ತರಕಾರಿಗಳು ನಮ್ಮನ್ನು ರೋಗಗಳಿಂದ ರಕ್ಷಣೆ ಮಾಡುತ್ತವೆ. ಈ ತರಕಾರಿಗಳಲ್ಲಿ ಒಂದು ಬೀಟ್ರೂಟ್ ಆಗಿದೆ. ಬೇಸಿಗೆಯಲ್ಲಿ ದೇಹಕ್ಕೆ ಇದು ತಂಪು ನೀಡುತ್ತದೆ. ಕೆಂಪು ಗಡ್ಡೆ ಹೊಂದಿರುವ ಈ ತರಕಾರಿ ಪೋಷಕಾಂಶಗಳ ಉಗ್ರಾಣ. ಇದು ನಮ್ಮ ದೇಹದ ಅಂಗಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಮೆಗ್ನೀಸಿಯಮ್, ಫೋಲೇಟ್, ಪೊಟ್ಯಾಸಿಯಮ್, ವಿಟಮಿನ್ ಬಿ6, ಕಾರ್ಬ್, ಕಬ್ಬಿಣ ಪೋಷಕಾಂಶ ಒದಗಿಸುತ್ತದೆ.