ಬೇಸಿಗೆ ಎಂದ ತಕ್ಷಣ ರಜಾದಿನಗಳು ಮತ್ತು ಸೂರ್ಯನ ಬಿಸಿಲು ನಮಗೆ ನೆನಪಾಗುತ್ತದೆ. ಹೀಗಿದ್ದರೂ ರಜೆ ಸಿಗುತ್ತದೆ ಎಂಬ ಖುಷಿಯಲ್ಲಿ ನಾವಿರುತ್ತೇವೆ. ಆದರೆ ಬೇಸಿಗೆಯ ಬಿಸಿಲ ತಾಪ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅಂತಹವುಗಳಲ್ಲಿ ಒಂದು ಸಮಸ್ಯೆ ಅಂದರೆ ತುಟಿಗಳ ಶುಷ್ಕತೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಅತಿಯಾದ ಶಾಖ ಮತ್ತು ಸೂರ್ಯನ ಕಿರಣಗಳಿಂದ ತುಟಿಗಳು ಒಣಗುತ್ತವೆ ಮತ್ತು ಬಿರುಕು ಬಿಡುತ್ತವೆ. ಇದು ಅನೇಕ ಅನಾನುಕೂಲತೆಗಳನ್ನು ಉಂಟುಮಾಡಬಹುದು. ಸದ್ಯ ನಾವಿಂದು ಬೇಸಿಗೆಯ ಬಿಸಿಲಿನಿಂದ ನಿಮ್ಮ ತುಟಿಗಳನ್ನು ರಕ್ಷಿಸುವ ಕೆಲವು ಟಿಪ್ಸ್ಗಳನ್ನು ನೀಡುತ್ತೇವೆ.