ರಾಯಲ್ ಶೈಲಿಯಲ್ಲಿ ಹೋಳಿ ಆಚರಣೆಯಲ್ಲಿ ಭಾಗವಹಿಸಬೇಕು ಎಂದರೆ , ಉದಯಪುರಕ್ಕೆ ಭೇಟಿ ನೀಡಿ. ಉದಯಪುರದಲ್ಲಿ ಹೋಳಿಯಲ್ಲಿ ರಾಜಮನೆತನ ಸಹ ಭಾಗವಹಿಸುತ್ತದೆ. ಅಲ್ಲಿ ಸ್ಥಳೀಯ ಮಹಾರಾಜರು ರಾಜಮನೆತನದ ಅಂಗಳದಲ್ಲಿ ದೀಪೋತ್ಸವವನ್ನು ಮಾಡುತ್ತಾರೆ. ಇದನ್ನು ಮೇವಾರ್ ಹೋಲಿಕಾ ದಹನ್ ಎಂದು ಕರೆಯಲಾಗುತ್ತದೆ. ಸ್ಥಳೀಯರು ದೀಪೋತ್ಸವದ ಸುತ್ತಲೂ ‘ಗೈರ್’- ಜಾನಪದ ನೃತ್ಯವನ್ನು ಪ್ರದರ್ಶಿಸುತ್ತಾರೆ.