Black Sesame Seeds: ಕಪ್ಪು ಎಳ್ಳು ತಿಂದು ಒಳ್ಳೆ ಆರೋಗ್ಯ ಪಡೆಯಿರಿ! ಟೇಸ್ಟಿ ಚಿಕ್ಕಿ ತಯಾರಿಸೋ ವಿಧಾನ ಇಲ್ಲಿದೆ

ಕಪ್ಪು ಎಳ್ಳನ್ನು ರೊಟ್ಟಿ, ಸಿಹಿ ಪದಾರ್ಥ ಮತ್ತು ಚಿಕ್ಕಿ ಮಾಡುವಾಗ ಬಳಕೆ ಮಾಡ್ತಾರೆ. ಕಪ್ಪು ಎಳ್ಳನ್ನು ಇತರೆ ಪದಾರ್ಥಗಳೊಂದಿಗೆ ಬೆರೆಸಿ ಚಿಕ್ಕಿ ತಯಾರಿಸುತ್ತಾರೆ. ಇದು ಟೇಸ್ಟಿ ಮತ್ತು ಪೌಷ್ಟಿಕವಾಗಿದೆ. ಕಪ್ಪು ಎಳ್ಳು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಅದರ ಬಗ್ಗೆ ತಿಳಿಯೋಣ.

First published:

  • 18

    Black Sesame Seeds: ಕಪ್ಪು ಎಳ್ಳು ತಿಂದು ಒಳ್ಳೆ ಆರೋಗ್ಯ ಪಡೆಯಿರಿ! ಟೇಸ್ಟಿ ಚಿಕ್ಕಿ ತಯಾರಿಸೋ ವಿಧಾನ ಇಲ್ಲಿದೆ

    ಕಪ್ಪು ಎಳ್ಳು ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ಸೇವನೆ ಮಕ್ಕಳು ಮತ್ತು ದೊಡ್ಡವರಿಗೂ ಪ್ರಯೋಜನಕಾರಿ. ತಾಮ್ರ, ಕಬ್ಬಿಣ, ಸೆಲೆನಿಯಮ್, ವಿಟಮಿನ್ ಬಿ6 ಮತ್ತು ವಿಟಮಿನ್ ಇ ಸೇರಿ ಹಲವು ಪೋಷಕಾಂಶಗಳಿಂದ ಕಪ್ಪು ಎಳ್ಳು ಸಮೃದ್ಧವಾಗಿದೆ.

    MORE
    GALLERIES

  • 28

    Black Sesame Seeds: ಕಪ್ಪು ಎಳ್ಳು ತಿಂದು ಒಳ್ಳೆ ಆರೋಗ್ಯ ಪಡೆಯಿರಿ! ಟೇಸ್ಟಿ ಚಿಕ್ಕಿ ತಯಾರಿಸೋ ವಿಧಾನ ಇಲ್ಲಿದೆ

    ಕಪ್ಪು ಎಳ್ಳಿನ ಸೇವನೆಯಿಂದ ದೇಹಕ್ಕೆ ಸಿಗುವ ಪ್ರಮುಖ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಇದು ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿರಿಸುತ್ತದೆ. ಎಳ್ಳು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲ. ಇದರಲ್ಲಿ ಪೈನರೇಶನ್ ಸಂಯುಕ್ತಗಳಿವೆ. ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

    MORE
    GALLERIES

  • 38

    Black Sesame Seeds: ಕಪ್ಪು ಎಳ್ಳು ತಿಂದು ಒಳ್ಳೆ ಆರೋಗ್ಯ ಪಡೆಯಿರಿ! ಟೇಸ್ಟಿ ಚಿಕ್ಕಿ ತಯಾರಿಸೋ ವಿಧಾನ ಇಲ್ಲಿದೆ

    ಕಪ್ಪು ಎಳ್ಳು ಕ್ಯಾನ್ಸರ್ ವಿರೋಧಿ ಅಂಶಗಳನ್ನು ಹೊಂದಿದೆ. ಎಳ್ಳು ಮತ್ತು ಸೆಸಮಿನ್ ಸಂಯುಕ್ತಗಳು ಕಪ್ಪು ಎಳ್ಳಿನಲ್ಲಿವೆ. ಈ ಸಂಯುಕ್ತಗಳು ತಮ್ಮ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳಿಂದ ಗಡ್ಡೆಗಳನ್ನು ತಡೆಯುತ್ತವೆ. ಸೆಸಮಾಲ್ ಮತ್ತು ಸೆಸಮಿನ್ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ.

    MORE
    GALLERIES

  • 48

    Black Sesame Seeds: ಕಪ್ಪು ಎಳ್ಳು ತಿಂದು ಒಳ್ಳೆ ಆರೋಗ್ಯ ಪಡೆಯಿರಿ! ಟೇಸ್ಟಿ ಚಿಕ್ಕಿ ತಯಾರಿಸೋ ವಿಧಾನ ಇಲ್ಲಿದೆ

    ಕಪ್ಪು ಎಳ್ಳು ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಕಪ್ಪು ಎಳ್ಳು ತಾಮ್ರ, ಕಬ್ಬಿಣ, ಸೆಲೆನಿಯಮ್, ವಿಟಮಿನ್ B6 ಮತ್ತು ವಿಟಮಿನ್ ಇ ಯ ಅತ್ಯುತ್ತಮ ಮೂಲ. ಇದು ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಎಳ್ಳು ಬಿಳಿ ರಕ್ತ ಕಣಗಳ ಉತ್ಪಾದನೆಗೆ ಉತ್ತೇಜಿಸುತ್ತದೆ. ದೇಹವು ಸೋಂಕನ್ನು ಉಂಟು ಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಸಹಕಾರಿ.

    MORE
    GALLERIES

  • 58

    Black Sesame Seeds: ಕಪ್ಪು ಎಳ್ಳು ತಿಂದು ಒಳ್ಳೆ ಆರೋಗ್ಯ ಪಡೆಯಿರಿ! ಟೇಸ್ಟಿ ಚಿಕ್ಕಿ ತಯಾರಿಸೋ ವಿಧಾನ ಇಲ್ಲಿದೆ

    ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡುತ್ತದೆ ಕಪ್ಪು ಎಳ್ಳು. ಕಪ್ಪು ಎಳ್ಳು ಕೊಬ್ಬಿನಾಮ್ಲಗಳು, ಕಬ್ಬಿಣ, ಸತು ಮತ್ತು ಉತ್ಕರ್ಷಣ ನಿರೋಧಕ ಹೊಂದಿದೆ. ಇದು ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ. ಕಪ್ಪು ಎಳ್ಳಿನ ಸೇವನೆಯು ಕೂದಲು ಉದುರುವಿಕೆ ನಿಯಂತ್ರಿಸುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ತಡೆಯುತ್ತದೆ.

    MORE
    GALLERIES

  • 68

    Black Sesame Seeds: ಕಪ್ಪು ಎಳ್ಳು ತಿಂದು ಒಳ್ಳೆ ಆರೋಗ್ಯ ಪಡೆಯಿರಿ! ಟೇಸ್ಟಿ ಚಿಕ್ಕಿ ತಯಾರಿಸೋ ವಿಧಾನ ಇಲ್ಲಿದೆ

    ಕಪ್ಪು ಎಳ್ಳು ಮೂಳೆಗಳನ್ನು ಬಲಪಡಿಸುತ್ತದೆ. ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ಸತು ಅಂಶಗಳಿಂದ ಸಮೃದ್ಧ ಕಪ್ಪು ಎಳ್ಳು ಮೂಳೆಗಳ ಆರೋಗ್ಯ ಕಾಪಾಡುತ್ತದೆ. ಕಪ್ಪು ಎಳ್ಳಿನ ಚಿಕ್ಕಿ ತಯಾರಿಸಿ, ತಿನ್ನುವುದು ಆರೋಗ್ಯ ಚೆನ್ನಾಗಿಡಲು ಸಹಾಯ ಮಾಡುತ್ತದೆ. ಹೇಗೆ ಮಾಡುವುದು ನೋಡೋಣ.

    MORE
    GALLERIES

  • 78

    Black Sesame Seeds: ಕಪ್ಪು ಎಳ್ಳು ತಿಂದು ಒಳ್ಳೆ ಆರೋಗ್ಯ ಪಡೆಯಿರಿ! ಟೇಸ್ಟಿ ಚಿಕ್ಕಿ ತಯಾರಿಸೋ ವಿಧಾನ ಇಲ್ಲಿದೆ

    ಕಪ್ಪು ಎಳ್ಳಿನ ಚಿಕ್ಕಿ ಮಾಡಲು ಕಪ್ಪು ಎಳ್ಳು - 1 ಕಪ್, ಬಿಳಿ ಎಳ್ಳು - ¼ ಕಪ್, ಕತ್ತರಿಸಿದ ಬಾದಾಮಿ - ½ ಕಪ್, ಬೆಲ್ಲ - ½ ಕಪ್, ತುಪ್ಪ - 1 ಟೀಸ್ಪೂನ್ ಬೇಕು. ಮೊದಲು ಎಳ್ಳು ಮತ್ತು ಬಾದಾಮಿಯನ್ನು ಒಣಗಿಸಿ ಹುರಿದು ತಣ್ಣಗಾಗಿಸಿ. ನಂತರ ತಟ್ಟೆ ತೆಗೆದುಕೊಂಡು ಅದರಲ್ಲಿ 4 ರಿಂದ 5 ಹನಿ ತುಪ್ಪ ಹಾಕಿ. ಪ್ಲೇಟ್‌ ತುಂಬೆಲ್ಲಾ ಹರಡಿ.

    MORE
    GALLERIES

  • 88

    Black Sesame Seeds: ಕಪ್ಪು ಎಳ್ಳು ತಿಂದು ಒಳ್ಳೆ ಆರೋಗ್ಯ ಪಡೆಯಿರಿ! ಟೇಸ್ಟಿ ಚಿಕ್ಕಿ ತಯಾರಿಸೋ ವಿಧಾನ ಇಲ್ಲಿದೆ

    ನಂತರ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಮತ್ತು ಬೆಲ್ಲ ಸಂಪೂರ್ಣವಾಗಿ ಕರಗಲು ಬಿಡಿ. ಈಗ ಬೆಲ್ಲಕ್ಕೆ ಹುರಿದ ಎಳ್ಳು ಮತ್ತು ಬಾದಾಮಿ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ತುಪ್ಪ ಸವರಿದ ಪ್ಲೇಟ್‌ ನಲ್ಲಿ ತೆಗೆದುಕೊಂಡು 3 ಗಂಟೆ ಹಾಗೇ ಬಿಡಿ. ನಂತರ ಚಿಕ್ಕ ಪೀಸ್ ಗಳಾಗಿ ಕತ್ತರಿಸಿ. ತಿನ್ನಿರಿ.

    MORE
    GALLERIES