Hing And Milk: ರಾತ್ರಿ ಮಲಗುವ ಮೊದಲು ಹಾಲಿಗೆ ಇಂಗು ಹಾಕಿ ಕುಡಿರಿ, ಆಮೇಲ್ ಮ್ಯಾಜಿಕ್ ನೋಡಿ
Hing And Milk Benefits: ಹಾಲಿನಿಂದ ನಮಗೆ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಯಾರಿಗೂ ಹೇಳುವ ಅವಶ್ಯಕತೆ ಇಲ್ಲ. ಹಾಗೆಯೇ ಇಂಗಿನ ಬಗ್ಗೆ ಸಹ. ಇಂಗು ನಮ್ಮ ಆಹಾರದ ರುಚಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಇಂಗು ಮತ್ತು ಹಾಲನ್ನು ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ಹಲವಾರು ಪ್ರಯೋಜನಗಳಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ.
ಇಂಗನ್ನು ಹಾಲಿನ ಜೊತೆಗೆ ಹಾಕಿ ಕುಡಿಯುವುದು ಚಳಿಗಾಲದ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಒಣ ಚರ್ಮದ ಸಮಸ್ಯೆಯಿಂದ ನೀವು ಪರದಾಡುತ್ತಿದ್ದರೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ.
2/ 8
ಇದು ನಿಮಗೆ ಅಜೀರ್ಣ, ಕಿಬ್ಬೊಟ್ಟೆಯ ನೋವು , ವಾಂತಿ, ಬಿಕ್ಕಳಿಕೆ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಇಂಗನ್ನು ಅಡುಗೆಯಲ್ಲಿ ಬಳಸುವುದಕ್ಕಿಂತ ಹೆಚ್ಚಾಗಿ ಹಾಲಿನ ಜೊತೆ ಕುಡಿಯುವುದು ಹೆಚ್ಚು ಪ್ರಯೋಜನ ನೀಡುತ್ತದೆ.
3/ 8
ಮಲಬದ್ಧತೆ ಸಮಸ್ಯೆ ಇಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಈ ಹಾಲಿನ ಜೊತೆ ಇಂಗನ್ನು ಸೇವಿಸುವುದು ಪರಿಹಾರ ನೀಡುತ್ತದೆ. ಇದರ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಹೊಟ್ಟೆನೋವು, ಹೊಟ್ಟೆಯಲ್ಲಿ ಊತ ಇತ್ಯಾದಿಗಳಿಗೆ ಸಹ ಇದು ಮುಕ್ತಿ ನೀಡುತ್ತದೆ.
4/ 8
ಕರುಳಿನ ಸಮಸ್ಯೆಗೆ ಸಹ ಈ ಇಂಗು ಹಾಗೂ ಹಾಲು ಪ್ರಯೋಜನಕಾರಿ. ಇದು ಕರಳು ಒಣಗುವುದನ್ನ ತಡೆಯುವುದು ಮಾತ್ರವಲ್ಲದೇ, ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
5/ 8
ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಸರಿಯಿಲ್ಲದ ಕಾರಣ ಆಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಮಾತ್ರೆಗಳನ್ನು ಸೇವನೆ ಮಾಡುವ ಬದಲಾಗಿ. ಹಾಲಿಗೆ ಇಂಗನ್ನು ಹಾಕಿ ಸೇವಿಸಿ ಕುಡಿಯಿರಿ.
6/ 8
ಹಾಲಿಗೆ ಇಂಗನ್ನು ಹಾಕಿ ಕುಡಿಯುವುದು ಎಂದರೆ ಸುಮ್ಮನೆ ಮಿಕ್ಸ್ ಮಾಡಿ ಕುಡಿಯಬಾರದು. ಮೊದಲು ಇಂಗನ್ನು ನೀರಿನಲ್ಲಿ ಸುಮಾರು 72 ಗಂಟೆಗಳ ಕಾಲ ನೆನೆಯಲು ಬಿಡುವುದು ಉತ್ತಮ.
7/ 8
ಇದನ್ನು 72 ಗಂಟೆಗಳ ನಂತರ ಹಾಲಿಗೆ ಹಾಕಿ ಕುಡಿಯಬೇಕು. ಹಾಲು ಬಿಸಿ ಇದ್ದರೆ ಉತ್ತಮ. ಇದನ್ನು ರಾತ್ರಿ ಊಟವಾದ ಸುಮಾರು 1 ಗಂಟೆಯ ನಂತರ ಕುಡಿಯಬೇಕು. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಇಂಗನ್ನು ಮಣ್ಣಿನ ಪಾತ್ರೆಯಲ್ಲಿ ನೆನೆಸಿಡಬೇಕು
8/ 8
ಆದರೆ ಇದನ್ನು ಸೇವಿಸುವ ದಿನ ರಾತ್ರಿ ಮೊಸರು, ಹಣ್ಣು, ಜ್ಯೂಸ್, ಚಾಟ್, ಉಪ್ಪಿನಕಾಯಿ, ಸಲಾಡ್ ತಿನ್ನಬೇಡಿ. ಇವುಗಳನ್ನು ತಿನ್ನುವುದು ಗ್ಯಾಸ್ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ.