Cloudy Weather: ಮಳೆಯಲ್ಲಿ ಮಿಂದೇಳೋ ಆಸೆ ನಿಮಗಿದ್ಯಾ? ಹಾಗಿದ್ರೆ ಎಚ್ಚರ ಯಾಮಾರಿದ್ರೆ ಅಪಾಯ ಗ್ಯಾರಂಟಿ!

Rain Alert : ವಿಶೇಷವಾಗಿ ಕಪ್ಪು ಮೋಡಗಳಿರುವಾಗ ಜಾಗರೂಕರಾಗಿರಬೇಕು. ಏಕೆಂದರೆ ಬಿಳಿ ಮೋಡಗಳಿಗಿಂತ ಕಪ್ಪು ಮೋಡಗಳು ಹೆಚ್ಚು ಅಪಾಯಕಾರಿ. ಆ ಮೋಡಗಳು ಬ್ಯಾಕ್ಟೀರಿಯಾದಿಂದ ತುಂಬಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

First published:

  • 17

    Cloudy Weather: ಮಳೆಯಲ್ಲಿ ಮಿಂದೇಳೋ ಆಸೆ ನಿಮಗಿದ್ಯಾ? ಹಾಗಿದ್ರೆ ಎಚ್ಚರ ಯಾಮಾರಿದ್ರೆ ಅಪಾಯ ಗ್ಯಾರಂಟಿ!

    ಮಳೆ ಎಂದರೇನು? ಮಳೆಯಲ್ಲಿ ಏನಪ್ಪಾ ಇದೆ? ಕೇವಲ ಹನಿಗಳು ಮತ್ತು ನೀರು ಅಂತ ಭಾವಿಸಬೇಡಿ. ಇತ್ತೀಚಿನ ಸಂಶೋಧನೆಯ ಪ್ರಕಾರ ಇದರಲ್ಲಿ ಬ್ಯಾಕ್ಟೀರಿಯಾಗಳು ಅಡಗಿವೆ ಎಂಬ ಸತ್ಯ ಬಹಿರಂಗಗೊಂಡಿದೆ.

    MORE
    GALLERIES

  • 27

    Cloudy Weather: ಮಳೆಯಲ್ಲಿ ಮಿಂದೇಳೋ ಆಸೆ ನಿಮಗಿದ್ಯಾ? ಹಾಗಿದ್ರೆ ಎಚ್ಚರ ಯಾಮಾರಿದ್ರೆ ಅಪಾಯ ಗ್ಯಾರಂಟಿ!

    ಅದರಲ್ಲಿಯೂ ವಿಶೇಷವಾಗಿ ಕಪ್ಪು ಮೋಡಗಳಿರುವಾಗ ಜಾಗರೂಕರಾಗಿರಬೇಕು. ಏಕೆಂದರೆ ಬಿಳಿ ಮೋಡಗಳಿಗಿಂತ ಕಪ್ಪು ಮೋಡಗಳು ಹೆಚ್ಚು ಅಪಾಯಕಾರಿ. ಆ ಮೋಡಗಳು ಬ್ಯಾಕ್ಟೀರಿಯಾದಿಂದ ತುಂಬಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    MORE
    GALLERIES

  • 37

    Cloudy Weather: ಮಳೆಯಲ್ಲಿ ಮಿಂದೇಳೋ ಆಸೆ ನಿಮಗಿದ್ಯಾ? ಹಾಗಿದ್ರೆ ಎಚ್ಚರ ಯಾಮಾರಿದ್ರೆ ಅಪಾಯ ಗ್ಯಾರಂಟಿ!

    ಫ್ರಾನ್ಸ್ ಮತ್ತು ಕೆನಡಾದ ವಿಜ್ಞಾನಿಗಳು ಈ ಕಪ್ಪು ಮೋಡಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ದಾರೆ. ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ವಿಜ್ಞಾನ ಜರ್ನಲ್ ದಿ ಟೋಟಲ್ ಎನ್ವಿರಾನ್ಮೆಂಟ್ನ ಮಾರ್ಚ್ ಆವೃತ್ತಿಯಲ್ಲಿ ಪ್ರಕಟಿಸಿದ್ದಾರೆ.

    MORE
    GALLERIES

  • 47

    Cloudy Weather: ಮಳೆಯಲ್ಲಿ ಮಿಂದೇಳೋ ಆಸೆ ನಿಮಗಿದ್ಯಾ? ಹಾಗಿದ್ರೆ ಎಚ್ಚರ ಯಾಮಾರಿದ್ರೆ ಅಪಾಯ ಗ್ಯಾರಂಟಿ!

    ಮಧ್ಯ ಫ್ರಾನ್ಸ್ನ ಫ್ಯೂಡೆಡೋಮ್ ಜ್ವಾಲಾಮುಖಿಯ ಸಮೀಪವಿರುವ ಹವಾಮಾನ ಸಂಶೋಧನಾ ಕೇಂದ್ರ... ಸಮುದ್ರ ಮಟ್ಟದಿಂದ 4,806 ಅಡಿ ಎತ್ತರದಲ್ಲಿದೆ. ಈ ಕಪ್ಪು ಮೋಡಗಳಲ್ಲಿ ನೀರಿನ ಅಣುಗಳ ಮಾದರಿಗಳನ್ನು ಸಂಗ್ರಹಿಸಿದೆ. ಈ ಸಂಶೋಧನೆಯನ್ನು ಸೆಪ್ಟೆಂಬರ್ 2019 ಮತ್ತು ಅಕ್ಟೋಬರ್ 2021 ರ ನಡುವೆ ನಡೆಸಲಾಯಿತು. ಈ ಮೋಡಗಳಲ್ಲಿರುವ ಬ್ಯಾಕ್ಟೀರಿಯಾಗಳು ಆ್ಯಂಟಿಬಯೋಟಿಕ್ ಔಷಧಿಗಳಿಗೆ ತುತ್ತಾಗುತ್ತವೆಯೇ ಎಂಬುದರ ಕುರಿತು ಈ ಸಂಶೋಧನೆ ನಡೆಸಲಾಗಿದೆ.

    MORE
    GALLERIES

  • 57

    Cloudy Weather: ಮಳೆಯಲ್ಲಿ ಮಿಂದೇಳೋ ಆಸೆ ನಿಮಗಿದ್ಯಾ? ಹಾಗಿದ್ರೆ ಎಚ್ಚರ ಯಾಮಾರಿದ್ರೆ ಅಪಾಯ ಗ್ಯಾರಂಟಿ!

    ಕಪ್ಪು ಮೋಡಗಳಲ್ಲಿ ಒಂದು ಮಿಲಿಮೀಟರ್ ನೀರಿನಲ್ಲಿ 330 ರಿಂದ 30 ಸಾವಿರ ಬಗೆಯ ಬ್ಯಾಕ್ಟೀರಿಯಾಗಳು ಇರುವುದನ್ನ ಕಂಡು ಹಿಡಿದಿದ್ದಾರೆ. ಒಂದು ಮಿಲಿಮೀಟರ್ ನೀರಿನಲ್ಲಿ ಸರಾಸರಿ 8 ಸಾವಿರ ರೀತಿಯ ಬ್ಯಾಕ್ಟೀರಿಯಾಗಳಿವೆ ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ. 29 ವಿಧದ ಬ್ಯಾಕ್ಟೀರಿಯಾಗಳು ಪ್ರತಿಜೀವಕ ಔಷಧಿಗಳಿಗೆ ನಿರೋಧಕವಾಗಿರುತ್ತವೆ ಎಂದು ತೀರ್ಮಾನಿಸಲಾಗಿದೆ.

    MORE
    GALLERIES

  • 67

    Cloudy Weather: ಮಳೆಯಲ್ಲಿ ಮಿಂದೇಳೋ ಆಸೆ ನಿಮಗಿದ್ಯಾ? ಹಾಗಿದ್ರೆ ಎಚ್ಚರ ಯಾಮಾರಿದ್ರೆ ಅಪಾಯ ಗ್ಯಾರಂಟಿ!

    ಮಳೆ ಬಾರದಿದ್ದಾಗ ಈ ಬ್ಯಾಕ್ಟೀರಿಯಾ ನೆಲ ಮತ್ತು ಬೆಳೆಗಳಲ್ಲಿ ವಾಸಿಸುತ್ತದೆ. ಔಷಧಿಗಳಿಗೆ ಒಳಗಾಗದ ಬ್ಯಾಕ್ಟೀರಿಯಾಗಳು ಬೆಳೆಗಳಿಗೆ ಹಾನಿಯನ್ನುಂಟುಮಾಡುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಪ್ಪು ಮೋಡಗಳಿಂದ ಕೆಳಗೆ ಬಿದ್ದ ಬ್ಯಾಕ್ಟೀರಿಯಾಗಳಲ್ಲಿ ಕೇವಲ 5 ರಿಂದ 50 ಪ್ರತಿಶತದಷ್ಟು ಮಾತ್ರ ಉಳಿದಿದೆ ಎಂದು ತೀರ್ಮಾನಿಸಿದ್ದಾರೆ.

    MORE
    GALLERIES

  • 77

    Cloudy Weather: ಮಳೆಯಲ್ಲಿ ಮಿಂದೇಳೋ ಆಸೆ ನಿಮಗಿದ್ಯಾ? ಹಾಗಿದ್ರೆ ಎಚ್ಚರ ಯಾಮಾರಿದ್ರೆ ಅಪಾಯ ಗ್ಯಾರಂಟಿ!

    ಈ ಬ್ಯಾಕ್ಟೀರಿಯಾವು ಮನುಷ್ಯರಿಗೆ ಯಾವ ರೀತಿಯ ಹಾನಿಯನ್ನುಂಟುಮಾಡುತ್ತದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಕಪ್ಪು ಮೋಡಗಳ ಮಳೆಗೆ ಒದ್ದೆಯಾಗುವುದು ಅಪಾಯಕಾರಿ ಆಗಿದೆ. (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES