Mother's Day 2022: ಜೀವದ ಗಿಫ್ಟ್ ನೀಡಿದವಳಿಗೆ ಇವುಗಳನ್ನು ಕೊಟ್ಟು, 'ಅಮ್ಮ I Love You' ಅಂತ ಹೇಳಿ
Gift Ideas For Mother's Day: ಮೇ 8 ರಂದು ತಾಯಂದಿರ ದಿನ. ಕೇವಲ ಒಂದು ದಿನ ಬಾಕಿ ಇದೆ. ಈ ಸಮಯದಲ್ಲಿ ನಿಮಗಾಗಿ ಮಿಡಿಯುವ ಹೃದಯಕ್ಕೆ ಒಂದು ಉಡುಗರೆಯನ್ನು ನೀಡದಿದ್ದರೆ ಹೇಗೆ ಹೇಳಿ. ಪ್ರೀತಿಯ ಅಮ್ಮನಿಗೆ ಏನು ಕೊಡಬೇಕು ಎಂಬ ಗೊಂದಲದಲ್ಲಿದ್ದರೆ ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ಯಾವ ರೀತಿ ಉಡುಗರೆ ನೀಡಿ ಅಮ್ಮನಿಗೆ ಧನ್ಯವಾದ ಹೇಳಬಹುದು ಎಂಬುದು ಹಾಗೂ ಕೆಲ ಗಿಫ್ಟ್ ಐಡಿಯಾಗಳು ಇಲ್ಲಿದೆ.
ಪರಿಮಳಯುಕ್ತ ಕ್ಯಾಂಡಲ್ಗಳು ಇದರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಪರಿಮಳಯುಕ್ತ ಮೇಣದಬತ್ತಿಯು ಯಾವಾಗಲೂ ಯಾರಿಗಾದರೂ ನೀಡುವ ಪರಿಪೂರ್ಣವಾದ ಗಿಫ್ಟ್ ಎನ್ನಬಹುದು.
2/ 10
ಹೂವಿನ ಬೊಕ್ಕೆಗಳು: ಪ್ರತಿಯೊಬ್ಬರೂ ಮುದ್ದಾದ ಹೂವಿನ ಗುಚ್ಛವನ್ನು ಇಷ್ಟಪಡುತ್ತಾರೆ. ಇನ್ನು ತಾಯಂದಿರಿಗೆ ಇಷ್ಟವಾಗದೇ ಇರದು. ಸ್ಪ್ರೇ ಗುಲಾಬಿಗಳು, ಲಿಲ್ಲಿಗಳು ಮತ್ತು ನಿಮ್ಮ ತಾಯಿ ಇಷ್ಟಪಡುವ ಹೂಗಳನ್ನು ಹೊಂದಿರುವ ಬೊಕ್ಕೆ ಕೊಟ್ಟು ನೋಡಿ.
3/ 10
ಪರ್ಫ್ಯೂಮ್ ಸೆಟ್: ನಿಮ್ಮ ತಾಯಿ ಪರ್ಫ್ಯೂಮ್ಗಳನ್ನು ಇಷ್ಟಪಡುವುದಾದರೆ ಅವುಗಳ ಸೆಟ್ ನಿಜಕ್ಕೂ ಬೆಸ್ಟ್ ಗಿಫ್ಟ್ ಆಗುತ್ತದೆ. ವಿಭಿನ್ನ ಫರ್ಫ್ಯೂಮ್ಗಳನ್ನು ಹೊಂದಿರುವ ಹಲವಾರು ಸೆಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅಮ್ಮನಿಗೆ ಕೊಟ್ಟು ಸಂತೋಷ ಹಂಚಿಕೊಳ್ಳಿ.
4/ 10
ಆಭರಣಗಳು: ಆಭರಣಗಳು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬ ಮಹಿಳೆಯೂ ಒಂದೆಲ್ಲ ಒಂದು ರೀತಿಯ ಆಭರಣಗಳನ್ನು ಇಷ್ಟಪಡುತ್ತಾರೆ. ನೀವು ಸಹ ನಿಮ್ಮ ಅಮ್ಮನಿಗೆ ರಿಂಗ್ ಅಥವಾ ಕಿವಿ ಓಲೆ ಉಡುಗೊರೆಯಾಗಿ ನೀಡಿ.
5/ 10
ಲಿಪ್ಸ್ಟಿಕ್: ಹೆಂಗಳೆಯರ ಹಾಟ್ ಫೇವರೇಟ್ ವಸ್ತು ಎಂದರೆ ಲಿಪ್ಸ್ಟಿಕ್ ಎನ್ನಬಹುದು. ಈ ಅಮ್ಮಂದಿರ ವಿಶೇಷ ದಿನದಂದು ಲಿಪ್ಸ್ಟಿಕ್ ಸೆಟ್ ಕೊಟ್ಟು ವಿಶ್ ಮಾಡಿ.
6/ 10
ಗಿಫ್ಟ್ಕಾರ್ಡ್: ಉಡುಗೊರೆ ಕಾರ್ಡ್ಗಳು ಲಭ್ಯವಿದ್ದಾಗ ಏಕೆ ತಲೆಕೆಡಿಸಿಕೊಳ್ಳಬೇಕು? ನೀವೆ ನಿಮ್ಮ ಕೈಯಾರೆ ಕಾರ್ಡ್ಗಳನ್ನು ಮಾಡಿ ಕೊಡಬಹುದು ಅಥವಾ ಅಂಗಡಿಯಲ್ಲಿ ಸಿಗುವ ವಿಶೇಷ ಕಾರ್ಡ್ಗಳ ಮೇಲೆ ಪ್ರೀತಿಯ ಕೆಲ ಪದಗಳನ್ನು ಬರೆದು ಕೊಟ್ಟರೆ ತಾಯಿಗೆ ಖುಷಿಯಾಗದೇ ಇರದು.
7/ 10
ಬ್ಯಾಗ್: ನಿಮ್ಮ ತಾಯಿ ವಿವಿಧ ಬಗೆಯ ಬ್ಯಾಗ್ಗಳನ್ನು ಇಷ್ಟಪಡುವುದಾದರೆ ನಿಮ್ಮ ಚಿಂತೆಗೆ ಪರಿಹಾರ ಸಿಕ್ಕಂತೆ. ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಬ್ಯಾಗ್ಗಳಿವೆ. ಅಮ್ಮನ ಇಷ್ಟದ ರೀತಿಯ ಹಾಗೂ ನೆಚ್ಚಿನ ಬ್ರ್ಯಾಂಡ್ಗಳ ಬ್ಯಾಗ್ ಗಿಫ್ಟ್ ನೀಡಿ.
8/ 10
ಸೀರೆ: ಎಲ್ಲಾ ಗಿಫ್ಟ್ಗಳಿಗಿಂತ ಹೆಚ್ಚು ಭಾವನಾತ್ಮಕ ಗಿಫ್ಟ್ ಎಂದರೆ ಸೀರೆ ಎನ್ನಬಹುದು. ಹೌದು, ಮಗಳು ತಾಯಿಗೆ ನೀಡುವ ಸೀರೆ ಹೇಗೆ ಇದ್ದರೂ ಅದು ಫೇವರೇಟ್ ಆಗಿರುತ್ತದೆ. ಹಾಗಾಗಿ ನಿಮ್ಮ ಬಜೆಟ್ನಲ್ಲಿ ಅಂದದ ಸೀರೆ ಕೊಡಿ.
9/ 10
ಸ್ಕಿನ್ಕೇರ್ ಸೆಟ್: ಅಮ್ಮನ ಮೆಚ್ಚಿನ ಚರ್ಮದ ಉತ್ಪನ್ನಗಳನ್ನು ಕೊಟ್ಟು ನೋಡಿ, ಸಂತೋಷಕ್ಕೆ ಮಿತಿ ಇರುವುದಿಲ್ಲ. ನೀವು ಕೊಟ್ಟ ವಸ್ತುಗಳ ಕೊನೆಯ ಹನಿಯವರೆಗೂ ಅದನ್ನು ಬಳಸುತ್ತಾರೆ.
10/ 10
ಫೋನ್ ಕೇಸ್: ಅಮ್ಮ ಎಲ್ಲಾ ವಸ್ತುಗಳನ್ನು ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳುತ್ತಾರೆ. ಹಾಗಾಗಿ ನಿಮ್ಮ ತಾಯಿಯ ಫೋನ್ಗೆ ಒಂದು ಸುಂದರವಾದ ಕವರ್ ಗಿಫ್ಟ್ ಕೊಡಿ.