ನಮ್ಮ ತ್ವಚೆಯು ಕಾಂತಿಯುತವಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಎಲ್ಲರೂ ಬಯಸುತ್ತೇವೆ. ವಾಸ್ತವವಾಗಿ, ಮಾಲಿನ್ಯ, ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿಯಿಂದ ಚರ್ಮವು ಮಂದವಾಗುತ್ತದೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಹೆಚ್ಚಾಗಿ ಬ್ಯೂಟಿ ಪಾರ್ಲರ್ ಮೇಲೆ ಅವಲಂಬಿತರಾಗಿರುತ್ತೇವೆ. ಆದರೆ ಪಾರ್ಲರ್ಗೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ನೀವು ಮನೆಯಲ್ಲಿ ನಿಮ್ಮ ತ್ವಚೆಗೆ ಆರೈಕೆ ಮಾಡಿಕೊಳ್ಳಲು ಬಯಸಿದರೆ, ಮುಲ್ತಾನಿ ಮಿಟ್ಟಿ ಬಳಸಿ.
ಮುಲ್ತಾನಿ ಮಿಟ್ಟಿ ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ತಂಪಾಗಿಸುತ್ತದೆ. ಆದರೆ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಇದರ ಸಹಾಯದಿಂದ ನಿಮ್ಮ ತ್ವಚೆಯು ಕಾಂತಿಯುತವಾಗಿರುತ್ತದೆ. ವಾಸ್ತವವಾಗಿ, ಇದು ನಿಮ್ಮ ಚರ್ಮವನ್ನು ಬಹಳ ಮೃದುವಾಗಿ ಎಫ್ಫೋಲಿಯೇಟ್ ಮಾಡುತ್ತದೆ ಮತ್ತು ಅದರ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇನ್ನೂ ಈ ಬಗ್ಗೆ RVMUA ಅಕಾಡೆಮಿಯ ಸಂಸ್ಥಾಪಕಿ, ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಮತ್ತು ಸ್ಕಿನ್ ಕೇರ್ ಎಕ್ಸ್ಪರ್ಟ್ ರಿಯಾ ವಶಿಷ್ಟ್ ಅವರು, ಮುಲ್ತಾನಿ ಮಿಟ್ಟಿ ಸಹಾಯದಿಂದ ನೀವು ಮಾಡಬಹುದಾದ ಕೆಲವು ಫೇಸ್ ಪ್ಯಾಕ್ಗಳ ಬಗ್ಗೆ ತಿಳಿಸಿದ್ದಾರೆ. ಇದು ನಿಮ್ಮ ಚರ್ಮವನ್ನು ಹಗುರಗೊಳಿಸುತ್ತದೆ.
ಫೇಸ್ ಪ್ಯಾಕ್ ಮಾಡುವುದು ಹೇಗೆ?: ಮೊದಲು ಸಣ್ಣ ಬಟ್ಟಲಿನಲ್ಲಿ ಮುಲ್ತಾನಿ ಮಿಟ್ಟಿ, ರೋಸ್ ವಾಟರ್ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ನಯವಾದ ಪೇಸ್ಟ್ ಮಾಡಲು ಅಗತ್ಯವಿದ್ದರೆ ನೀವು ಇನ್ನೂ ಸ್ವಲ್ಪ ರೋಸ್ ವಾಟರ್ ಅನ್ನು ಸೇರಿಸಬಹುದು. ಈಗ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ, ಅದನ್ನು ಹಚ್ಚಿ ಮತ್ತು 15 ರಿಂದ 20 ನಿಮಿಷಗಳ ಕಾಲ ಬಿಡಿ. ಕೊನೆಗೆ, ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.
ಮುಲ್ತಾನಿ ಮಿಟ್ಟಿ ಮತ್ತು ಶ್ರೀಗಂಧದ ಫೇಸ್ ಪ್ಯಾಕ್: ನಿಮ್ಮ ತ್ವಚೆಯು ನುಣುಪಾಗಿದ್ದರೆ ಮತ್ತು ನಿಮ್ಮ ತ್ವಚೆಗೆ ಕಾಂತಿಯುತ ನೋಟವನ್ನು ನೀಡಬೇಕಾದರೆ, ಮುಲ್ತಾನಿ ಮಿಟ್ಟಿಯೊಂದಿಗೆ ಶ್ರೀಗಂಧದ ಪುಡಿಯನ್ನು ಮಿಶ್ರಣ ಮಾಡಿ. ಈ ಫೇಸ್ ಪ್ಯಾಕ್ ನಿಮ್ಮ ಚರ್ಮವನ್ನು ತಂಪಾಗಿಸಲು ರೋಸ್ ವಾಟರ್ ಅನ್ನು ಬಳಸುತ್ತದೆ. ಮುಲ್ತಾನಿ ಮಿಟ್ಟಿ ಮತ್ತು ಶ್ರೀಗಂಧದ ಫೇಸ್ ಪ್ಯಾಕ್ ಮಾಡಲು ಬೇಕಾಗುವ ಸಾಮಾಗ್ರಿಗಳು: ಮುಲ್ತಾನಿ ಮಿಟ್ಟಿ - 1 ಚಮಚ, ಶ್ರೀಗಂಧದ ಪುಡಿ - ಅರ್ಧ ಚಮಚ, ರೋಸ್ ವಾಟರ್ - 1 ಚಮಚ.
ಫೇಸ್ ಪ್ಯಾಕ್ ಮಾಡುವುದು ಹೇಗೆ: ಮೊದಲು ಒಂದು ಬೌಲ್ ನಲ್ಲಿ ಮುಲ್ತಾನಿ ಮಿಟ್ಟಿ, ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ. ಪೇಸ್ಟ್ ತುಂಬಾ ಗಟ್ಟಿ ಆಗಿರಬಾರದು ಅಥವಾ ತುಂಬಾ ತೆಳ್ಳಗಿರಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದಕ್ಕಾಗಿ ನೀವು ರೋಸ್ ವಾಟರ್ ಪ್ರಮಾಣವನ್ನು ಸರಿಹೊಂದಿಸಬೇಕು. ಈಗ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ ಮತ್ತು ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಸುಮಾರು 15-20 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ.
ಮುಲ್ತಾನಿ ಮಿಟ್ಟಿ, ಮೊಸರಿನೊಂದಿಗೆ ಫೇಸ್ ಮಾಸ್ಕ್ ತಯಾರಿಸಿ: ಮೊಸರಿನಲ್ಲಿರುವ ಮಾಯಿಶ್ಚರೈಸಿಂಗ್ ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ. ಮುಲ್ತಾನಿ ಮಿಟ್ಟಿ ಚರ್ಮವನ್ನು ಸ್ವಚ್ಛವಾಗಿ ಮತ್ತು ಸ್ಪಷ್ಟವಾಗಿಸಲು ಸಹಾಯ ಮಾಡುತ್ತದೆ. ಮುಲ್ತಾನಿ ಮಿಟ್ಟಿ, ಮೊಸರಿನ ಫೇಸ್ ಪ್ಯಾಕ್ ಮಾಡಲು ಬೇಕಾಗುವ ಸಾಮಾಗ್ರಿಗಳು: ಮೊಸರು - 1 ಚಿಕ್ಕ ಬಟ್ಟಲು, ಮುಲ್ತಾನಿ ಮಿಟ್ಟಿ - 2-3 ಚಮಚ.
ಮುಲ್ತಾನಿ ಮಿಟ್ಟಿ, ಮೊಸರಿನ ಫೇಸ್ ಪ್ಯಾಕ್ ಮಾಡುವುದು ಹೇಗೆ?: ಮೊದಲು ಸ್ವಲ್ಪ ಮೊಸರು ತೆಗೆದುಕೊಂಡು ಮುಲ್ತಾನಿ ಮಿಟ್ಟಿಯಲ್ಲಿ ಮಿಶ್ರಣ ಮಾಡಿ. ನಯವಾದ ಪೇಸ್ಟ್ ಆಗುವಂತೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ ನಂತರ 15 ರಿಂದ 20 ನಿಮಿಷಗಳ ಕಾಲ ಒಣಗಲು ಕಾಯಿರಿ. ನಂತರ ತೊಳೆಯಿರಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)