Holi Hair Care: ಹೋಳಿ ಆಡುವ ಮುನ್ನ ಇರಲಿ ಎಚ್ಚರ; ಮೊದಲೇ ಕೂದಲನ್ನು ಹೀಗೆ ಕೇರ್ ಮಾಡಿದ್ರೆ ಒಳ್ಳೆಯದು

ವರ್ಷಕ್ಕೊಮ್ಮೆ ಬರುವ ಹೋಳಿ ಹಬ್ಬ ಸಡಗರ ಮತ್ತು ಸಂಭ್ರಮವನ್ನು ಹೊತ್ತು ತರುತ್ತದೆ. ಈ ಕಲರ್ ಫುಲ್ ಹೋಳಿ ಹಬ್ಬದಲ್ಲಿ ಯಾರು ತಾನೇ ಬಣ್ಣದಲ್ಲಿ ಮಿಂದೇಳಲು ಇಷ್ಟ ಪಡಲ್ಲ ಹೇಳಿ? ಆದರೆ ಹೋಳಿಯ ಬಣ್ಣದಲ್ಲಿ ಮಿಂದೆದ್ದ ನಂತರ ಮತ್ತು ಮೊದಲು ಕೂದಲಿನ ಆರೈಕೆ ಮಾಡಲೇಬೇಕಾಗುತ್ತದೆ. ಅದಕ್ಕಾಗಿ ಏನೆಲ್ಲಾ ಕಾಳಜಿ ವಹಿಸಬೇಕು ನೋಡೋಣ.

First published:

  • 18

    Holi Hair Care: ಹೋಳಿ ಆಡುವ ಮುನ್ನ ಇರಲಿ ಎಚ್ಚರ; ಮೊದಲೇ ಕೂದಲನ್ನು ಹೀಗೆ ಕೇರ್ ಮಾಡಿದ್ರೆ ಒಳ್ಳೆಯದು

    ಬಣ್ಣದ ಆಟವಾಡುವ ಹೋಳಿಯಲ್ಲಿ ಒಬ್ಬರಿಗೊಬ್ಬರು ರಂಗು ಎರಚಿ, ಹಬ್ಬದ ಶುಭಾಶಯ ಕೋರಿ ಸಂಭ್ರಮಿಸುತ್ತಾರೆ. ಆದರೆ ಇದಕ್ಕೂ ಮೊದಲು ಚರ್ಮ ಮತ್ತು ಕೂದಲಿನ ಕಾಳಜಿ ವಹಿಸುವುದು ತುಂಬಾ ಮುಖ್ಯ. ಕೂದಲಿಗೆ ರಂಗು ಹಾಕುವ ಮೊದಲು ಎಚ್ಚರಿಕೆ ವಹಿಸಬೇಕಾಗುತ್ತದೆ.

    MORE
    GALLERIES

  • 28

    Holi Hair Care: ಹೋಳಿ ಆಡುವ ಮುನ್ನ ಇರಲಿ ಎಚ್ಚರ; ಮೊದಲೇ ಕೂದಲನ್ನು ಹೀಗೆ ಕೇರ್ ಮಾಡಿದ್ರೆ ಒಳ್ಳೆಯದು

    ಹೋಳಿಯ ನಂತರ ಕೂದಲಿಗೆ ಅಂಟಿಕೊಂಡ ಬಣ್ಣ ಹೋಗಲಾಡಿಸುವುದೇ ಒಂದು ದೊಡ್ಡ ಸಮಸ್ಯೆ. ಕೂದಲನ್ನು ಸ್ವಚ್ಛಗೊಳಿಸುವುದು ಮತ್ತು ಅದರ ಬಣ್ಣ ತೆಗೆದು ಹಾಕುವುದು ಕಷ್ಟಕರ. ಇದಕ್ಕಾಗಿ ಕೆಲವು ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಅಂದಾಗ ಕೂದಲು ಸಂಪೂರ್ಣ ಸ್ವಚ್ಛವಾಗಿ, ಡ್ಯಾಮೇಜ್ ಆಗಲ್ಲ.

    MORE
    GALLERIES

  • 38

    Holi Hair Care: ಹೋಳಿ ಆಡುವ ಮುನ್ನ ಇರಲಿ ಎಚ್ಚರ; ಮೊದಲೇ ಕೂದಲನ್ನು ಹೀಗೆ ಕೇರ್ ಮಾಡಿದ್ರೆ ಒಳ್ಳೆಯದು

    ಹೋಳಿ ಬಣ್ಣವಾಡುವ ಮೊದಲು ಕೂದಲಿಗೆ ಎಣ್ಣೆ ಹಚ್ಚಿದರೆ ಅದು ಕೂದಲಿಗೆ ಹತ್ತಿದ ಬಣ್ಣವನ್ನು ಬೇಗ ತೊಡೆದು ಹಾಕಲು ಸಹಾಯ ಮಾಡುತ್ತದೆ. ಬೇಗ ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಮತ್ತು ಕೂದಲಿನ ಹಾನಿ ತಡೆಯುತ್ತದೆ.

    MORE
    GALLERIES

  • 48

    Holi Hair Care: ಹೋಳಿ ಆಡುವ ಮುನ್ನ ಇರಲಿ ಎಚ್ಚರ; ಮೊದಲೇ ಕೂದಲನ್ನು ಹೀಗೆ ಕೇರ್ ಮಾಡಿದ್ರೆ ಒಳ್ಳೆಯದು

    ತೆಂಗಿನ ಎಣ್ಣೆಯನ್ನು ಬಳಸಿ. ಹೋಳಿ ಆಡುವ ಹಿಂದಿನ ರಾತ್ರಿ ತೆಂಗಿನ ಎಣ್ಣೆಯನ್ನು ಲಘುವಾಗಿ ಬೆಚ್ಚಗೆ ಮಾಡಿ. ಮತ್ತು ರಾತ್ರಿಯಲ್ಲಿ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿ. ಕೂದಲನ್ನು ಎಣ್ಣೆಯಿಂದ ಚೆನ್ನಾಗಿ ಕವರ್ ಮಾಡಿ. ಇದರಿಂದ ನೆತ್ತಿ ಮತ್ತು ಕೂದಲಿಗೆ ಆಳವಾಗಿ ಬಣ್ಣ ತಾಗುವುದಿಲ್ಲ.

    MORE
    GALLERIES

  • 58

    Holi Hair Care: ಹೋಳಿ ಆಡುವ ಮುನ್ನ ಇರಲಿ ಎಚ್ಚರ; ಮೊದಲೇ ಕೂದಲನ್ನು ಹೀಗೆ ಕೇರ್ ಮಾಡಿದ್ರೆ ಒಳ್ಳೆಯದು

    ಹೋಳಿ ಆಡುವ ಮೊದಲು ಕೂದಲಿಗೆ ಬಾದಾಮಿ ಎಣ್ಣೆಯನ್ನು ಹಚ್ಚಿರಿ. ವಿಟಮಿನ್-ಇ ಸಮೃದ್ಧ ಬಾದಾಮಿ ಎಣ್ಣೆಯು ಕೂದಲಿಗೆ ರಕ್ಷಣೆ ನೀಡುತ್ತದೆ. ಜೊತೆಗೆ ಹೊಳಪನ್ನು ಕೂಡ ನೀಡುತ್ತದೆ. ಹೋಳಿ ಆಡುವ ಒಂದು ಅಥವಾ ಎರಡು ಗಂಟೆಗಳ ಮೊದಲು ಈ ಎಣ್ಣೆಯನ್ನು ಅನ್ವಯಿಸಿ.

    MORE
    GALLERIES

  • 68

    Holi Hair Care: ಹೋಳಿ ಆಡುವ ಮುನ್ನ ಇರಲಿ ಎಚ್ಚರ; ಮೊದಲೇ ಕೂದಲನ್ನು ಹೀಗೆ ಕೇರ್ ಮಾಡಿದ್ರೆ ಒಳ್ಳೆಯದು

    ಹೋಳಿ ಆಡುವ ಒಂದು ಅಥವಾ ಎರಡು ಗಂಟೆಗಳ ಮೊದಲು ಆಲಿವ್ ಎಣ್ಣೆಯನ್ನು ಕೂದಲಿಗೆ ಅನ್ವಯಿಸಿ. ಆಲಿವ್ ಎಣ್ಣೆಯು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಹೋಳಿ ಆಡುವ ಒಂದು ಗಂಟೆ ಮೊದಲು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಇದು ಕೂದಲ ಆರೋಗ್ಯ ಕಾಪಾಡುತ್ತದೆ.

    MORE
    GALLERIES

  • 78

    Holi Hair Care: ಹೋಳಿ ಆಡುವ ಮುನ್ನ ಇರಲಿ ಎಚ್ಚರ; ಮೊದಲೇ ಕೂದಲನ್ನು ಹೀಗೆ ಕೇರ್ ಮಾಡಿದ್ರೆ ಒಳ್ಳೆಯದು

    ಹೋಳಿ ಆಡುವ ಒಂದು ಅಥವಾ ಎರಡು ಗಂಟೆಗಳ ಮೊದಲು ಆಮ್ಲಾ ಎಣ್ಣೆಯನ್ನು ಕೂದಲಿಗೆ ಹಚ್ಚಿರಿ. ಇದು ಕೂದಲಿಗೆ ಸಾಕಷ್ಟು ಪ್ರಯೋಜನಕಾರಿ. ಭಾರತೀಯ ಮನೆಗಳಲ್ಲಿ ತಲೆಮಾರುಗಳಿಂದ ಬಳಸಲಾಗುತ್ತಿದೆ. ಆಮ್ಲಾ ಎಣ್ಣೆಯು ತನ್ನ ಗುಣಗಳಿಂದ ಕೂದಲ ಆರೈಕೆ ಮಾಡುತ್ತದೆ.

    MORE
    GALLERIES

  • 88

    Holi Hair Care: ಹೋಳಿ ಆಡುವ ಮುನ್ನ ಇರಲಿ ಎಚ್ಚರ; ಮೊದಲೇ ಕೂದಲನ್ನು ಹೀಗೆ ಕೇರ್ ಮಾಡಿದ್ರೆ ಒಳ್ಳೆಯದು

    ಹೋಳಿ ಆಡುವ ಒಂದು ಅಥವಾ ಎರಡು ಗಂಟೆಗಳ ಮೊದಲು ಈ ಎಣ್ಣೆಗಳನ್ನು ಹಚ್ಚಿದರೆ ಬಣ್ಣವು ನೆತ್ತಿ ಮತ್ತು ಕೂದಲಿಗೆ ಬೇಗ ತಾಗುವುದಿಲ್ಲ. ಕೂದಲನ್ನು ಬೇಗ ಸ್ವಚ್ಛಗೊಳಿಸಬಹುದು.ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ನೆತ್ತಿ ಮತ್ತು ಕೂದಲು ಹಾನಿ ತಡೆಯಬಹುದು.

    MORE
    GALLERIES