Skin Care: ಬ್ಲೀಚ್ ಬರ್ನ್ ಸಮಸ್ಯೆಯಾದರೆ ಹೀಗೆ ಕೇರ್ ಮಾಡಿ!

ಸಾಮಾನ್ಯವಾಗಿ ಚರ್ಮ, ಕೂದಲಿನ ಬಣ್ಣವನ್ನು ಹಗುರಗೊಳಿಸಲು ಬ್ಲೀಚ್ ಮಾಡ್ತಾರೆ. ಇನ್ನು ಚರ್ಮದ ಡಾರ್ಕ್ ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡೋಕೂ ಸಹ ಬ್ಲೀಚ್ ಮಾಡಲಾಗುತ್ತದೆ. ಬ್ಲೀಚ್ ಒಂದು ಸಂಯುಕ್ತ. ಇದನ್ನು ಚರ್ಮ ಮತ್ತು ಕೂದಲಿನ ಸ್ವಚ್ಛತೆಗೆ ಹಾಗೂ ಸೋಂಕು ನಿವಾರಣೆಗೆ ಬಳಸುತ್ತಾರೆ. ಇದನ್ನು ಅತಿಯಾಗಿ ಬಳಸಿದರೆ ಬ್ಲೀಚ್ ಬರ್ನ್ ಆಗುತ್ತದೆ.

First published:

  • 18

    Skin Care: ಬ್ಲೀಚ್ ಬರ್ನ್ ಸಮಸ್ಯೆಯಾದರೆ ಹೀಗೆ ಕೇರ್ ಮಾಡಿ!

    ಚರ್ಮ ಮತ್ತು ಕೂದಲಿನ ಬ್ಯಾಕ್ಟೀರಿಯಲ್ ಸೋಂಕು ನಿವಾರಕವಾಗಿ ಬ್ಲೀಚ್ ಮಾಡಲಾಗುತ್ತದೆ. ಇವು ಹೆಚ್ಚಿನ ರೀತಿಯ ವೈರಸ್, ಬ್ಯಾಕ್ಟೀರಿಯಾ, ಫಂಗಸ್ ಸಮಸ್ಯೆ ನಿವಾರಿಸುತ್ತದೆ. ಅಧಿಕವಾಗಿ ಬ್ಲೀಚ್ ಮಾಡುವುದು ಸಹ ಹಾನಿಕರ. ಇದು ಚರ್ಮ ಸುಡಲು ಕಾರಣವಾಗುತ್ತದೆ.

    MORE
    GALLERIES

  • 28

    Skin Care: ಬ್ಲೀಚ್ ಬರ್ನ್ ಸಮಸ್ಯೆಯಾದರೆ ಹೀಗೆ ಕೇರ್ ಮಾಡಿ!

    ಬ್ಲೀಚ್ ಬರ್ನ್ ಉಂಟಾದರೆ ಅದನ್ನು ಹೇಗೆ ಗುಣಪಡಿಸುವುದು? ಬ್ಲೀಚ್ ಬರ್ನ್ ಎಂದರೇನು? ಬ್ಲೀಚ್ ನ್ನು ಅಧಿಕವಾಗಿ ಬಳಸಿದರೆ, ಇತರ ರಾಸಾಯನಿಕಗಳ ಜೊತೆ ಇದು ಪ್ರತಿಕ್ರಿಯಿಸಿದರೆ ಚರ್ಮವು ಸುಡುತ್ತದೆ. ಆಗ ಚರ್ಮದ ಮೇಲೆ ಕೆಂಪು ದದ್ದುಗಳು ಆಗುತ್ತವೆ. ಇದು ಗಂಭೀರ ಚರ್ಮದ ಹಾನಿ ಮಾಡುತ್ತದೆ.

    MORE
    GALLERIES

  • 38

    Skin Care: ಬ್ಲೀಚ್ ಬರ್ನ್ ಸಮಸ್ಯೆಯಾದರೆ ಹೀಗೆ ಕೇರ್ ಮಾಡಿ!

    ಹಾಗಾಗಿ ಬ್ಲೀಚ್ ಬಳಸುವ ಮೊದಲು, ಅದರ ಪ್ರಮಾಣದ ಬಗ್ಗೆ ಸರಿಯಾಗಿ ತಿಳಿದಿರಬೇಕು. ಬ್ಲೀಚ್ ಮಾಡುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬ್ಲೀಚ್ ಬರ್ನ್ಸ್‌ನಿಂದ ನೋವು, ಕೆಂಪು ಮತ್ತು ಊತ ಉಂಟಾಗುತ್ತದೆ. ಬ್ಲೀಚ್ ಬರ್ನ್ಸ್ ಸಾಮಾನ್ಯ ಸುಟ್ಟಗಾಯದಂತೆ ಕಾಣುತ್ತದೆ. ಊತ, ಗುಳ್ಳೆಗಳು ಚರ್ಮದ ಹಾನಿಗೆ ಕಾರಣವಾಗುತ್ತದೆ.

    MORE
    GALLERIES

  • 48

    Skin Care: ಬ್ಲೀಚ್ ಬರ್ನ್ ಸಮಸ್ಯೆಯಾದರೆ ಹೀಗೆ ಕೇರ್ ಮಾಡಿ!

    ಬ್ಲೀಚ್ ಬರ್ನ್ ಕಡಿಮೆ ಮಾಡಲು ಬ್ಲೀಚ್ ಬರ್ನ್ ಅನ್ನು ತೊಳೆಯಿರಿ. ಸುಟ್ಟ ಪ್ರದೇಶ ಮತ್ತು ಅದರ ಸುತ್ತಲಿನ ಪ್ರದೇಶವನ್ನು ಚೆನ್ನಾಗಿ ತೊಳೆಯಿರಿ. ಇದಕ್ಕಾಗಿ ಮೃದುವಾದ ಮತ್ತು ಔಷಧೀಯ ಸೋಪ್ ಬಳಸಿ. ಸೋಂಕನ್ನು ತಡೆಗಟ್ಟಲು ನಾನ್-ಸ್ಟಿಕ್ ಬ್ಯಾಂಡೇಜ್ ಸುತ್ತಿರಿ. ಧೂಳು, ಕೊಳಕು ಮತ್ತು ಇತರ ಸೋಂಕುಗಳಿಂದ ರಕ್ಷಿಸುತ್ತದೆ.

    MORE
    GALLERIES

  • 58

    Skin Care: ಬ್ಲೀಚ್ ಬರ್ನ್ ಸಮಸ್ಯೆಯಾದರೆ ಹೀಗೆ ಕೇರ್ ಮಾಡಿ!

    ಉರಿಯೂತದ ಔಷಧ ಬಳಕೆ ಮಾಡಿ. ಬ್ಲೀಚ್ ಬರ್ನ್ ನೋವಿನಿಂದ ಕೂಡಿದೆ. ಐಬುಪ್ರೊಫೇನ್, ನ್ಯಾಪ್ರೋಕ್ಸೆನ್ ಮುಂತಾದ ಸ್ಟಿರಾಯ್ಡ್ ಅಲ್ಲದ ಉಯೂತದ ಔಷಧದ ಪೂರಕ ಸೇವಿಸಬಹುದು. ಮೊದಲು ವೈದ್ಯರನ್ನು ಸಂಪರ್ಕಿಸಿ, ನಂತರ ಪೂರಕ ಸೇವಿಸಿ.

    MORE
    GALLERIES

  • 68

    Skin Care: ಬ್ಲೀಚ್ ಬರ್ನ್ ಸಮಸ್ಯೆಯಾದರೆ ಹೀಗೆ ಕೇರ್ ಮಾಡಿ!

    ಗುಳ್ಳೆಗಳಿಗೆ ನಿಯೋಸ್ಪೊರಿನ್ ಕ್ರೀಮ್ ಅನ್ನು ಅನ್ವಯಿಸಿ. ಇದು ಬ್ಲೀಚ್ ಬರ್ನ್ಸ್ ಸಂಪೂರ್ಣವಾಗಿ ಗುಣವಾಗಲು ಸಹಾಯ ಮಾಡುತ್ತದೆ. ಈ ಅವಧಿಯಲ್ಲಿ ಸುಟ್ಟ ಗಾಯದ ಮೇಲೆ ಗುಳ್ಳೆಗಳು ಉಂಟಾಗಬಹುದು. ಪಾಪ್ ಮಾಡಬೇಡಿ. ಈ ಗುಳ್ಳೆಗಳು ಒಡೆದರೆ ಸೋಂಕಿಗೆ ಕಾರಣವಾಗಬಹುದು.

    MORE
    GALLERIES

  • 78

    Skin Care: ಬ್ಲೀಚ್ ಬರ್ನ್ ಸಮಸ್ಯೆಯಾದರೆ ಹೀಗೆ ಕೇರ್ ಮಾಡಿ!

    ಬ್ಲೀಚ್ ಬರ್ನ್‌ ಸಮಸ್ಯೆ ನಿವಾರಣೆಗೆ ಅಲೋವೆರಾ ಬಳಸಿ. ಇದು ಗಾಯವು ಬೇಗ ಮಾಯವಾಗಲು ಸಹಾಯ ಮಾಡುತ್ತದೆ. ಅಲೋವೆರಾವನ್ನು ಬ್ಲೀಚ್ ಬರ್ನ್ಸ್‌ ಉಂಟಾದಾಗ ಅನ್ವಯಿಸಬಹುದು. ಸುಟ್ಟ ಪ್ರದೇಶವನ್ನು ತೊಳೆದ ನಂತರ ಅಲೋವೆರಾ ಜೆಲ್ ಹಚ್ಚಿರಿ.

    MORE
    GALLERIES

  • 88

    Skin Care: ಬ್ಲೀಚ್ ಬರ್ನ್ ಸಮಸ್ಯೆಯಾದರೆ ಹೀಗೆ ಕೇರ್ ಮಾಡಿ!

    ಅಲೋವೆರಾ ಜೆಲ್ ಹಚ್ಚಿದ ನಂತರ ಬ್ಯಾಂಡೇಜ್ ಸುತ್ತಿರಿ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಅಲೋವೆರಾ ಸುಟ್ಟಗಾಯವನ್ನು ತ್ವರಿತವಾಗಿ ಗುಣಪಡಿಸುತ್ತದೆ. ಐಸ್ ಪ್ಯಾಕ್‌ ಅನ್ವಯಿಸಬಹುದು. ತಂಪಾದ ನೀರು ಸಹ ಹಾಕಬಹುದು.

    MORE
    GALLERIES