Blood Purify: ರಕ್ತವನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನಗಳು ಹೀಗಿವೆ!

ಸದೃಢ ಆರೋಗ್ಯ ಹೊಂದಲು ರಕ್ತವು ಶುದ್ಧವಾಗಿರಬೇಕು. ಹೌದು ದೇಹದಲ್ಲಿ ರಕ್ತದ ಕೊರತೆ ಆಗಬಾರದು ಜೊತೆಗೆ ರಕ್ತವು ಶುದ್ಧವಾಗಿಬೇಕು. ರಕ್ತವು ಅಶುದ್ಧವಾಗಿದ್ದರೆ ಅದು ದೇಹದ ಅಂಗಗಳನ್ನು ಹಾನಿಗೊಳಿಸುತ್ತದೆ. ನಾವು ತಿನ್ನುವ ಮತ್ತು ಕುಡಿಯುವ ಆಹಾರವು ರಕ್ತದ ಆರೋಗ್ಯದ ಮೇಲೆ ಉತ್ತಮ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ಆಹಾರ ಮತ್ತು ಪಾನೀಯದಲ್ಲಿನ ರಾಸಾಯನಿಕಗಳು ನರಗಳ ಹಾನಿಗೆ ಕಾರಣವಾಗುತ್ತದೆ. ಹಾಗಾಗಿ ರಕ್ತವನ್ನು ನೈಸರ್ಗಿಕವಾಗಿ ಶುದ್ಧಗೊಳಿಸುವುದು ಹೇಗೆಂದು ನೋಡೋಣ.

First published:

  • 18

    Blood Purify: ರಕ್ತವನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನಗಳು ಹೀಗಿವೆ!

    ರಕ್ತವು ಅಶುದ್ಧವಾಗಿದ್ದರೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಷಕಾರಿ ಅಂಶಗಳು ರಕ್ತವನ್ನು ಅಶುದ್ಧವಾಗಿಸುತ್ತವೆ. ನರಗಳ ಹಾನಿಗೆ ಕಾರಣವಾಗುತ್ತದೆ. ಜೊತೆಗೆ ಅಶುದ್ಧ ರಕ್ತವು ಕೊಲೆಸ್ಟ್ರಾಲ್ ಅಪಾಯ ಹೆಚ್ಚಿಸುತ್ತದೆ. ಇದು ಮೂತ್ರಪಿಂಡ ಮತ್ತು ಯಕೃತ್ತಿನ ಸೋಂಕಿಗೂ ಕಾರಣವಾಗುತ್ತದೆ. ಹಾಗಾಗಿ ರಕ್ತವನ್ನು ಶುದ್ಧಗೊಳಿಸುವುದು ತುಂಬಾ ಮುಖ್ಯ.

    MORE
    GALLERIES

  • 28

    Blood Purify: ರಕ್ತವನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನಗಳು ಹೀಗಿವೆ!

    ರಕ್ತವನ್ನು ಶುದ್ಧೀಕರಿಸುವತ್ತ ಪ್ರತಿಯೊಬ್ಬರೂ ಗಮನಹರಿಸುವುದು ಮುಖ್ಯ. ರಕ್ತ ಶುದ್ಧವಾಗಿಟ್ಟುಕೊಳ್ಳುವುದು ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ. ಕೆಟ್ಟ ರಕ್ತವು ಬಾಹ್ಯ ಮತ್ತು ಆಂತರಿಕ ಅಂಗಗಳನ್ನು ಹಾನಿಗೊಳಿಸುತ್ತದೆ. ಆಹಾರ ಮತ್ತು ಪಾನೀಯ ಅಭ್ಯಾಸ ಚೆನ್ನಾಗಿಟ್ಟುಕೊಳ್ಳಿ. ಕಬ್ಬಿಣ, ವಿಟಮಿನ್ ಸಿ ಮತ್ತು ಇತರ ಅಗತ್ಯ ಪೋಷಕಾಂಶ ಸಮೃದ್ಧ ಆಹಾರ ಸೇವಿಸಿ.

    MORE
    GALLERIES

  • 38

    Blood Purify: ರಕ್ತವನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನಗಳು ಹೀಗಿವೆ!

    ರಕ್ತದ ಶುದ್ಧೀಕರಣಕ್ಕೆ ಉತ್ತಮ ಆಹಾರ ಸೇವನೆ ಸಹಕಾರಿ. ಇದು ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚಿಸುತ್ತದೆ. ಆಮ್ಲಜನಕದ ಹರಿವು ಸುಧಾರಿಸುತ್ತದೆ. ಇನ್ನು ಕೆಟ್ಟ ರಕ್ತದ ಲಕ್ಷಣಗಳೆಂದರೆ ಆಗಾಗ್ಗೆ ಜ್ವರ ಬರುವುದು, ಹೃದಯ ಬಡಿತ ಹೆಚ್ಚುತ್ತದೆ, ಉಸಿರಾಟ ತೊಂದರೆ ಉಂಟಾಗುತ್ತದೆ, ಚರ್ಮದ ಮೇಲೆ ಕೆಂಪು ದದ್ದುಗಳಾಗುವ ಲಕ್ಷಣಗಳು ಗೋಚರಿಸುತ್ತವೆ.

    MORE
    GALLERIES

  • 48

    Blood Purify: ರಕ್ತವನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನಗಳು ಹೀಗಿವೆ!

    ರಕ್ತ ಶುದ್ಧೀಕರಿಸಲು ಹಸಿರು ಎಲೆಗಳ ತರಕಾರಿ ಸೇವನೆ ಹೆಚ್ಚಿಸಿ. ಆಹಾರದಲ್ಲಿ ಕೋಸುಗಡ್ಡೆ ಮತ್ತು ಪಾಲಕ ಸೇರಿದಂತೆ ಹಸಿರು ಎಲೆಗಳ ತರಕಾರಿ ಸೇರಿಸಿ ಸೇವಿಸಿ. ಇದು ಕಬ್ಬಿಣ ಮತ್ತು ಕ್ಯಾಲ್ಸಿಯಂ ಜೊತೆಗೆ ಎಲ್ಲಾ ಅಗತ್ಯ ಪೋಷಕಾಂಶವನ್ನು ದೇಹಕ್ಕೆ ಒದಗಿಸುತ್ತದೆ.

    MORE
    GALLERIES

  • 58

    Blood Purify: ರಕ್ತವನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನಗಳು ಹೀಗಿವೆ!

    ನಿಂಬೆ ರಸ ಸೇವಿಸಿ. ಇದು ರಕ್ತ ಮತ್ತು ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಸೇವನೆ ಮಾಡಿದರೆ ದೇಹದಿಂದ ವಿಷ ಹೊರಗೆ ಹೋಗುತ್ತದೆ. ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆಹಣ್ಣನ್ನು ಹಿಂಡಿ ಮತ್ತು ಬೆಳಗಿನ ಉಪಾಹಾರಕ್ಕೆ ಮೊದಲು ಸೇವಿಸಿ.

    MORE
    GALLERIES

  • 68

    Blood Purify: ರಕ್ತವನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನಗಳು ಹೀಗಿವೆ!

    ಕಿತ್ತಳೆ ರಸ, ಒಣದ್ರಾಕ್ಷಿ ಮತ್ತು ಜೇನುತುಪ್ಪ ಸೇವನೆ ಮಾಡಿ. ಇದು ಕಬ್ಬಿಣ ಮತ್ತು ಪ್ರೋಟೀನ್ ನ್ನು ದೇಹಕ್ಕೆ ಒದಗಿಸುತ್ತದೆ. ಈ ವಸ್ತುಗಳ ನಿಯಮಿತ ಸೇವನೆಯು ರಕ್ತ ಶುದ್ಧೀಕರಿಸಲು ಮತ್ತು ಕಬ್ಬಿಣದ ಕೊರತೆ ನಿವಾರಿಸಲು ಸಹಕಾರಿ.

    MORE
    GALLERIES

  • 78

    Blood Purify: ರಕ್ತವನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನಗಳು ಹೀಗಿವೆ!

    ಗೋಧಿ ಹುಲ್ಲಿನ ರಸ ಸೇವಿಸಿ. ಇದು ಯಾವುದೇ ರಕ್ತ ಸಂಬಂಧಿ ಕಾಯಿಲೆ, ರಕ್ತದ ಕೊರತೆ, ನಿವಾರಿಸುತ್ತದೆ. ತೋಫು ಮತ್ತು ಕಿಡ್ನಿ ಬೀನ್ಸ್ ಸೇವಿಸಿ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ.

    MORE
    GALLERIES

  • 88

    Blood Purify: ರಕ್ತವನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನಗಳು ಹೀಗಿವೆ!

    ಆಯುರ್ವೇದ ಗಿಡಮೂಲಿಕೆಗಳಾದ ಅಮಲಕಿ ಮತ್ತು ಗುಡುಚಿ ಹಾಗೂ ಇತರೆ ಪದಾರ್ಥ ಸೇವಿಸಿ. ಇವುಗಳು ಆಯುರ್ವೇದದಲ್ಲಿ ಔಷಧಿಗಳೆಂದು ಪರಿಗಣಿಸಲಾಗಿದೆ. ಇದು ರಕ್ತ ಶುದ್ಧೀಕರಿಸುತ್ತದೆ. ಸೇಬು, ಆವಕಾಡೊ ಸೇವಿಸಿ. ಇದು ರಕ್ತದಲ್ಲಿ ಸಂಗ್ರಹವಾಗಿರುವ ಕೊಳೆ ತೆಗೆದು ಹಾಕುತ್ತದೆ.

    MORE
    GALLERIES