ಡ್ರೈ ಫ್ರೂಟ್ಸ್ ಮತ್ತು ಬೀಜಗಳನ್ನು ತಿನ್ನುವುದು ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಏಕೆಂದರೆ ಅವುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಪಿಸ್ತಾಗಳನ್ನು ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗುತ್ತದೆ. ಅದರ ರುಚಿ ಅನೇಕ ಮಂದಿಯನ್ನು ಆಕರ್ಷಿಸುತ್ತದೆ. ರುಚಿಕರವಾದ ಆಹಾರ ಮತ್ತು ಸಿಹಿತಿಂಡಿಗಳನ್ನು ಅಲಂಕರಿಸಲು ಸಾಮಾನ್ಯವಾಗಿ ಪಿಸ್ತಾವನ್ನು ಬಳಸಲಾಗುತ್ತದೆ.
ಪಿಸ್ತಾ ತಿನ್ನುವುದರಿಂದ ಆಗುವ ಪ್ರಯೋಜನಗಳು ತೂಕ ಕಡಿಮೆಯಾಗುತ್ತದೆ: ಪಿಸ್ತಾದಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಕಂಡುಬರುತ್ತವೆ. ಆದ್ದರಿಂದ ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ದೀರ್ಘಕಾಲ ಹಸಿವು ಉಂಟಾಗುವುದಿಲ್ಲ. ಇದರಿಂದ ಬೊಜ್ಜು ಕಡಿಮೆಯಾಗುವುದಲ್ಲದೇ ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಗೆ ಮೂಲ ಕಾರಣವಾಗಿರುವ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ.