Relationship Tips: ಇನ್ನೊಬ್ಬರನ್ನು ಮೆಚ್ಚಿಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

ಕೆಲವೊಬ್ಬರು ಇನ್ನೊಬ್ಬರಿಗಾಗಿಯೇ ತಮ್ಮ ಜೀವನವನ್ನು ಸಾಗಿಸುತ್ತಾ ಇರ್ತಾರೆ. ಆದರೆ, ಇದರಿಂದ ಏನೇಲ್ಲಾ ಅನಾನುಕೂಲಗಳು ಇದೆ ಅಂತ ಒಂದು ಬಾರಿ ಆದ್ರೂ ಯೋಚನೆ ಮಾಡಿದ್ದೀರಾ? ಇಲ್ಲಿದೆ ನೋಡಿ ಸಲಹೆಗಳು.

First published:

  • 18

    Relationship Tips: ಇನ್ನೊಬ್ಬರನ್ನು ಮೆಚ್ಚಿಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

    ಕೆಲವೊಬ್ಬರಿಗೆ ತಾವು ಚೆನ್ನಾಗಿರಬೇಕು ಅನ್ನೋದಕ್ಕಿಂತ ಹೆಚ್ಚಾಗಿ ಇತರರನ್ನು ನಗಿಸಬೇಕು, ಅವರಿಗೋಸ್ಕತರ ಬದಲಾಗಬೇಕು ಮತ್ತು ನಾನು ನಾನಾಗಿರಬಾರದು ಎಂಬ ಬಿಹೇವಿಯರ್​ ಅನ್ನು ಹೊಂದಿರುವವರು ಇರ್ತಾರೆ. ಇದರಿಂದ ಏನೇಲ್ಲಾ ಅನಾನುಕೂಲಗಳಿವೆ ಎಂದು ತಿಳಿಯೋಣ.

    MORE
    GALLERIES

  • 28

    Relationship Tips: ಇನ್ನೊಬ್ಬರನ್ನು ಮೆಚ್ಚಿಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

    ನೀವು ಇನ್ನೊಬ್ಬರಿಗೆ ಖುಷಿ ಕೊಡಲು ಹೋಗಿ ನೀವೇ ಹಲವಾರು ಬಾರಿ ನೋವನ್ನು ಅನುಭವಿಸಬೇಕಾಗುತ್ತದೆ. ಅವರ ಭಾವನೆಗಳಿಗೆ ಮಾತ್ರ ನೀವು ಬೆಲೆ ಕೊಡಬೇಕೇ ಹೊರತು ಅವರು ನಿಮ್ಮ ಭಾವನೆಗಳಿಗೆ ಬೆಲೆ ಕೊಡೋದಿಲ್ಲ. ನಿಮ್ಮ ಜೊತೆ ಮಿತಿಮೀರಿ ವರ್ತಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಸ್ವಂತ ಆಸೆಗಳನ್ನು ತ್ಯಜಿಸಬೇಕಾಗುವ ಸಂದರ್ಭಗಳು ಬಂದೇ ಬರುತ್ತದೆ.

    MORE
    GALLERIES

  • 38

    Relationship Tips: ಇನ್ನೊಬ್ಬರನ್ನು ಮೆಚ್ಚಿಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

    ನಿಮ್ಮ ನಿಜವಾದ ಸ್ವಭಾವವನ್ನು ವ್ಯಕ್ತ ಪಡಿಸಲು ಆಗೋದಿಲ್ಲ. ಯಾಕಂದ್ರೆ ನೀವು ಇನ್ನೊಬ್ಬರಿಗಾಗಿ ಬಿಹೇವಿಯರ್​ ಚೇಂಜ್​ ಮಾಡಿಕೊಳ್ತಾ ಇದ್ದೀರ. ಹಾಗಾಗಿ ನಿಮ್ಮನ್ನ ನೀವು ಕಳೆದುಕೊಳ್ಳುತ್ತೀರ. ಅವರಿಗೆಲ್ಲಿ ಬೇಜಾರಾಗುತ್ತೋ ಎನ್ನುವ ಸಲುವಾಗಿ ನೀವು ಏನು ಮಾತನಾಡಲೂ ಕೂಡ ತುಂಬಾ ಹಿಂಜರಿಯುತ್ತೀರ.

    MORE
    GALLERIES

  • 48

    Relationship Tips: ಇನ್ನೊಬ್ಬರನ್ನು ಮೆಚ್ಚಿಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

    ಇತರರನ್ನು ಮೆಚ್ಚಿಸುವ ಕಾರಣದಿಂದಾಗಿ ಕೆಲವೊಂದು ಬಾರಿ ನಿಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಇತರರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ಅಥವಾ ಅವರು ನಿಮ್ಮೊಂದಿಗೆ ಅತೃಪ್ತರಾದಾಗ ನೀವು ನಿಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳುವ ಸಂದರ್ಭ ಎದುರಾಗಬಹುದು.

    MORE
    GALLERIES

  • 58

    Relationship Tips: ಇನ್ನೊಬ್ಬರನ್ನು ಮೆಚ್ಚಿಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

    ಜನರನ್ನು ಸಂತೋಷ ಪಡಿಸುವವರು ಯಾವಾಗಲೂ ಅಸಮಾಧಾನ ಭಾವನೆಯಿಂದ ಇರಬೇಕಾಗಬಹುದು. ನಿಮ್ಮಲ್ಲಿ ಏನೇ ನೋವಾದ್ರೂ ಕೂಡ ಇನ್ನೊಬ್ಬರ ಬಳಿ ನೀವು ಹೇಳಿಕೊಳ್ಳಲು ಆಗೋದಿಲ್ಲ.

    MORE
    GALLERIES

  • 68

    Relationship Tips: ಇನ್ನೊಬ್ಬರನ್ನು ಮೆಚ್ಚಿಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

    ಎಂದಿಗೂ ಮುಖವಾಡ ಹಾಕಿಕೊಂಡು ಇರಬೇಕಾದಂತಹ ಸಂದರ್ಭ ಎದುರಾಗಬಹುದು. ಯಾಕಂದ್ರೆ ಇನ್ನೊಬ್ಬರ ಖುಷಿಗೆ ನೀವು ಭಾಗಿಯಾಗಲು ಹೋಗಿ, ನಿಮ್ಮನ್ನ ನೀವೇ ಕಳೆದುಕೊಳ್ಳಬೇಕಾದಂತಹ ಸಂದರ್ಭ ಎದುರಾಗುತ್ತದೆ.

    MORE
    GALLERIES

  • 78

    Relationship Tips: ಇನ್ನೊಬ್ಬರನ್ನು ಮೆಚ್ಚಿಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

    ಪದೇ ಪದೇ ಅವರೇ ತಪ್ಪುಗಳನ್ನು ಮಾಡ್ತಾ ಇದ್ರೂ ಕೂಡ ನೀವೇ ಹೋಗಿ Sorry ಎಂದು ಕೇಳ್ತಾ ಇರ್ತೀರ. ಎಲ್ಲರ ಮುಂದೆ ನಿಮಗೆ ಅಗೌರವದಿಂದ ವರ್ತಿಸುತ್ತನೇ ಇರುತ್ತಾರೆ. ಆದ್ರೂ ನೀವು ಅವರ ಹಿಂದೆ ಹಿಂದೆಯೇ ಹೋಗ್ತಾ ಇರ್ತೀರ.

    MORE
    GALLERIES

  • 88

    Relationship Tips: ಇನ್ನೊಬ್ಬರನ್ನು ಮೆಚ್ಚಿಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

    ಹೀಗಾಗಿ ನೀವು ನೀವಾಗಿರಿ. ಮನುಷ್ಯ ಸಂಘಜೀವಿ, ಹಾಗಂತ ಮಾತ್ರಕ್ಕೆ ನೀವು ಇನ್ನೊಬ್ಬರಿಗಾಗಿಯೇ ಜೀವನ ನಡೆಸಬೇಕು, ಅವರ ಪ್ರತೀ ಸಂತೋಷಕ್ಕೆ ನೀವು ಕಾರಣವಾಗಿರಬೇಕು ಅಂತೇನಿಲ್ಲ. ಒಳ್ಳೆಯ ಗೆಳೆಯ / ಗೆಳತಿ ಸಿಕ್ಕಿದ್ರೆ ಖಂಡಿತವಾಗಿಯೂ ನೀವು ಆರಾಮದಾಯಕವಾಗಿರಬಹುದು. Toxic ಸಂಬಂಧದಿಂದ ಹೊರಬನ್ನಿ.

    MORE
    GALLERIES