ಹರ್ಬಲ್ ಬಾತ್ ಪೌಡರ್ ತಯಾರಿಸಲು ಶ್ರೀಗಂಧದ ಪುಡಿ, ತುಳಸಿ ಪುಡಿ, ಬೇವಿನ ಪುಡಿ, ಲೈಕೋರೈಸ್ ಪುಡಿ, ಅರಿಶಿನ ಪುಡಿ, ಗುಲಾಬಿ ದಳದ ಪುಡಿ, ಗುಲಾಬಿ ನೀರು ಬೇಕು. ಮೊದಲು ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಒಂದು ಡಬ್ಬಿಗೆ ಹಾಕಿ ತೆಗೆದಿರಿಸಿ. ಸ್ನಾನ ಮಾಡುವ ಮೊದಲು ಹರ್ಬಲ್ ಬಾತ್ ಪೌಡರ್, ಚಮಚ ರೋಸ್ ವಾಟರ್ ನೊಂದಿಗೆ ಬೆರೆಸಿ ನಯವಾದ ಪೇಸ್ಟ್ ಮಾಡಿ.