Christmas Holiday: ಕ್ರಿಸ್ಮಸ್ ರಜೆಯನ್ನು ಮಸ್ತ್ ಆಗಿ ಕಳೆಯಲು ಈ ಸ್ಥಳಗಳೇ ಬೆಸ್ಟ್!
Best Places For a Christmas: ಕ್ರಿಸ್ಮಸ್ ಹಬ್ಬ ಹತ್ತಿರ ಬಂದಿದೆ. ಈಗಾಗಲೇ ಭರದಿಂದ ತಯಾರಿ ಸಹ ಆರಂಭವಾಗಿದೆ. ಈ ಸಮಯದಲ್ಲಿ ಮಕ್ಕಳಿಗೆ ಸಹ ರಜೆ ಇರುತ್ತದೆ. ಹಾಗಾಗಿ ಟ್ರಿಪ್ ಪ್ಲ್ಯಾನ್ ಮಾಡುವುದು ಸಾಮಾನ್ಯ. ಬೇರೆ ಎಲ್ಲೋ ಟ್ರಿಪ್ ಹೋಗುವ ಬದಲು ಕ್ರಿಸ್ಮಸ್ ಹಬ್ಬವನ್ನು ಸುಂದರವಾಗಿ ಆಚರಿಸುವ ಕೆಲ ಸ್ಥಳಗಳಿಗೆ ಹೋಗಬಹುದು. ಈ ಬಾರಿ ಕ್ರಿಸ್ಮಸ್ ರಜೆಯನ್ನು ಎಂಜಾಯ್ ಮಾಡಲು ಕೆಲ ಸ್ಥಳಗಳ ಲಿಸ್ಟ್ ಇಲ್ಲಿದೆ.
ಗೋವಾ: ಕಡಲತೀರಗಳಿಗೆ ಫೇಮಸ್ ಆಗಿರುವ ಈ ಗೋವಾದಲ್ಲಿ ಕ್ರಿಸ್ಮಸ್ ಎಂಜಾಯ್ ಮಾಡುವುದು ಒಂದು ಸುಂದರ ಅನುಭವ. ಇಲ್ಲಿ ಕ್ರಿಸ್ಮಸ್ ಪಾರ್ಟಿಗಳು ಸಹ ಭರ್ಜರಿಯಾಗಿ ನಡೆಯುತ್ತದೆ. ಹಾಗಾಗಿ ಈ ಬಾರಿ ವಿಸಿಟ್ ಮಾಡಿ.
2/ 9
ಕೇರಳ: ಕ್ರಿಸ್ಮಸ್ ಸಮಯದಲ್ಲಿ ಕೇರಳದ ಬೀದಿ ಬೀದಿಗಳನ್ನು ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ಅಲ್ಲದೇ ಹೋಟೆಲ್, ರೆಸ್ಟೊರೆಂಟ್ಗಳಲ್ಲಿ ಬಹಳ ಆಫರ್ ಸಹ ಈ ಸಮಯದಲ್ಲಿ ನೀಡುತ್ತಾರೆ.
3/ 9
ಪಾಂಡಿಚೇರಿ: ಗೋವಾ ರೀತಿಯೇ ಈ ಪಾಂಡಿಚೇರಿ ಸಹ ಬೀಚ್ಗಳಿಗೆ ಹೆಚ್ಚು ಫೇಮಸ್, ಆದರೆ ಇಲ್ಲಿನ ಕ್ರಿಸ್ಮಸ್ ಆಚರಣೆ ಮಾತ್ರ ಎಲ್ಲರ ನೆನಪಿನಲ್ಲಿ ಉಳಿಯುವಂತೆ ಇರುತ್ತದೆ ಎಂದರೆ ತಪ್ಪಲ್ಲ. ಈ ಸಮಯದಲ್ಲಿ ವಿಶೇಷ ಪಾರ್ಟಿಗಳು, ಕಾರ್ಯಕ್ರಮಗಳು ಸಹ ನಡೆಯುತ್ತವೆ.
4/ 9
ದಿಯು ಮತ್ತು ದಮನ್: ಈ ದ್ವೀಪ ರಾಜ್ಯದಲ್ಲಿ ಸಹ ಕ್ರಿಸ್ಮಸ್ ಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೋರ್ಚುಗೀಸ್ ನೃತ್ಯ ಹೀಗೆ ಇಲ್ಲಿ ನೋಡಲು ನಿಮಗೆ ಬಹಳ ವಿಶೇಷತೆಗಳು ಸಿಗುತ್ತದೆ.
5/ 9
ಶಿಲ್ಲಾಂಗ್: ಕ್ರಿಸ್ಮಸ್ ಸಮಯದಲ್ಲಿ ಶಿಲ್ಲಾಂಗ್ ಅನ್ನು ನೋಡಿದರೆ ನಿಜಕ್ಕೂ ಸ್ವರ್ಗವನ್ನು ನೋಡಿದಂತೆ ಭಾಸವಾಗುತ್ತದೆ. ಅಷ್ಟು ಸುಂದರವಾಗಿ ಜಗಮಗಿಸುವ ರಸ್ತೆಗಳು, ಚರ್ಚ್ ಹಾಗೂ ಮನೆಗಳು ನಿಮ್ಮನ್ನ ಸೆಳೆಯುತ್ತದೆ.
6/ 9
ಮನಾಲಿ: ಮನಾಲಿ ನವಜೋಡಿಗಳ ಹನಿಮೂನ್ ಸ್ಪಾಟ್ ಆಗಿ ಫೇಮಸ್ ಆಗಿದ್ದರೂ ಸಹ ಇದು ಕ್ರಿಸ್ಮಸ್ ಆಚರಣೆಗೆ ಸಹ ಹೆಸರುವಾಸಿ ಎನ್ನಬಹುದು. ಇಲ್ಲಿ ಬೀಳುವ ಹಿಮ ನಿಮಗೆ ಒಂದು ಆಹ್ಲಾದಕರ ಅನುಭವ ನೀಡುತ್ತದೆ.
7/ 9
ಮುಂಬೈ: ಮಾಯಾನಗರಿ ಮುಂಬೈನಲ್ಲಿ ಸಹ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇಲ್ಲಿನ ಚರ್ಚ್ ಹಾಗೂ ಮಾಲ್ಗಳು ಸಿಂಗಾರಕೊಂಡಿರುತ್ತದೆ. ಅಲ್ಲದೇ, ಭರಪೂರ ಆಫರ್ಗಳನ್ನು ಸಹ ಈ ಸಮಯದಲ್ಲಿ ನೀಡುತ್ತದೆ.
8/ 9
ದೆಹಲಿ: ರಾಜಧಾನಿ ದೆಹಲಿಯಲ್ಲಿ ಕ್ರಿಸ್ಮಸ್ ಸಮಯದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ ಚಳಿ ಇರುತ್ತದೆ. ಆದರೆ, ಕ್ರಿಸ್ಮಸ್ ಆಚರಣೆ ಸಹ ಇಲ್ಲಿ ಭರ್ಜರಿಯಾಗಿರುತ್ತದೆ. ಇಲ್ಲಿ ಈ ಸಮಯದಲ್ಲಿ ಥೀಮ್ ಪಾರ್ಟಿಗಳು ಜಾಸ್ತಿ ನಡೆಯುತ್ತವೆ.
9/ 9
ಕೊಲ್ಕತ್ತಾ: ದುರ್ಗಾಪೂಜೆಗೆ ಹೆಸರುವಾಸಿಯಾಗಿರುವ ಕೊಲ್ಕತ್ತಾ ನಗರ ಕ್ರಿಸ್ಮಸ್ ಪಾರ್ಟಿಗಳಿಗೆ ಸಹ ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗುತ್ತಿದೆ. ಆಹಾರ ಮೇಳಗಳು, ವಿಶೇಷ ಕಾರ್ಯಕ್ರಮಗಳು ಈ ಸಮಯದಲ್ಲಿ ನಡೆಯುತ್ತವೆ.