ತ್ವಚ್ಛೆಯ ಸೌಂದರ್ಯ: ಒಂದರಿಂದ ಎರಡು ಟೀ ಚಮಚ ಅಡುಗೆ ಸೋಡಾ ವನ್ನು ಫಿಲ್ಟರ್ ಮಾಡಿದ ನೀರು ಅಥವಾ ರೋಸ್ ವಾಟರ್ ನೊಂದಿಗೆ ಬೆರೆಸಿ ಹಚ್ಚುವುದರಿಂದ ಸ್ಪಷ್ಟ ಮತ್ತು ಕಾಂತಿಯುತ ಚರ್ಮವನ್ನು ಪಡೆಯಬಹುದು. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಂದು ನಿಮಿಷ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ವಾರಕ್ಕೆ 2-3 ಬಾರಿ ಮಾಡುವುದರಿಂದ ಮೊಡವೆಗಳಿಂದ ಮುಕ್ತಿ ಪಡೆಯಬಹುದು.