Bottle Gourd Juice: ಸೋರೆಕಾಯಿ ಜ್ಯೂಸ್ ಚಳಿಗಾಲದ ಸಮಸ್ಯೆಗೆ ಬೆಸ್ಟ್ ಮನೆಮದ್ದು
Benefits of Bottle Gourd Juice: ಸೋರೆಕಾಯಿ ಅನೇಕ ಅದ್ಭುತ ಪೋಷಕಾಂಶಗಳ ಉಗ್ರಾಣವಾಗಿದೆ. ತೂಕ ಇಳಿಕೆ ಅಥವಾ ಡಿಟಾಕ್ಸ್ ಡ್ರಿಂಕ್ಸ್ನಲ್ಲಿ ಇದನ್ನು ಹೆಚ್ಚಿನ ಜನರು ಸೇರಿಸಿಕೊಳ್ಳುತ್ತಿದ್ದಾರೆ. ಸೋರೆಕಾಯಿಯಿಂದ ಕೋಫ್ತಾ, ಭರ್ತಾ, ಹಲ್ವಾ ಹೀಗೆ ಅನೇಕ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಹಾಗೆಯೇ, ಇದರ ಜ್ಯೂಸ್ ಸಹ ಹಲವು ಪ್ರಯೋಜನಗಳನ್ನು ಹೊಂದಿದೆ.
ಸೋರೆಕಾಯಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಮಧುಮೇಹ ಇರುವವರಿಗೂ ಸಹ ತುಂಬಾ ಒಳ್ಳೆಯದು. ಇದು ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳನ್ನು ಸಮೃದ್ಧವಾಗಿ ಹೊಂದಿದೆ. ಇದು ದೇಹದಿಂದ ವಿಷವನ್ನು ತೆಗೆದುಹಾಕುವುದರಿಂದ ಚರ್ಮದ ಸಮಸ್ಯೆಯನ್ನು ಸಹ ಹೋಗಲಾಡಿಸುತ್ತದೆ.
2/ 8
ನೈಸರ್ಗಿಕ ಕ್ಲೆನ್ಸರ್ ಸೋರೆಕಾಯಿ ಜ್ಯೂಸ್ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಫ್ಯಾಡ್ ಡಿಟಾಕ್ಸ್ ಕಾರ್ಯಕ್ರಮಗಳಿಗೆ ಹೋಗುವ ಬದಲು, ಇದನ್ನು ಖರೀದಿಸಿ ಜ್ಯೂಸ್ ಮಾಡಿಕೊಂಡು ಕುಡಿಯಿರಿ.
3/ 8
ಕೂದಲಿನ ಆರೋಗ್ಯ ಸೋರೆಕಾಯಿ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಈ ಜ್ಯೂಸ್ ಅನ್ನು ನೆತ್ತಿಯ ಮೇಲೆ ಹಚ್ಚುವುದರಿಂದ ಬೋಳು ಮತ್ತು ಅಕಾಲಿಕ ಕೂದಲು ಬಿಳಿಯಾಗುವುದನ್ನು ತಡೆಯಬಹುದು.
4/ 8
ಹೃದಯದ ಆರೋಗ್ಯ ಸೋರೆಕಾಯಿ ಕಾರ್ಡಿಯೋ-ಟಾನಿಕ್ ಮತ್ತು ಮೂತ್ರವರ್ಧಕವಾಗಿದೆ. ಇದು ಶೀತ ಪ್ರಕೃತಿಯ ಪದಾರ್ಥವಾಗಿದೆ. ವಾತ ಮತ್ತು ಪಿತ್ತವನ್ನು ಸಮತೋಲನಗೊಳಿಸುವುದರಿಂದ ನೋವು, ಹುಣ್ಣು, ಜ್ವರ ಮತ್ತು ಉಸಿರಾಟದ ಸಮಸ್ಯೆಗಳಿಗೆ ಸಹ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
5/ 8
ಮಧುಮೇಹ ಸೋರೆಕಾಯಿಯು ಅದರ ಹೆಚ್ಚಿನ ನೀರಿನ ಅಂಶ ಮತ್ತು ಫೈಬರ್ನ ಕಾರಣದಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಲವು ದೇಶಗಳಲ್ಲಿ, ಇದನ್ನು ಸಾಂಪ್ರದಾಯಿಕವಾಗಿ ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ
6/ 8
ಸೋರೆಕಾಯಿ ಜ್ಯೂಸ್ ರೆಸಿಪಿ ಪದಾರ್ಥಗಳು 2 ಸೋರೆಕಾಯಿ ತುರಿದುಕೊಳ್ಳಿ, ಜೀರಿಗೆ ಬೀಜಗಳ 1 ಚಮಚ, 15 ರಿಂದ 20 ಪುದೀನಾ ಎಲೆಗಳು, 2 ರಿಂದ 3 ಟೇಬಲ್ ಸ್ಪೂನ್ ನಿಂಬೆ ರಸ, ನಿಮ್ಮ ರುಚಿಗೆ ತಕ್ಕಂತೆ ಉಪ್ಪು
7/ 8
ಮಾಡುವ ವಿಧಾನ ಬ್ಲೆಂಡರ್ನಲ್ಲಿ ಸೋರೆಕಾಯಿ, ಶುಂಠಿ, ಪುದೀನ ಎಲೆಗಳು, ಉಪ್ಪು ಮತ್ತು ಜೀರಿಗೆ ಹಾಕಿ. ಒಂದು ಕಪ್ ನೀರು ಸೇರಿಸಿ ಮಿಕ್ಸಿ ಮಾಡಿ. ಅದಕ್ಕೆ ನಿಂಬೆ ರಸ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಸೋಸಿ ಪ್ರತಿದಿನ ಬೆಳಗ್ಗೆ ಅದನ್ನು ಕುಡಿಯಿರಿ.
8/ 8
ಚಳಿಗಾಲವಾಗಿರುವುದರಿಂದ, ಸೋರೆಕಾಯಿಯನ್ನು ಜ್ಯೂಸ್ ಮಾಡುವ ಮೊದಲು ಬೇಯಿಸಿ. ಆಗ ನಿಮಗೆ ಶೀತ ಅಥವಾ ಕೆಮ್ಮು ಬರುವುದಿಲ್ಲ ಮತ್ತು ಜೀರ್ಣವಾಗಲು ಹೆಚ್ಚು ಸಮು ಸಹ ತೆಗೆದುಕೊಳ್ಳುವುದಿಲ್ಲ. ಕರುಳಿನ ಆರೋಗ್ಯ ಸಮಸ್ಯೆ ಹೊಂದಿರುವ ಜನರಿಗೆ ಹಸಿ ಜ್ಯೂಸ್ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.