ಬೆಟ್ಟದ ನೆಲ್ಲಿಕಾಯಿ: ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ತಜ್ಞರು ಹೇಳುತ್ತಾರೆ. ಇದು ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ನಿಧಾನಗೊಳಿಸುತ್ತದೆ ಮತ್ತು ತಲೆಹೊಟ್ಟನ್ನು ಸಹ ತಡೆಯುತ್ತದೆ. ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ನೆತ್ತಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಆ ಮೂಲಕ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಚಳಿಗಾಲದಲ್ಲಿ ಈ ಹಣ್ಣನ್ನು ಚ್ಯವನ್‌ಪ್ರಾಶ್ ರೂಪದಲ್ಲಿ, ಪುಡಿ ಮಾಡಿಕೊಂಡು, ಮಾತ್ರೆಯ ರೂಪದಲ್ಲಿ ಅಥವಾ ಜ್ಯೂಸ್ ಮಾಡಿಕೊಂಡು ಸಹ ಸೇವಿಸಬಹುದು.
ತೆಂಗಿನಕಾಯಿ: ತೆಂಗಿನಕಾಯಿ ಒಂದೇ ಆದರೂ ಅದರ ಪ್ರಯೋಜನಗಳು ಅನೇಕ. ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಸಬಹುದು. ಒಣ ತೆಂಗಿನಕಾಯಿಯನ್ನು ತಿಂಡಿಯಲ್ಲಿ ಸೇರಿಸಿಕೊಂಡು ತಿನ್ನಬಹುದು. ತೆಂಗಿನಕಾಯಿಯನ್ನು ತುರಿದು ಲಡ್ಡುಗಳಾಗಿ ಸಹ ಮಾಡಿಕೊಂಡು ತಿನ್ನಬಹುದು. ಎಳನೀರನ್ನು ಸಹ ಬೇಸಿಗೆಯಲ್ಲಿ ಕುಡಿಯಬಹುದು. ಹೀಗೆ ತೆಂಗಿನಕಾಯಿ ಒಟ್ಟಾರೆಯಾಗಿ ಹೇಳುವುದಾದರೆ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಷ್ಟೇ ಅಲ್ಲದೆ ಎಳನೀರನ್ನು ಕುಡಿಯುವುದರಿಂದ ನಮ್ಮ ದೇಹವು ಸದಾ ಹೈಡ್ರೇಟ್ ಆಗಿರುತ್ತದೆ.
ಕರಿಬೇವಿನ ಎಲೆಗಳು: ಕರಿಬೇವಿನ ಎಲೆಗಳು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಬಿಳಿ ಕೂದಲನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.ಇದನ್ನು ಗಿಡಮೂಲಿಕೆ ಚಹಾವಾಗಿ ಸಹ ಬಳಸಬಹುದು ಅಥವಾ ಪುಡಿಯ ರೂಪದಲ್ಲಿಯೂ ಸಹ ಇದನ್ನು ಸೇವಿಸಬಹುದು. ಇದನ್ನು ಚಟ್ನಿಯಾಗಿಯೂ ಸಹ ತಯಾರಿಸಬಹುದು ಅಥವಾ ತರಕಾರಿಗಳು, ರೊಟ್ಟಿಗಳ ಜೊತೆಗೆ, ಪಲ್ಯಾಗಳ ಜೊತೆಗೂ ಸಹ ಸೇರಿಸಿಕೊಂಡು ತಿನ್ನಬಹುದು. ಕರಿಬೇವಿನ ಎಲೆಗಳನ್ನು ಯಾವಾಗಲೂ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.
ಭೃಂಗರಾಜ್: ಭೃಂಗರಾಜ್ ನನ್ನು ಕೇಶರಾಜ್ ಎಂದು ಸಹ ಕರೆಯಲಾಗುತ್ತದೆ. ಎಂದರೆ ಕೂದಲಿನ ಆರೋಗ್ಯಕ್ಕೆ ಬಳಸುವ ಗಿಡಮೂಲಿಕೆಗಳಲ್ಲಿ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.ಇದು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ ಮತ್ತು ನಿಮ್ಮ ಕೂದಲನ್ನು ಬಲವಾಗಿ ಮತ್ತು ನಯವಾಗಿಸುತ್ತದೆ. ಇದನ್ನು ನೀವು ಹಚ್ಚಿಕೊಳ್ಳುವ ಹೇರ್ ಆಯಿಲ್ ನಲ್ಲಿ ಸೇರಿಸಿಕೊಳ್ಳಬಹುದು ಅಥವಾ ಮೌಖಿಕವಾಗಿ ಸಹ ಸೇವಿಸಬಹುದು.