ಮುತ್ತು ಕೊಡುವುದರಿಂದ ಸಿಗುತ್ತೆ ಈ 8 ಆರೋಗ್ಯಕಾರಿ ಪ್ರಯೋಜನಗಳು
Benefits of Kiss: ಮುತ್ತುಕೊಡೋದು ಮನಸ್ಸಿಗೆ ಮಾತ್ರ ಮುದ ಕೊಡುವುದಿಲ್ಲ. ಇದರಿಂದ ಆರೋಗ್ಯಕ್ಕೂ ಬಹಳಷ್ಟು ಉಪಯೋಗ ಇದೆ. ಕಿಸ್ ಕೊಟ್ರೆ ಸಿಗುವ 8 ಬೆನಿಫಿಟ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕಿಸ್ ವಿಚಾರ ಬಂದಾಗ ಪ್ರೇಮಿಗಳು ನಾಚಿಕೊಳ್ಳುತ್ತಾರೆ. ವಯಸ್ಸಾದವರು ಮುಜುಗರಪಟ್ಟುಕೊಳ್ಳುತ್ತಾರೆ. ಚಿಕ್ಕವರು ಗೊತ್ತಿದ್ದರೂ ಗೊತ್ತಿಲ್ಲದಂತೆ ನಾಟಕ ಮಾಡುತ್ತಾರೆ.
2/ 9
ಮುತ್ತುಕೊಡೋದು ಮನಸ್ಸಿಗೆ ಮಾತ್ರ ಮುದ ಕೊಡುವುದಿಲ್ಲ. ಇದರಿಂದ ಆರೋಗ್ಯಕ್ಕೂ ಬಹಳಷ್ಟು ಉಪಯೋಗ ಇದೆ. ಕಿಸ್ ಕೊಟ್ರೆ ಸಿಗುವ 8 ಬೆನಿಫಿಟ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.
3/ 9
ಬಿಪಿ ಕಡಿಮೆ ಆಗತ್ತೆ: ನೀವು ನಂಬ್ತೀರೋ ಬಿಡ್ತೀರೋ. ಮುತ್ತು ಕೊಡೋದ್ರಿಂದ ರಕ್ತದೊತ್ತಡ ಕಡಿಮೆ ಆಗುತ್ತೆ ಎನ್ನುತ್ತಾರೆ ತಜ್ಞರು. ದೀರ್ಘ ಕಾಲ ಕಿಸ್ ಮಾಡೋದ್ರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆಯಂತೆ.
4/ 9
ತಲೆನೋವು ಮಾಯ: ನಿಮಗೆ ತಲೆನೋವು ಬಂದಿದೆಯಾ? ಹಾಗಿದ್ರೆ ನಿಮ್ಮ ಪ್ರೇಯಸಿಗೆ ಕಣ್ಮುಚ್ಚಿ ಒಮ್ಮೆ ಕಿಸ್ ಮಾಡಿಬಿಡಿ. ನಿಮಗೆ ರಿಲ್ಯಾಕ್ಸ್ ಫೀಲ್ ಆಗೋದರ ಜೊತೆಗೆ ತಲೆನೋವು ಮಂಗ ಮಾಯ.
5/ 9
ಕಿಸ್ ಮಾಡಿದ್ರೆ ಕ್ಯಾವಿಟಿ ಮಾಯ: ಇದನ್ನು ನಾವು ಹೇಳ್ತಿಲ್ಲ. ವೈದ್ಯರೇ ಹೇಳ್ತಿದ್ದಾರೆ. ಸ್ಮೂಚ್ ಮಾಡುವ ವೇಳೆ ಬಾಯಲ್ಲಿ ಲಾಲಾರಸ ಹೆಚ್ಚು ಉತ್ಪಾದನೆ ಆಗುತ್ತದೆ. ಇದರಿಂದ ಕ್ಯಾವಿಟಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
6/ 9
ಖುಷಿಯಿಂದ ಇರಬಹುದು: ಕಿಸ್ ಮಾಡುವುದರಿಂದ ನಿಮ್ಮನ್ನು ಖುಷಿಯಾಗಿರಿಸುವ ಹಾರ್ಮೋನ್ ಉತ್ಪತ್ತಿ ಆಗುತ್ತದೆ. ಇದರಿಂದ ನೀವು ಹ್ಯಾಪ್ಪಿ ಆಗಿರಬಹುದು.
7/ 9
ಕ್ಯಾಲರಿ ಬರ್ನ್ ಆಗತ್ತೆ: ನೀವು ಕಿಸ್ ಮಾಡುವುದರಿಂದ ನಿಮ್ಮಲ್ಲಿರುವ ಕ್ಯಾಲರಿ ಬರ್ನ್ ಆಗುತ್ತದೆ. ಹೆಚ್ಚಲ್ಲದಿದ್ದರೂ ಒಂದು ಹಂತಕ್ಕೆ ನಿಮ್ಮ ದೇಹದ ಕ್ಯಾಲರಿ ಕಡಿಮೆ ಆಗುತ್ತೆ.
8/ 9
ಮುಖದ ಕಾಂತಿ ಹೆಚ್ಚುತ್ತೆ ನೀವು ಸದಾ ಕಿಸ್ ಮಾಡುತ್ತಿದ್ದರೆ ನೀವು ಖುಷಿಯಿಂದ ಇರುತ್ತೀರಾ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತೆ ಅನ್ನೋದು ತಜ್ಞರ ಅಭಿಪ್ರಾಯ.
9/ 9
ಲೈಂಗಿಕ ಜೀವನ ಉತ್ತಮವಾಗಿರುತ್ತೆ: ಅರೇಂಜ್ ಮ್ಯಾರೇಜ್ ಆದವರ ನಡುವೆ ಪರಿಚಯ ಅಷ್ಟಾಗಿ ಇರುವುದಿಲ್ಲ. ಈ ವೇಳೆ ಕಿಸ್ ಮಾಡಿದರೆ ನಿಮ್ಮಲ್ಲಿ ಒಂದು ಹೊಂದಾಣಿಕೆ ಬೆಳೆದು ಲೈಂಗಿಕ ಜೀವನ ಸುಧಾರಿಸುತ್ತದೆ.