Cracked Heels: ಪಾದಗಳು ಒಡೆದು ಕಿರಿಕಿರಿ ಅನ್ನಿಸ್ತಿದ್ಯಾ? ಟೆನ್ಶನ್ ಬೇಡ, ಇಷ್ಟು ಮಾಡಿ ಸಾಕು!
ಹವಾಮಾನ ಬದಲಾದಾಗ ಮನುಷ್ಯರ ಪಾದಗಳು ಬಿರುಕು ಬಿಡೋದು ಸಹಜ ಪ್ರಕ್ರಿಯೆ. ಬೇಸಿಗೆ ಕಾಲ ಮತ್ತು ಚಳಿಗಾಲದಲ್ಲಂತೂ ಪಾದಗಳು ಒಡೆಯೋದು ಹೆಚ್ಚಾಗಿ ಕಂಡು ಬರುತ್ತದೆ. ಪುರುಷರು ಸ್ತ್ರೀಯರೆನ್ನದೆ ಕಾಣಿಸಿಕೊಳ್ಳುವ ಈ ಸಮಸ್ಯೆ ಕೆಲವೊಬ್ಬರಿಗಂತೂ ನಡೆಯಲು ಕಷ್ಟ ಆಗುವಂತೆ ಕಾಡುತ್ತದೆ. ಪಾದಗಳು ಬಿರುಕು ಬಿಡುವುದರಿಂದ ಕೆಲವೊಮ್ಮೆ ಕಾಲು ಚಾಚಿ ಕುಳಿತುಕೊಳ್ಳಲು ಕೂಡ ಸಂಕೋಚವಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ.
ಬೇಸಿಗೆ ಕಾಲದಲ್ಲಿ ತೇವಾಂಶ ಅಂಶ ಕಡಿಮೆ ಆಗುವುದರಿಂದ ಕಾಲಿನ ಪಾದದ ಚರ್ಮ ಒಣಗಲು ಶುರುವಾಗುತ್ತದೆ. ಇದರಿಂದ ಪಾದದ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಇದು ಪಾದಗಳು ಒಡೆಯಲು ಅಥವಾ ಬಿರುಕು ಬಿಡಲು ಮುಖ್ಯ ಕಾರಣ.
2/ 7
ಚರ್ಮವನ್ನು ತೇವಾಂಶಯುಕ್ತವಾಗಿ ಇಡಬೇಕೆಂದರೆ ಸಾಕಷ್ಟು ನೀರು ಕುಡಿಯಬೇಕು. ಪ್ರತಿದಿನ ಕನಿಷ್ಠ ನಾಲ್ಕು ಲೀಟರಿನಷ್ಟು ನೀರು ಸೇವಿಸಿದರೆ ಚರ್ಮದ ಜೊತೆಗೆ ಒಟ್ಟು ದೇಹದ ಆರೋಗ್ಯ ಸ್ಥಿತಿ ಉತ್ತಮ ಸ್ಥಿತಿಯಲ್ಲಿರುತ್ತದೆ.
3/ 7
ನಿಮ್ಮ ಪಾದಗಳು ಮೃದುವಾಗಿ ಮತ್ತು ನಯವಾಗಿ ಇರಬೇಕಾದರೆ ಪ್ರತಿದಿನ ಆರೈಕೆ ಮಾಡಬೇಕು. ರಾತ್ರಿ ಮಲಗುವ ಮುನ್ನ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಹಚ್ಚಿ ನಂತರ ಮೃದುವಾದ ಹತ್ತಿ ಸಾಕ್ಸ್‌ಗಳನ್ನು ಹಾಕಿಕೊಂಡು ಮಲಗಬೇಕು.
4/ 7
ವಾರಕ್ಕೊಮ್ಮೆ ಪಾದಗಳನ್ನು 20 ನಿಮಿಷ ಉಗುರುಬೆಚ್ಚಗಿನ ನೀರಿನಲ್ಲಿ ಇರಿಸಿ ನಂತರ ಸ್ಕ್ರಬ್ ಮಾಡಿ ಮಾಯಿಶ್ಚರ್ ಕ್ರೀಮನ್ನು ಹಚ್ಚಿಕೊಳ್ಳಬೇಕು. ಸ್ನಾನ ಮಾಡುವಾಗ ಕಾಲುಗಳನ್ನು ಸ್ಕ್ರಬ್ಬರ್‌ನಿಂದ ಚೆನ್ನಾಗಿ ಉಜ್ಜಿ ಕೊಳೆ ತೆಗೆಯಬೇಕು.
5/ 7
ಪಾದಗಳು ಒಡೆಯುವುದನ್ನು ತಪ್ಪಿಸಲು ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ಎಳ್ಳಿನ ಎಣ್ಣೆ ಬಳಸಿದರೆ ಇನ್ನೂ ಉತ್ತಮ. ಎಳ್ಳೆಣ್ಣೆಯಲ್ಲಿ ಹಲವಾರು ಪೋಷಕಾಂಶಗಳಿವೆ ಮತ್ತು ಇದು ಗಾಯಗಳನ್ನು ಗುಣಪಡಿಸುವ ಗುಣ ಹೊಂದಿದೆ.
6/ 7
ಹದ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ನಿಂಬೆರಸ ಸೇರಿಸಿ ಹತ್ತು ನಿಮಿಷಗಳ ಕಾಲ ಅದರೊಳಗೆ ಪಾದಗಳನ್ನು ಇಟ್ಟುಕೊಳ್ಳಿ. ಇದರಿಂದ ತ್ವಚೆ ಮೃದುವಾಗುತ್ತದೆ. ಸಿ ವಿಟಮಿನ್ ಅಂಶವಿರುವ ನಿಂಬೆಯು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.
7/ 7
ಸಾಮಾನ್ಯವಾಗಿ ಒಣಚರ್ಮ ಇರುವವರಿಗೆ ಹಿಮ್ಮಡಿ ಒಡೆಯುವ ಸಮಸ್ಯೆ ಹೆಚ್ಚು. ಪಾದಗಳಲ್ಲಿ ಹೆಚ್ಚು ಬಿರುಕುಗಳಿದ್ದರೆ ಮತ್ತು ಆರೈಕೆ ಮಾಡಿಯೂ ಸರಿಹೋಗದಿದ್ದರೆ ತಡ ಮಾಡದೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಬೇಕು.
First published:
17