ಸಿಎಸ್ಐ ವೆಸ್ಲಿ ಕ್ಯಾಥೆಡ್ರಲ್ ಚರ್ಚ್ ,ಮೈಸೂರು: ವೆಸ್ಲೆಯನ್ ಮಿಷನರೀಸ್ ಸೊಸೈಟಿಯ ಸದಸ್ಯರು ಮೈಸೂರಿನಲ್ಲಿ ಸಿಎಸ್ಐ ವೆಸ್ಲಿ ಕ್ಯಾಥೆಡ್ರಲ್ ಚರ್ಚ್ ನಿರ್ಮಾಣ ಮಾಡಿದ್ದರು ಎಂದು ಹೇಳಲಾಗುತ್ತದೆ. ಕ್ರಿಶ್ಚಿಯನ್ ಧರ್ಮವನ್ನು ಹರಡುವ ಉದ್ದೇಶದಿಂದ 1821 ರಲ್ಲಿ ಭಾರತಕ್ಕೆ ಆಗಮಿಸಿದ ರೆವ್ ಜಾನ್ ಹಚಿಯಾನ್ ಅವರು ಈ ಚರ್ಚ್ ನಿರ್ಮಾಣ ಮಾಡುವಲ್ಲಿ ಮುಂದಾಳತ್ವ ವಹಿಸಿದ್ದರು ಎಂದು ಹೇಳಲಾಗುತ್ತದೆ.. ಸದ್ಯ ಈ ಚರ್ಚ್ ನಿರ್ಮಾಣ ಮಾಡಿ ಒಂದು 148 ವರ್ಷಗಳು ಕಳೆದಿವೆ
ಚರ್ಚ್ ಆಫ್ ಅವರ್ ಲೇಡಿ ಆಫ್ ಮಿರಾಕಲ್ಸ್, ಮಂಗಳೂರು: ಲೇಡಿ ಆಫ್ ಮಿರಾಕಲ್ಸ್, ಮಿಲಾಗ್ರೆಸ್ ಚರ್ಚ್ ಅಥವಾ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ರೋಮನ್ ಕ್ಯಾಥೋಲಿಕ್ ಶೈಲಿಯ ಚರ್ಚ್ ಆಗಿದ್ದು ಇದು ಮಂಗಳೂರಿನ ಹಂಪನಕಟ್ಟೆ ಯಲ್ಲಿದೆ. ದಕ್ಷಿಣ ಕನ್ನಡದ ಅತ್ಯಂತ ಹಳೆಯ ಚರ್ಚ್ಗಳಲ್ಲಿ ಒಂದಾಗಿರುವ ಈ ಚರ್ಚ್ ನ್ನು 1680 ರಲ್ಲಿ ಗೋವಾದ ಸಾಲ್ಸೆಟ್ಟೆಯ ಥಿಯೇಟಿನ್ ಪಾದ್ರಿ ಬಿಷಪ್ ಥಾಮಸ್ ಡಿ ಕ್ಯಾಸ್ಟ್ರೋ ಎಂಬುವವರು ನಿರ್ಮಾಣ ಮಾಡಿದ್ದರು ಎಂದು ಹೇಳಲಾಗುತ್ತದೆ.