Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ

ದೇಹದಲ್ಲಿ ಬೊಜ್ಜು ಬೆಳೆಯುವುದು ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಬೆಳೆದಂತೆ ಕಾಯಿಲೆಗಳ ಸಂಖ್ಯೆಯು ಹೆಚ್ಚುತ್ತಾ ಹೋಗುತ್ತದೆ. ಕೊಲೆಸ್ಟ್ರಾಲ್ ಹೃದಯ ಕಾಯಿಲೆಗೆ, ಜೊತೆಗೆ ಪ್ರಾಣಹಾನಿಗೆ ಅತಿದೊಡ್ಡ ಕಾರಣವಾಗಿದೆ. ಇದಕ್ಕೆ ಮನೆಯಲ್ಲಿರುವ ಬೆಳ್ಳುಳ್ಳಿ ಮದ್ದಾಗುತ್ತಾ?

First published:

  • 18

    Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ

    ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮೊದಲು ಕಡಿಮೆ ಮಾಡಬೇಕು. ಇದಕ್ಕೆ ನೀವು ಬೆಳ್ಳುಳ್ಳಿ ಬಳಕೆ ಮಾಡಿ. ಇದು ಪರಿಣಾಮಕಾರಿ ಆಗಿದೆ. ಪ್ರತೀ ಮನೆಗಳಲ್ಲಿ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಇದರ ಸೇವನೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಸಮಸ್ಯೆ ನಿಯಂತ್ರಿಸುತ್ತದೆ.

    MORE
    GALLERIES

  • 28

    Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ

    ಹೃದಯ ಕಾಯಿಲೆಗೆ ಮತ್ತು ಅಪಾಯಕ್ಕೆ ಕಾರಣವಾಗುವ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವುದು ತುಂಬಾ ಮುಖ್ಯ. ಕೊಲೆಸ್ಟ್ರಾಲ್ ಒಂದು ಕೊಳಕು ವಸ್ತು. ಇದು ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ. ಬಳಿಕ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ.

    MORE
    GALLERIES

  • 38

    Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ

    ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರವಾಗುತ್ತಾ ಹೋದಂತೆ ದೇಹವು ಕಾಯಿಲೆಗಳ ಗೂಡಾಗುತ್ತದೆ. ಇದು ರಕ್ತನಾಳಗಳನ್ನು ನಿರ್ಬಂಧಿಸುತ್ತದೆ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ಹೃದಯಾಘಾತ ಮತ್ತು ನರ ಕಾಯಿಲೆಗಳ ಅಪಾಯ ಹೆಚ್ಚುತ್ತದೆ.

    MORE
    GALLERIES

  • 48

    Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ

    ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬೆಳ್ಳುಳ್ಳಿ ಮತ್ತು ನಿಂಬೆ ರಸ ಸೇವನೆ ಪರಿಣಾಮಕಾರಿ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯು ರೋಗ ನಿರೋಧಕ ವರ್ಧಕ, ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ.

    MORE
    GALLERIES

  • 58

    Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ

    ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಬೆಳ್ಳುಳ್ಳಿ ಮತ್ತು ನಿಂಬೆಯು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ಮತ್ತು ನಿಂಬೆ ರಸ ಒಟ್ಟಿಗೆ ಸೇವಿಸಿದರೆ ಲಿಪಿಡ್ ಮಟ್ಟಗಳು, ಫೈಬ್ರಿನೊಜೆನ್ ಮತ್ತು ಹೈಪರ್ಲಿಪಿಡೆಮಿಯಾ ರೋಗಿಗಳಲ್ಲಿ ರಕ್ತದೊತ್ತಡ ಸುಧಾರಿಸುತ್ತದೆ.

    MORE
    GALLERIES

  • 68

    Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ

    ದಿನಕ್ಕೆ ಅರ್ಧ ಅಥವಾ ಒಂದು ಬೆಳ್ಳುಳ್ಳಿ ಎಸಳು ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಸುಮಾರು 10 ಪ್ರತಿಶತ ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ಮತ್ತು ನಿಂಬೆ ರಸದ ಸಂಯೋಜನೆಯು ಕೆಟ್ಟ ಕೊಲೆಸ್ಟ್ರಾಲ್ ತೊಡೆದು ಹಾಕಲು ಪ್ರಯೋಜನಕಾರಿ ಆಗಿದೆ.

    MORE
    GALLERIES

  • 78

    Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ

    ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ ಸಹಕಾರಿ. ಬೆಳ್ಳುಳ್ಳಿ ಶಕ್ತಿಯುತ ಮೂಲಿಕೆ. ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯ ಉತ್ತೇಜಿಸುತ್ತವೆ. ಬೆಳ್ಳುಳ್ಳಿ ನಿಂಬೆ ಉತ್ಕರ್ಷಣ ನಿರೋಧಕಗಳ ನಿಧಿ. ಇದು ವಿಟಮಿನ್ ಸಿ ಹೊಂದಿದೆ. ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿ ತಪ್ಪಿಸುತ್ತದೆ.

    MORE
    GALLERIES

  • 88

    Garlic: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೆಳ್ಳುಳ್ಳಿ, ಇದರ ಆರೋಗ್ಯ ಗುಣಗಳ ಬಗ್ಗೆ ತಿಳ್ಕೊಳ್ಳಿ

    ಬೆಳ್ಳುಳ್ಳಿಯಲ್ಲಿರುವ ವಿಟಮಿನ್ ಬಿ 6 ಆರೋಗ್ಯಕರ ಕೆಂಪು ರಕ್ತ ಕಣಗಳ ರಕ್ಷಣೆಗೆ ಸಹಕಾರಿ. ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ. ಪ್ರತಿದಿನ ಒಂದು ಚಮಚ ಬೆಳ್ಳುಳ್ಳಿ ಮತ್ತು ನಿಂಬೆ ರಸ ಸೇವನೆ ದೇಹದ ಆರೋಗ್ಯ ಹೆಚ್ಚಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಕಾಯಿಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    MORE
    GALLERIES