ರಕ್ತದಾನಕ್ಕೂ ಮುನ್ನ ಮಾಡುವ ಪರೀಕ್ಷೆಯಿಂದ ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಮಾಹಿತಿ ಸಿಗುತ್ತೆ. ನಿಮ್ಮ ರಕ್ತದೊತ್ತಡ, ಹಿಮೋಗ್ಲೋಬಿನ್ ಮತ್ತು ನಾಡಿಮಿಡಿತವನ್ನು ಪರಿಶೀಲಿಸಲಾಗುತ್ತದೆ. ಈ ಪ್ರಮುಖ ಮಾಹಿತಿಯನ್ನು ರೆಡ್ ಕ್ರಾಸ್ ರಕ್ತದಾನ ಕೇಂದ್ರಗಳು ವ್ಯಕ್ತಿಯ ಆನ್ ಲೈನ್ ದಾನಿ ಪ್ರೊಫೈಲ್ ನಲ್ಲಿ ದಾಖಲಿಸುತ್ತವೆ. ಇದರಿಂದ ನಿಮ್ಮ ಆರೋಗ್ಯದ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು.
ಜೀವ ಉಳಿಸಲು ಸಹಾಯ ಮಾಡಿದಂತೆ: ರಕ್ತದಾನ ಮಾಡಿದ ನಂತರ, ನಿಮ್ಮ ರಕ್ತವನ್ನು ಕೆಂಪು ರಕ್ತ ಕಣಗಳು, ಪ್ಲೇಟ್ ಲೆಟ್ ಗಳು, ಪ್ಲಾಸ್ಮಾಗಳಾಗಿ ಬೇರ್ಪಡಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಬದುಕಲು ಹೆಣಗಾಡುತ್ತಿರುವ ವ್ಯಕ್ತಿಗೆ ರಕ್ತ ವರ್ಗಾವಣೆ ಬೇಕಾಗಬಹುದು. ಆದ್ದರಿಂದ ಆ ಸಮಯದಲ್ಲಿ ನಿಮ್ಮ ರಕ್ತವನ್ನು ರೋಗಿಗೆ ಬಳಸಬಹುದು. ನಿಮ್ಮ ಸಮಯ ಮತ್ತು ರಕ್ತವನ್ನು ಅಗತ್ಯವಿರುವವರಿಗೆ ದಾನ ಮಾಡುತ್ತಿದ್ದೀರಿ ಎಂದು ನೀವು ಅರಿತುಕೊಂಡಾಗ ಅದು ನಿಮಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ.