ನೋಡು ಪಕ್ಕದ ಮನೆಯ ಹುಡುಗನಿಗೆ ಈಗಷ್ಟೇ ಕೆಲಸ ಸಿಕ್ಕಿದೆ. ಅವನ ಸಂಬಳವೆಷ್ಟು ಗೊತ್ತಾ? ನೀನು ವಾರ್ಡನ್ ನಾ? ನೀನು ಶಿಕ್ಷಕ ನಾ? ಆರಾಮವಾಗಿರಲು ನೀನು ಪೊಲೀಸ್ ಅಥವಾ ಇಂಜಿನಿಯರ್ ಯಾಕೆ ಆಗಬಾರದಿತ್ತು? ಹೆಂಡತಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಆಗದವನು ನೀನ್ಯಾರು? ಹುಡುಗರು ಹೆದರಬಾರದು ಎಂದು ಬಾಲ್ಯದಿಂದಲೇ ಅವರ ಮನಸ್ಸಿನಲ್ಲಿ ತುಂಬಲಾಗುತ್ತದೆ. ಅಷ್ಟಕ್ಕೂ ಹುಡುಗ ಮತ್ತು ಹುಡುಗಿ ಎಂಬ ಭಾವನೆಯನ್ನು ಯಾಕೆ ತುಂಬುತ್ತೀರಾ? ಹೀಗೆ ಅಳುವುದರಿಂದ ಹಿಡಿದು ಎಲ್ಲದರಲ್ಲೂ ಸಮಾಜ ಅರಿವಿಲ್ಲದೇ ಪುರುಷರ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿದೆ. (Photo by Gabriel on Unsplash)
ಮತ್ತು ಅನೇಕ ಗಂಡಸರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಲು ಆಗದೇ ಮುಜುಗರದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಮ್ಮ ನೋವನ್ನು ಹಂಚಿಕೊಳ್ಳಲು ಯಾರೂ ಇಲ್ಲದಿದ್ದಾಗ, ನಮ್ಮ ನೋವನ್ನು ಹೇಳಿಕೊಳ್ಳಲು ಸಾಧ್ಯವಾಗದಿದ್ದಾಗ ಆತ್ಮಹತ್ಯೆಯ ಆಲೋಚನೆಗಳು ಬರುತ್ತವೆ ಎನ್ನುತ್ತಾರೆ ತಜ್ಞರು. ಅದಕ್ಕಾಗಿಯೇ ಯಾರಾದರೂ ದುಃಖಿತರಾದಾಗ ಅಳುವುದು ಉತ್ತಮ. (Photo by Gabriel on Unsplash)
ಅನಿರೀಕ್ಷಿತ ಘಟನೆಗಳು, ಪ್ರೇಮ ವೈಫಲ್ಯ ಅಥವಾ ವೃತ್ತಿಜೀವನದಲ್ಲಿ ನಾವು ಸಾಧಿಸಲು ಸಾಧ್ಯವಾಗದೇ ಹೋದಾಗ ಮನಸ್ಸು ನಲುಗಿದಾಗ ಸಹಿಸಲಾಗದ ನೋವು ಅನುಭವಿಸುವುದು ಸಹಜ. ಹೀಗಿದ್ದಲ್ಲಿ ಅಳುವುದರಲ್ಲಿ ತಪ್ಪೇನು? ಲಿಂಗ ತಾರತಮ್ಯತೆ ಕೇವಲ ಮಹಿಳೆಯರ ಸಮಸ್ಯೆಯಲ್ಲ. ಇದು ನಮ್ಮ ಸಮಾಜದ ಯೋಗಕ್ಷೇಮಕ್ಕೆ ಸಂಬಂಧಿಸಿದೆ ಮತ್ತು ಎಲ್ಲರಿಗೂ ಸಂಬಂಧಿಸಿದೆ. (Photo by Gabriel on Unsplash)