ಪ್ರತೀ ವರ್ಷ ಮೇ 17 ರಂದು ವಿಶ್ವ ಅಧಿಕ ರಕ್ತದೊತ್ತಡ ದಿನ ಆಚರಣೆ ಮಾಡಲಾಗುತ್ತದೆ. ಪ್ರಪಂಚದಾದ್ಯಂತ ಒಂದು ಶತಕೋಟಿಗೂ ಹೆಚ್ಚು ಜನರು ರಕ್ತದೊತ್ತಡ ಸಮಸ್ಯೆ ಎದುರಿಸುತ್ತಾರೆ. ರಕ್ತದೊತ್ತಡ ಕಾಯಿಲೆಯು ಹೃದಯ ಕಾಯಿಲೆ, ಪರಿಧಮನಿಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ. ರಕ್ತದೊತ್ತಡ ಸಮಸ್ಯೆಯಲ್ಲಿ ರಕ್ತವು ಅಪಧಮನಿಗಳ ಗೋಡೆಗಳಲ್ಲಿ ಒತ್ತಡ ಉಂಟು ಮಾಡುತ್ತದೆ.
ಜೀವಕೋಶಗಳಿಂದ ವಿಷ ಮತ್ತು ತ್ಯಾಜ್ಯ ಹೊರ ಹಾಕುತ್ತದೆ. ರಕ್ತದೊತ್ತಡವು ಸಮಸ್ಯೆ ಉಂಟು ಮಾಡುತ್ತದೆ. ಕಾಫಿ ಸೇವನೆಯು ರಕ್ತದೊತ್ತಡ ಸಮಸ್ಯೆ ಹೆಚ್ಚಿಸುತ್ತದೆ. ಕಾಫಿಯಲ್ಲಿ ಹೆಚ್ಚಿನ ಕೆಫೀನ್ ಇದೆ. ಸಕ್ಕರೆ ಮಿಶ್ರಿತ ಕಾಫಿಯು ದೇಹಕ್ಕೆ ಹಾನಿ ಮಾಡುತ್ತದೆ. ರಕ್ತದೊತ್ತಡ ಸಮಸ್ಯೆ ಹೆಚ್ಚು ಮಾಡುತ್ತದೆ. ಕೆಫೀನ್ ರಕ್ತನಾಳಗಳ ಗಾತ್ರ ಕಡಿಮೆ ಮಾಡುವ ಮೂಲಕ ರಕ್ತದೊತ್ತಡ ಸಮಸ್ಯೆ ಹೆಚ್ಚಿಸುತ್ತದೆ.