್ಲ ಹೆಚ್ಚಿಸುತ್ತವೆ.
ಬ್ರೆಡ್ ಮತ್ತು ಅಕ್ಕಿ. ಗೌಟ್ ಸಮಯದಲ್ಲಿ ಬಿಳಿ ಬ್ರೆಡ್, ಕೇಕ್, ಬಿಳಿ ಅಕ್ಕಿ, ಸಕ್ಕರೆ ಮತ್ತು ಕುಕೀಗಳಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸೇವಿಸಬಾರದು. ಈ ಆಹಾರಗಳಲ್ಲಿ ಪ್ಯೂರಿನ್ ಅಥವಾ ಫ್ರಕ್ಟೋಸ್ ಹೆಚ್ಚಿಲ್ಲ. ಆದರೆ ಅವುಗಳಲ್ಲಿ ಪೌಷ್ಟಿಕಾಂಶದ ಮೌಲ್ಯವು ಕಡಿಮೆ. ಸಂಸ್ಕರಿತ ಆಹಾರ ತಿಂಡಿಗಳು, ಹೆಪ್ಪುಗಟ್ಟಿದ ಊಟಗಳು ಸೇವನೆ ತಪ್ಪಿಸಿ. ಇದು ಕೀಲುಗಳಲ್ಲಿ ಸಂಧಿವಾತದ ಸಮಸ್ಯೆ ಹೆಚ್ಚಿಸಬಹುದು.