Barley Water: ಜೀರ್ಣಾಂಗ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಹೊಡೆದೋಡಿಸುತ್ತೆ ಬಾರ್ಲಿ ನೀರು!

ಆರೋಗ್ಯಕ್ಕೆ ಮತ್ತು ಹೆಲ್ದೀ ಜೀವನಕ್ಕೆ ಹಲವು ಪದಾರ್ಥಗಳ ಸೇವನೆ ಮಾಡುವುದು ಮತ್ತು ಉತ್ತಮ ಪೋಷಕಾಂಶ ಸಮೃದ್ಧ ಆಹಾರ ತುಂಬಾ ಮುಖ್ಯ. ಪೋಷಕಾಂಶ ಸಮೃದ್ಧ ಆಹಾರಗಳಲ್ಲಿ ಬಾರ್ಲಿ ಸಹ ಒಂದು. ಇದರ ಕಾಳುಗಳನ್ನು ಶತಮಾನಗಳಿಂದ ಆರೋಗ್ಯ ಪ್ರಯೋಜನಕ್ಕಾಗಿ ಬಳಕೆ ಮಾಡಲಾಗ್ತಿದೆ.

First published:

  • 18

    Barley Water: ಜೀರ್ಣಾಂಗ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಹೊಡೆದೋಡಿಸುತ್ತೆ ಬಾರ್ಲಿ ನೀರು!

    ಆರೋಗ್ಯಕ್ಕೆ ಮತ್ತು ಹೆಲ್ದೀ ಜೀವನಕ್ಕೆ ಉತ್ತಮ ಪೋಷಕಾಂಶ ಸಮೃದ್ಧ ಆಹಾರ  ತಿನ್ನುವುದು ತುಂಬಾ ಮುಖ್ಯ. ಪೋಷಕಾಂಶ ಸಮೃದ್ಧ ಆಹಾರಗಳಲ್ಲಿ ಬಾರ್ಲಿ ಸಹ ಒಂದು. ಇದರ ಕಾಳುಗಳನ್ನು ಶತಮಾನಗಳಿಂದ ಆರೋಗ್ಯ ಪ್ರಯೋಜನಕ್ಕಾಗಿ ಬಳಕೆ ಮಾಡಲಾಗ್ತಿದೆ.

    MORE
    GALLERIES

  • 28

    Barley Water: ಜೀರ್ಣಾಂಗ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಹೊಡೆದೋಡಿಸುತ್ತೆ ಬಾರ್ಲಿ ನೀರು!

    ಬಾರ್ಲಿಯು, ವಿಟಮಿನ್ ಬಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಅಮೈನೋ ಆಮ್ಲ ಹಾಗೂ ಇತರೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬಾರ್ಲಿ ನೀರು ದೇಹಕ್ಕೆ ವಿವಿಧ ಪ್ರಯೋಜನ ನೀಡುತ್ತದೆ. ತೂಕ ಇಳಿಕೆಯಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆ ತಡೆಗೂ ಬಾರ್ಲಿ ನೀರು ಸಹಾಯ ಮಾಡುತ್ತದೆ.

    MORE
    GALLERIES

  • 38

    Barley Water: ಜೀರ್ಣಾಂಗ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಹೊಡೆದೋಡಿಸುತ್ತೆ ಬಾರ್ಲಿ ನೀರು!

    ಬಾರ್ಲಿ ನೀರನ್ನು ನೀವು ತಣ್ಣಗಿರುವಾಗ ಹಾಗೂ ಉಗುರು ಬೆಚ್ಚಗಿರುವಾಗ ವಿವಿಧ ಪದಾರ್ಥಗಳನ್ನು ಮಿಕ್ಸ್ ಮಾಡಿ ಕುಡಿಯಬಹುದು. ಬಾರ್ಲಿ ನೀರು ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಕೊರತೆ ನೀಗಿಸುತ್ತದೆ. ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಸೆಲೆನಿಯಂನಂತಹ ಖನಿಜಗಳು ಇದರಲ್ಲಿವೆ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿ ಕಡಿಮೆ.

    MORE
    GALLERIES

  • 48

    Barley Water: ಜೀರ್ಣಾಂಗ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಹೊಡೆದೋಡಿಸುತ್ತೆ ಬಾರ್ಲಿ ನೀರು!

    ಬಾರ್ಲಿ ನೀರು, ತೂಕ ನಿಯಂತ್ರಿಸುತ್ತದೆ. ಇದು ದೇಹದಲ್ಲಿ ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ ಬಾರ್ಲಿ ನೀರು ಜೀರ್ಣಕಾರಿ ಸಮಸ್ಯೆ ನಿವಾರಿಸುತ್ತದೆ. ಬಾರ್ಲಿ ನೀರು ಕಡಿಮೆ ಕ್ಯಾಲೋರಿ ಪಾನೀಯವಾಗಿದೆ. ಹಾಗಾಗಿ ಇದು ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ. ಬಾರ್ಲಿ ನೀರಿನಲ್ಲಿರುವ ಫೈಬರ್ ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.

    MORE
    GALLERIES

  • 58

    Barley Water: ಜೀರ್ಣಾಂಗ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಹೊಡೆದೋಡಿಸುತ್ತೆ ಬಾರ್ಲಿ ನೀರು!

    ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕಲು ಬಾರ್ಲಿ ನೀರು ಸಹಕಾರಿ. ನಿಯಮಿತವಾಗಿ ಬಾರ್ಲಿ ನೀರನ್ನು ಕುಡಿದರೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಫೈಬರ್ ಭರಿತ ಬಾರ್ಲಿ ನೀರು ದೇಹವನ್ನು ನಿರ್ವಿಷಗೊಳಿಸಲು ಸಹಕಾರಿ. ಪಿತ್ತರಸ ಆಮ್ಲವನ್ನು ನಿಯಂತ್ರಿಸುತ್ತದೆ. ಅಸಿಡಿಟಿ ಮತ್ತು ಜೀರ್ಣಕಾರಿ ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES

  • 68

    Barley Water: ಜೀರ್ಣಾಂಗ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಹೊಡೆದೋಡಿಸುತ್ತೆ ಬಾರ್ಲಿ ನೀರು!

    ರಕ್ತದ ಅಧಿಕ ಕೊಲೆಸ್ಟ್ರಾಲ್ ಅಪಾಯ ಕಡಿಮೆ ಮಾಡಲು ಬಾರ್ಲಿ ನೀರು ಸಹಕಾರಿ. ಕೆಟ್ಟ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದ ಸಾಧ್ಯತೆ ಕಡಿಮೆ ಮಾಡುತ್ತದೆ. ಪಾರ್ಶ್ವವಾಯು ಅಪಾಯ, ಹೃದ್ರೋಗ ಸಮಸ್ಯೆ ಕಡಿಮೆ ಮಾಡುತ್ತದೆ. ಬಾರ್ಲಿ ನೀರು ಚರ್ಮದ ಆರೈಕೆಗೆ ಸಹಕಾರಿ ಆಗಿದೆ. ಇದು ವಯಸ್ಸಾಗುವಿಕೆ ಲಕ್ಷಣ ಮತ್ತು ಸ್ವತಂತ್ರ ರಾಡಿಕಲ್ ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES

  • 78

    Barley Water: ಜೀರ್ಣಾಂಗ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಹೊಡೆದೋಡಿಸುತ್ತೆ ಬಾರ್ಲಿ ನೀರು!

    ತ್ವಚೆಯ ಮೊಡವೆ ಮತ್ತು ಕಲೆ, ಸುಕ್ಕುಗಳ ಸಮಸ್ಯೆ ಹೋಗಲಾಡಿಸುತ್ತದೆ. ನೋವು ಮತ್ತು ಊತದಿಂದ ಪರಿಹಾರ ನೀಡುತ್ತದೆ. ಬಾರ್ಲಿ ನೀರು ಹಸಿವನ್ನು ನಿಯಂತ್ರಿಸುತ್ತದೆ. ಚಯಾಪಚಯ ಹೆಚ್ಚಿಸುತ್ತದೆ. ಟೈಪ್ 2 ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ. ಇದು ಮಧುಮೇಹದ ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES

  • 88

    Barley Water: ಜೀರ್ಣಾಂಗ ಸಮಸ್ಯೆ, ಕೆಟ್ಟ ಕೊಲೆಸ್ಟ್ರಾಲ್ ಹೊಡೆದೋಡಿಸುತ್ತೆ ಬಾರ್ಲಿ ನೀರು!

    ಯುಟಿಐ ಸಮಸ್ಯೆ ತಡೆಗೆ ಪ್ರತಿನಿತ್ಯ ಬಾರ್ಲಿ ನೀರು ಸೇವಿಸಿ. ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ ಕಡಿಮೆ ಮಾಡುತ್ತದೆ. ಯುಟಿಐಗೆ ಇದು ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ. ದೇಹವನ್ನು ಆರೋಗ್ಯಕರ ಮತ್ತು ಬಲಿಷ್ಟವಾಗಿಸುತ್ತದೆ. ಮೂತ್ರಪಿಂಡದ ಕಲ್ಲುಗಳ ರಚನೆ ತಡೆಯುತ್ತದೆ.

    MORE
    GALLERIES