Holiday Plan: ಮಾರ್ಚ್ ತಿಂಗಳಲ್ಲಿ ಮಿಸ್ ಮಾಡದೇ ಈ 6 ಸ್ಥಳಗಳಿಗೆ ಪ್ರವಾಸ ಕೈಗೊಳ್ಳಿ
ಬೇಸಿಗೆಯ ಬಿರು ಬಿಸಿಲಿನ ಶಾಖದಿಂದ ವಿರಾಮ ತೆಗೆದುಕೊಳ್ಳಬೇಕೆಂದು ಅನಿಸುತ್ತಿದೆಯೇ? ಹಾಗಿದ್ರೆ ಈಗ ನೀವು ಕೆಲವು ತಂಪಾದ ಸ್ಥಳಗಳಿಗೆ ಪ್ರಯಾಣಿಸುವುದು ಅವಶ್ಯಕ. ವಿಶಾಲವಾದ ಹಸಿರು ಹೊದಿಕೆ ಅಥವಾ ಗುಡ್ಡಗಾಡು ಪ್ರದೇಶಗಳು ಬೇಸಿಗೆಯಲ್ಲೂ ಸಹ ತಂಪಾದ ವಾತಾವರಣವನ್ನು ಹೊಂದಿರುತ್ತವೆ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚೆನೂ ಬೆವರದೆ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುವುದರ ಜತೆ ಸಾಹಸ ಮಾಡಬೇಕು ಅಂದರೆ ಈ ಸ್ಥಳಕ್ಕೆ ಪ್ರಯಾಣ ಶುರು ಮಾಡಿ..
ಮಾಸ್ಸುರಿ: ಸಮುದ್ರ ಮಟ್ಟದಿಂದ ಸುಮಾರು 8500 ಅಡಿ ಎತ್ತರದಲ್ಲಿದ್ದು, ಸುತ್ತಲಿನ ಹಸಿರು ಪ್ರದೇಶ, ಹಿಮದ ರಾಶಿಯನ್ನು ಹೊದಿಕೆಯಾಗಿ ಮಾಡಿಕೊಂಡಿರುವ ಬೆಟ್ಟ, ನದಿಗಳು ಇದರ ಸೌಂದರ್ಯವನ್ನು ಹೆಚ್ಚಿಸುತ್ತಿವೆ.
2/ 6
ಊಟಿ-ತಮಿಳುನಾಡು: ವಸಂತಕಾಲದ ಆರಂಭ ತಿಂಗಳ ವಿಹಾರಕ್ಕೆ ಊಟಿ ಬೆಸ್ಟ್ ಪ್ಲೇಸ್ ಆಗಿದೆ .. ಮಾರ್ಚ್ ತಿಂಗಳಿನಲ್ಲಿ ಹಿತವೆನಿಸುವ ಚಳಿ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಸಿರು ಹೊದ್ದ ಪ್ರಕೃತಿ ಎಲ್ಲವೂ ಭೇಟಿ ನೀಡಿದವರನ್ನು ಸೆಳೆಯುತ್ತದೆ. ಹೀಗಾಗಿ ಮಾರ್ಚ್ ತಿಂಗಳು ಊಟಿ ಭೇಟಿಗೆ ಬೆಸ್ಟ್ ಟೈಮ್ ಆಗಿದೆ.
3/ 6
ಮಡಿಕೇರಿ: ಕೂರ್ಗ್ ಅನ್ನು 'ಭಾರತದ ಸ್ಕಾಟ್ಲೆಂಡ್' ಎಂದು ಕರೆಯಲಾಗುತ್ತದೆ, ಇಲ್ಲಿನ ವಾತಾವರಣ ಅದ್ಬುತವಾಗಿದ್ದು ಪಶ್ಚಿಮ ಘಟ್ಟಗಳಿಂದ ಆವೃತವಾದ ಈ ಗಿರಿಧಾಮವನ್ನು ಎಂದಿಗೂ ಮಿಸ್ ಮಾಡಿಕೊಳ್ಳಬಾರದು. ಇಲ್ಲಿನ ಆಹ್ಲಾದಕರ ಹವಾಮಾನವು ಬೇಸಿಗೆಯಲ್ಲಿ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.
4/ 6
ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಒಂದು ಅದ್ಬುತ ಗಿರಿಧಾಮವಾಗಿದ್ದು, ಇದು ಯಾವಾಗಲೂ ಚಟುವಟಿಕೆಗಳು ಮತ್ತು ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳೊಂದಿಗೆ ಸಡಗರದಿಂದ ಕೂಡಿರುತ್ತದೆ. ಈ ಸಮಯದಲ್ಲಿ ಪ್ರಯಾಣಿಸಲು ಹವಾಮಾನವು ಹೆಚ್ಚು ಅನುಕೂಲಕರವಾಗಿರುವುದರಿಂದ ಶಿಮ್ಲಾ ಸಹ ಬೇಸಿಗೆಯ ತಾಣವಾಗಿದೆ.
5/ 6
ಡೆಹ್ರಾಡೂನ್: ಗುಡ್ಡ ಬೆಟ್ಟಗಳ ನಡುವೆ ಸಾಗುವ ಡೆಹ್ರಾಡೂನ್ ಹಾದಿ ಹೊಸ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅಲ್ಲಲ್ಲಿ ಕಾಣಸಿಗುವ ಕೆರೆ, ನದಿಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಮಾರ್ಚ್ ತಿಂಗಳಿನಲ್ಲಿ ನೀವು ಡೆಹ್ರಾಡೂನ್ಗೆ ಭೇಟಿ ನೀಡಿದರೆ ಕೂಲ್ ಕೂಲ್ ವಾತಾವರಣದಲ್ಲಿ ಎಂಜಾಯ್ ಮಾಡಬಹುದಾಗಿದೆ.
6/ 6
ಗುಲ್ಮಾರ್ಗ್: ಗುಲ್ಮಾರ್ಗ್ ಬೇಸಿಗೆಯಲ್ಲಿ ಉತ್ತರ ಭಾರತದಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇದು ಚಳಿಗಾಲದ ಕ್ರೀಡೆಗಳ ಕೇಂದ್ರವಾಗಿದೆ ಮತ್ತು ಬೇಸಿಗೆಯ ಶಾಖದಿಂದ ತಣ್ಣಗಾಗಲು ಸೂಕ್ತ ಸ್ಥಳವಾಗಿದೆ. ಗುಲ್ಮಾರ್ಗ್ ವರ್ಷಪೂರ್ತಿ ಭೇಟಿ ನೀಡುವ ತಾಣವಾಗಿದ್ದು, ಬೇಸಿಗೆ ಕಾಲದಲ್ಲೂ ಭೇಟಿ ನೀಡಲು ಇದು ಸೂಕ್ತವಾಗಿದೆ.