Face Scrub: ಫೇಸ್ಸ್ಕ್ರಬ್ ಮಾಡಿಕೊಳ್ಳುವಾಗ ಈ ಒಂದು ತಪ್ಪು ಮಾಡಿದ್ರೆ ಚರ್ಮ ಹಾಳಾಗುತ್ತೆ
Face Scrub Mistakes:
ನಯವಾದ ತ್ವಚೆಗೆ ಸ್ಕ್ರಬ್ಬಿಂಗ್ ಪ್ರಯೋಜನಕಾರಿ ಎಂಬುದು ಸುಳ್ಳಲ್ಲ. ಸರಿಯಾದ ಸ್ಕ್ರಬ್ಬಿಂಗ್ ಮುಖದಿಂದ ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ಆದರೆ ಸ್ಕ್ರಬ್ಬಿಂಗ್ ಮಾಡುವಾಗ ನಾವು ಕೆಲ ತಪ್ಪುಗಳನ್ನು ಮಾಡುತ್ತೇವೆ. ಅದು ಚರ್ಮವನ್ನು ಹಾಳು ಮಾಡುತ್ತದೆ.
ನಯವಾದ ತ್ವಚೆಗೆ ಸ್ಕ್ರಬ್ಬಿಂಗ್ ಪ್ರಯೋಜನಕಾರಿ ಎಂಬುದು ಸುಳ್ಳಲ್ಲ. ಸರಿಯಾದ ಸ್ಕ್ರಬ್ಬಿಂಗ್ ಮುಖದಿಂದ ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ಆದರೆ ಸ್ಕ್ರಬ್ಬಿಂಗ್ ಮಾಡುವಾಗ ನಾವು ಕೆಲ ತಪ್ಪುಗಳನ್ನು ಮಾಡುತ್ತೇವೆ. ಅದು ಚರ್ಮವನ್ನು ಹಾಳು ಮಾಡುತ್ತದೆ.
2/ 8
ಮುಖ ಸುಂದರವಾಗಿರಲು ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಯಾವುದೇ ಉತ್ಪನ್ನ ಅಥವಾ ಮನೆಮದ್ದುಗಳನ್ನು ಬಳಸುವಾಗ ಅವು ನಿಮ್ಮ ಮುಖಕ್ಕೆ ಸರಿಹೊಂದುತ್ತವೆಯೇ ಎಂದು ನೋಡುವುದು ಸಹ ಮುಖ್ಯವಾಗುತ್ತದೆ. ಆದರೆ ನಾವು ಅದನ್ನು ಮರೆಯುತ್ತೇವೆ.
3/ 8
ಹಾಗೆಯೇ, ಮುಖದ ಅಂದ ಹೆಚ್ಚಿಸುವ ಈ ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಇದನ್ನು ಹಚ್ಚಲು ಸಹ ಒಂದು ಸರಿಯಾದ ಮಾರ್ಗವಾಗಿದೆ. ನಿಮ್ಮ ಮುಖವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಅದು ಪ್ರಯೋಜನದ ಬದಲು ಹಾನಿಯನ್ನುಂಟುಮಾಡುತ್ತದೆ.
4/ 8
ಈ ಸ್ಕ್ರಬ್ ಮಾಡುವುದು ಎಂದರೆ ಸತ್ತ ಚರ್ಮವನ್ನು ಹೋಗಲಾಡಿಸಲು ಹಾಗೂ ಆ ಸ್ಥಳದಲ್ಲಿ ಹೊಸ ಚರ್ಮ ಬರಲು ಮುಖವನ್ನು ಉಜ್ಜುವುದು. ಇನ್ನು ವಾರಕ್ಕೊಮ್ಮೆ ಫೇಸ್ ಸ್ಕ್ರಬ್ ಮಾಡುವುದು ಸಹ ಮುಖ್ಯ, ಆಗ ಮಾತ್ರ ನಮ್ಮ ತ್ವಚೆ ಆರೋಗ್ಯವಾಗಿರಲು ಸಾಧ್ಯ.
5/ 8
ಸರಿಯಾಗಿ ಸ್ಕ್ರಬ್ ಮಾಡುವುದು ಹೇಗೆ ಹಾಗೂ ಯಾರು ಈ ಸ್ಕ್ರಬ್ಬಿಂಗ್ ಮಾಡಬೇಕು ಎಂದು ಪ್ರತಿಯೊಬ್ಬರೂ ತಿಳಿದಿರಬೇಕು. ಮುಖ್ಯವಾಗಿ ಮುಖದ ಸ್ಕ್ರಬ್ಬಿಂಗ್ಗೆ 25 ಸರಿಯಾದ ವಯದ್ದು ಎನ್ನುತ್ತಾರೆ ತಜ್ಞರು. 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸ್ಕ್ರಬ್ ಮಾಡಬಾರದು.
6/ 8
ವಾರದಲ್ಲಿ ಒಂದು ಅಥವಾ ಎರಡು ಬಾರಿ ಮುಖಕ್ಕೆ ಸ್ಕ್ರಬ್ ಅನ್ನು ಹಚ್ಚಿ ಸಾಕು. ಒಣ ತ್ವಚೆ ಇರುವವರು ವಾರಕ್ಕೊಮ್ಮೆ ಸ್ಕ್ರಬ್ ಮತ್ತು ಎಣ್ಣೆಯುಕ್ತ ಚರ್ಮವನ್ನು ವಾರಕ್ಕೆ ಎರಡು ಬಾರಿ ಮಸಾಜ್ ಮಾಡಬೇಕು. ಸ್ಕ್ರಬ್ ಅನ್ನು ಬಳಸುವಾಗ ಮುಖದ ಮೇಲಿನ ಮೇಕಪ್ ತೆಗೆದುಬಿಡಿ.
7/ 8
ಸ್ಕ್ರಬ್ ಗಳನ್ನು ನೇರವಾಗಿ ಮುಖಕ್ಕೆ ಬಳಸಬಾರದು, ಸ್ಕ್ರಬ್ ಅನ್ನು ನೀರಿನಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಬೇಕು.ಸ್ಕ್ರಬ್ ಅನ್ನು ಮುಖದ ಮೇಲೆ 10 ರಿಂದ 20 ಸೆಕೆಂಡ್ ಗಿಂತ ಹೆಚ್ಚು ಕಾಲ ಮಸಾಜ್ ಮಾಡಬಾರದು. ಕಿತ್ತಳೆ ಸಿಪ್ಪೆ, ಪಪ್ಪಾಯಿ ಬೀಜಗ ಮತ್ತು ಸಕ್ಕರೆ ಅಥವಾ ಅಕ್ಕಿ ಹಿಟ್ಟನ್ನು ಸಹ ಮನೆಯಲ್ಲಿ ಸ್ಕ್ರಬ್ಗಳಾಗಿ ಬಳಸಬಹುದು.
8/ 8
ಮುಖವನ್ನು ಸ್ಕ್ರಬ್ ಮಾಡಿದ ನಂತರ, ಯಾವಾಗಲೂ ಮುಖದ ಮೇಲೆ ಟೋನರ್ ಅನ್ನು ಹಚ್ಚುವುದು ಅವಶ್ಯಕ. ನೀವು ಮನೆಯಲ್ಲಿ ಮುಖದ ಮೇಲೆ ಟೊಮ್ಯಾಟೋ, ಸೌತೆಕಾಯಿ, ಪಪ್ಪಾಯಿ ರಸ ಹಚ್ಚಬಹುದು. ಇದಲ್ಲದೇ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೋನರ್ಗಳೂ ಲಭ್ಯವಿವೆ.