Men Health Care: ಚಳಿಗಾಲದಲ್ಲಿ ಪುರುಷರು ಈ ಆಹಾರಗಳನ್ನು ಸೇವಿಸಲೇಬೇಕು
Foods for Men Health: ಚಳಿಗಾಲದ ಸಮಯದಲ್ಲಿ ಪುರುಷರು ಸಹ ಬಹಳ ಎಚ್ಚರಿಕೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ಚೆನ್ನಾಗಿರಲು ಆಹಾರ ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿ ಮಿಸ್ ಮಾಡದೇ ಕೆಲ ಆಹಾರಗಳನ್ನು ಸೇವಿಸಬೇಕು. ಆ ಆಹಾರಗಳು ಯಾವುವು ಎಂಬುದು ಇಲ್ಲಿದೆ.
ಬಾದಾಮಿ ಬಾದಾಮಿಯಲ್ಲಿ ಪ್ರೋಟೀನ್ ಅಂಶ ಸಮೃದ್ಧವಾಗಿದೆ, ಇದು ಪುರುಷರ ಆರೋಗ್ಯಕ್ಕೆ ಬಹಳ ಮುಖ್ಯ. ಪ್ರತಿದಿನ ಕನಿಷ್ಠ 8 ರಿಂದ 10 ಬಾದಾಮಿ ತಿನ್ನುವುದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
2/ 8
ಸೋಯಾಬೀನ್ಸ್ ಸೋಯಾಬೀನ್ನಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಹ ಸಮೃದ್ಧವಾಗಿದೆ. ಪುರುಷರಿಗೆ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೂಳೆಗಳ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
3/ 8
ಟೊಮ್ಯಾಟೋ ಟೊಮ್ಯಾಟೋ ಇಲ್ಲದೇ ಹಲವಾರು ಆಹಾರ ಪದಾರ್ಥಗಳನ್ನು ತಯಾರಿಸಲು ಆಗುವುದಿಲ್ಲ, ಅಷ್ಟರ ಮಟ್ಟಿಗೆ ಟೊಮ್ಯಾಟೋ ನಮ್ಮ ಅಡುಗೆ ಮನೆಯ ಭಾಗವಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಫೈಬರ್ ಇದ್ದು ನಿಮ್ಮ ಹೃದಯಕ್ಕೆ ಬಹಳ ಒಳ್ಳೆಯದು.
4/ 8
ಎಲೆಕೋಸು ಎಲೆಕೋಸು ಎಂದರೆ ಹಲವಾರು ಜನರಿಗೆ ಇಷ್ಟವಾಗುವುದಿಲ್ಲ. ಆದರೆ ಪುರುಷರ ಆರೋಗ್ಯಕ್ಕೆ ಇದು ಬಹಳ ಅಗತ್ಯ ಎನ್ನುತ್ತಾರೆ ತಜ್ಞರು. ಇದರಲ್ಲಿ ವಿಟಮಿನ್ ಕೆ ಇದ್ದು, ಕೊಲೆಸ್ಟ್ರಾಲ್ ಸಹ ಕಡಿಮೆ ಇದೆ.
5/ 8
ಗೆಣಸು ಗೆಣಸು ವಿಟಮಿನ್ ಎ ಹೊಂದಿದ್ದು, ಇದರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಅಂಶಗಳಿದೆ. ಇದನ್ನು ನೀವು ವಿವಿಧ ರೀತಿಯ ಆಹಾರಗಳನ್ನು ತಯಾರಿಸಲು ಬಳಸಬಹುದು. ಹಾಗೆಯೇ ಸಲಾಡ್ ಸಹ ಮಾಡಬಹುದು.
6/ 8
ಕಿವಿ ಹಣ್ಣು ಚಳಿಗಾಲದಲ್ಲಿ ವಿಟಮಿನ್ ಸಿ ದೇಹಕ್ಕೆ ಬಹಳ ಅಗತ್ಯ. ಅದಕ್ಕಾಗಿ ಸಿಟ್ರಸ್ ಹಣ್ಣುಗಳನ್ನು ಸೇವನೆ ಮಾಡಬೇಕು ಎನ್ನುತ್ತಾರೆ. ಈ ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಇದು ರಕ್ತದ ಹೆಚ್ಚಳಕ್ಕೆ ಹಾಗೂ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ.
7/ 8
ಸೂರ್ಯಕಾಂತಿ ಬೀಜಗಳು ಸೂರ್ಯಕಾಂತಿ ಬೀಜಗಳು ದೇಹಕ್ಕೆ ವಿಟಮಿನ್ ಇ ಹೊಂದಿದ್ದು, ಇದು ಆ್ಯಂಟಿ ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
8/ 8
ಗೋಡಂಬಿ ಗೋಡಂಬಿಯಲ್ಲಿ ಮೆಗ್ನೀಸಿಯಂ ಸಮೃದ್ಧವಾಗಿದೆ. ಇದು ನಿಮ್ಮ ಸ್ನಾಯುಗಳ ಶಕ್ತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಜೊತೆ ಇತರ ಡ್ರೈ ಫ್ರೂಟ್ಸ್ಗಳನ್ನು ಸಹ ನೀವು ತಿನ್ನುವುದು ಬಹಳ ಉತ್ತಮ.