Health Tips: ಬಾಯಿಂದ ಗಬ್ಬು ನಾತ ಬರ್ತಿದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ
Home Remedies: ಸಾಮಾನ್ಯವಾಗಿ ಹಸಿರು ಈರುಳ್ಳಿ ತಿನ್ನಲು ತುಂಬಾ ಒಳ್ಳೆಯದು. ಹೆಚ್ಚಿನವರು ಇದನ್ನು ಇಷ್ಟಪಡುತ್ತಾರೆ. ಆದರೆ ಹಾಗೆ ಈರುಳ್ಳಿ ತಿಂದರೆ ಬಾಯಿ ದುರ್ವಾಸನೆ ಬರುತ್ತದೆ. ಹೀಗಾಗಿ ಈರುಳ್ಳಿ ತಿನ್ನಲು ಹೆದರುತ್ತಾರೆ. ಆದರೆ ನೀವು ಈ ಸರಳ ಸಲಹೆಗಳನ್ನು ಅನುಸರಿಸಿದರೆ ಬಾಯಿಯ ದುರ್ವಾಸನೆಯಿಂದ ಮುಕ್ತಿ ಪಡೆಯಬಹುದು.
ಈರುಳ್ಳಿ ಮಾಡುವ ಒಳ್ಳೆಯದನ್ನ ತಾಯಿಯೂ ಮಾಡುವುದಿಲ್ಲ ಎಂಬ ಗಾದೆ ಮಾತಿದೆ. ನಿಜವಾಗಿ ಈರುಳ್ಳಿಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಹಸಿರು ಈರುಳ್ಳಿ ತಿನ್ನುವುದು ದೇಹಕ್ಕೆ ತುಂಬಾ ಒಳ್ಳೆಯದು.
2/ 8
ಕರಿ ಮತ್ತು ಇತರ ಆಹಾರಗಳನ್ನು ಹೊರತುಪಡಿಸಿ ನೇರವಾಗಿ ಈರುಳ್ಳಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಈರುಳ್ಳಿ ಬಹಳ ಮುಖ್ಯ. ಅನೇಕ ಆರೋಗ್ಯ ಸಮಸ್ಯೆಗಳಿಗೆ ದಿವ್ಯ ಔಷಧವಾಗಿ ಕೆಲಸ ಮಾಡುತ್ತದೆ.
3/ 8
ಕೊತ್ತಂಬರಿ ಸೊಪ್ಪು ಬಾಯಿಯ ದುರ್ವಾಸನೆ ಹೋಗಲಾಡಿಸುವ ಪರಿಣಾಮಕಾರಿ ಮಾರ್ಗ. ಇದನ್ನು ತಿಂದರೆ ಬಾಯಿ ದುರ್ವಾಸನೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಹಸಿ ಕೊತ್ತಂಬರಿ ಸೊಪ್ಪನ್ನು ತಿನ್ನಬೇಕೆಂದರೆ ಅದರ ಎಲೆಗಳನ್ನು ಸ್ವಲ್ಪ ತೆಗೆದುಕೊಂಡು ತೊಳೆದು ಸ್ವಲ್ಪ ಹೊತ್ತು ಜಗಿಯಿರಿ.
4/ 8
ಪುದೀನಾ ಕೂಡ ಒಳ್ಳೆಯದು. ಪುದೀನಾ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಹಸಿರು ಈರುಳ್ಳಿ ವಾಸನೆ ಹೋಗಲಾಡಿಸಲು ತಿಂದ ನಂತರ ಪುದೀನಾ ನೀರನ್ನು ಮಾಡಿ ಕುಡಿಯಿರಿ. ಇದಕ್ಕೆ ಶುಂಠಿ ಸೇರಿಸಿ ಕುಡಿದರೆ ಹೆಚ್ಚು ಉತ್ತಮ.
5/ 8
ಹಸಿರು ಈರುಳ್ಳಿ ತಿಂದ ನಂತರ ಮಾತ್ರವಲ್ಲ ಸಾಮಾನ್ಯವಾಗಿ ಬಾಯಿಯ ದುರ್ವಾಸನೆ ಹೆಚ್ಚಾದರೆ ಅದಕ್ಕೆ ಔಷಧಿ ಏಲಕ್ಕಿ ಮಾತ್ರ. ಬಾಯಿಯ ದುರ್ವಾಸನೆ ಹೋಗಲಾಡಿಸಲು ಎಲ್ಲಕ್ಕಿಂತ ಉತ್ತಮ ಎನ್ನುತ್ತಾರೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಲಕ್ಕಿಯನ್ನು ನೀರಿನಲ್ಲಿ ನೆನೆಸಿ ಕುಡಿದರೆ ಆರೋಗ್ಯವೂ ಸುಧಾರಿಸುತ್ತದೆ.
6/ 8
ತಾಜಾ ಹಣ್ಣಿನ ಪ್ರಯೋಜನವೂ ಬಹಳಷ್ಟಿದೆ ಇದೆ. ಹಸಿ ಈರುಳ್ಳಿ ತಿಂದ ನಂತರ ಬಾಯಿಯ ದುರ್ವಾಸನೆ ತಡೆಯಲು ಇವು ನೆರವಾಗುತ್ತವೆ. ಆ ದುರ್ವಾಸನೆ ಹೋಗಲಾಡಿಸಲು ತಾಜಾ ಹಣ್ಣುಗಳನ್ನು ಸೇವಿಸಿ. ತಾಜಾ ಹಣ್ಣುಗಳು ಬಾಯಿಯಲ್ಲಿ ವಾಸನೆಯನ್ನು ಕಡಿಮೆ ಮಾಡುತ್ತದೆ.
7/ 8
ಆಪಲ್ ಸೈಡರ್ ವಿನೆಗರ್, ಬಾಯಿಯ ದುರ್ವಾಸನೆ ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಈರುಳ್ಳಿ ತಿಂದ ನಂತರ ಬಾಯಿಯ ದುರ್ವಾಸನೆ ಹೋಗಲಾಡಿಸಲು ಇದನ್ನು ಬಳಸುವುದು ತುಂಬಾ ಸುಲಭ. ನೀರಿಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಕುಡಿಯಿರಿ.
8/ 8
ಈರುಳ್ಳಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೇಲಾಗಿ, ಕರೋನಾ ಮತ್ತೆ ಹೆಚ್ಚುತ್ತಿರುವಾಗ ಪ್ರತಿಯೊಬ್ಬರೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕಾಗಿದೆ. ಇದಕ್ಕೆ ಈರುಳ್ಳಿ ತುಂಬಾ ಸಹಾಯಕ.