ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಸೇರಿದರೆ ಹಲವು ಆರೋಗ್ಯ ಸಮಸ್ಯೆ ಹುಟ್ಟು ಹಾಕುತ್ತದೆ. ಇದನ್ನು ತೆಗೆದು ಹಾಕುವುದು ತುಂಬಾ ಮುಖ್ಯ. ದೇಹದ ಕೆಟ್ಟ ಕೊಲೆಸ್ಟ್ರಾಲ್ ಒಂದು ಗಂಭೀರ ಸಮಸ್ಯೆ. ಇದನ್ನು ಬೇಗ ತೊಡೆದು ಹಾಕುವುದು ಆರೋಗ್ಯಕ್ಕೆ ಉತ್ತಮ. ಕೆಟ್ಟ ಕೊಲೆಸ್ಟ್ರಾಲ್ ತೆಗೆದು ಹಾಕಲು ಮಾರುಕಟ್ಟೆಯಲ್ಲಿ ಹಲವು ರಾಸಾಯನಿಕ ಔಷಧಗಳಿವೆ. ಆದರೆ ಇದಕ್ಕಿಂತ ನೈಸರ್ಗಿಕವಾಗಿಯೂ ನೀವು ಕೊಲೆಸ್ಟ್ರಾಲ್ ತೊಡೆದು ಹಾಕಬಹುದು.
ಅರಿಶಿನ ಸಾರವು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಿಸುವುದನ್ನು ತಡೆಯುತ್ತದೆ. ಪ್ರತಿದಿನ ನೀವು ಸೇವಿಸಬಹುದಾದ ಅರಿಶಿನ ಪ್ರಮಾಣ ಎಷ್ಟಿರಬೇಕು? ನೋಡೋಣ. 3 ಗ್ರಾಂ ಮತ್ತು 5 ಗ್ರಾಂ ತೂಕದ ಕಚ್ಚಾ ಅರಿಶಿನವು 500 mg ಕರ್ಕ್ಯುಮಿನ್ ಒದಗಿಸುತ್ತದೆ. ಅರಿಶಿನ ಸೇವನೆಯು ದಿನಕ್ಕೆ 500 ರಿಂದ 2,000 ಮಿಲಿಗ್ರಾಂ ನಷ್ಟಿರಲಿ.
ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಜೈವಿಕ ಸಕ್ರಿಯ ಸಂಯುಕ್ತವಿದೆ. ಇದು ಅನೇಕ ಗಂಭೀರ ಆರೋಗ್ಯ ಸಮಸ್ಯೆ ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಇದು ದೇಹದೊಳಗೆ ಜೀವಕೋಶದ ಹಾನಿ ತಡೆಯುತ್ತದೆ. ಕರ್ಕ್ಯುಮಿನ್ ಸ್ವತಂತ್ರ ರಾಡಿಕಲ್ ಕೋಶಗಳನ್ನು ತಟಸ್ಥಗೊಳಿಸುತ್ತದೆ. ಅರಿಶಿನವು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ಕರ್ಕ್ಯುಮಿನ್ ನಿಮ್ಮ ರಕ್ತನಾಳಗಳ ಒಳಪದರದ ಕಾರ್ಯನಿರ್ವಹಣೆ ಸುಧಾರಿಸುತ್ತದೆ.