ಐಸ್ ಕ್ರೀಮ್ : ಇದು ಸ್ವಲ್ಪ ವಿಚಿತ್ರ ಎನಿಸಿದರೂ ಬೇಸಿಗೆಯಲ್ಲಿ ಐಸ್ ಕ್ರೀಮ್ ಗಳಿಂದ ದೂರವಿರುವುದು ಉತ್ತಮ. ಏಕೆಂದರೆ ಐಸ್ ಕ್ರೀಮ್ ಗಳಲ್ಲಿ ಕೊಬ್ಬು, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಗಳು ಅಧಿಕವಾಗಿರುತ್ತವೆ. ಅವುಗಳನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಶ್ರಮಿಸಬೇಕು. ಅವುಗಳನ್ನು ದೇಹ ತಂಪಾಗಿಸಿಕೊಳ್ಳಲು ತಿನ್ನುತ್ತಾರೆ. ಐಸ್ ಕ್ರೀಂ ತಿನ್ನುವಾಗ ಆಗುವ ತಂಪು ತಿಂದ ನಂತರ ಆಗುವುದಿಲ್ಲ ಎಂಬುದನ್ನು ಗಮನಿಸಬೇಕು. ಬೇಸಿಗೆಯಲ್ಲಿ ಐಸ್ ಕ್ರೀಮ್ ನಿಂದ ದೂರವಿರುವುದು ಉತ್ತಮ. (ಸಾಂಕೇತಿಕ ಚಿತ್ರ)
ಕರಿದ ಆಹಾರಗಳು: ಬಿಸಿ ಎಣ್ಣೆಯಲ್ಲಿ ಕರಿದ ಆಹಾರ ಎಲ್ಲರಿಗೂ ಇಷ್ಟವಾಗುತ್ತವೆ. ಮತ್ತು ಚಿಕ್ಕ ಮಕ್ಕಳು ಈ ರೀತಿಯ ಆಹಾರಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಬೇಸಿಗೆಯಲ್ಲಿ ಅವುಗಳಿಂದ ದೂರವಿರುವುದು ಉತ್ತಮ. ಡೀಪ್ ಫ್ರೈಡ್ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚು ಎಣ್ಣೆಯನ್ನು ಸೇವಿಸುವುದರಿಂದ ಮುಖದ ಮೇಲೆ ಮೊಡವೆಗಳು ಉಂಟಾಗಬಹುದು. ಇದು ಬೇಸಿಗೆಯಲ್ಲಿ ಬರುವ ಸಾಧ್ಯತೆ ಹೆಚ್ಚು. ಬೇಸಿಗೆಯಲ್ಲಿ ಎಣ್ಣೆ ಪದಾರ್ಥಗಳಿಂದ ದೂರವಿರುವುದು ಉತ್ತಮ. (ಸಾಂಕೇತಿಕ ಚಿತ್ರ)
ಮಾವು: ಬೇಸಿಗೆಯಲ್ಲಿ ನಮಗೆ ಸಿಗುವ ಹಣ್ಣು ಮಾವು. ಬೇಸಿಗೆಯಲ್ಲಿ ಎಲ್ಲರೂ ಮಾವಿನ ಹಣ್ಣಿಗಾಗಿ ಕಾಯುತ್ತಾರೆ. ಆದರೆ, ಇವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಆದರೆ ಅತೀಯಾಗಿ ಮಾವಿನ ಹಣ್ಣು ತಿನ್ನುವುದರಿಂದ ಅದು ಅತಿಸಾರಕ್ಕೆ ಕಾರಣವಾಗಬಹುದು. ಇದಲ್ಲದೇ, ತಲೆನೋವು ಮತ್ತು ಹೊಟ್ಟೆ ನೋವು ಮುಂತಾದ ಲಕ್ಷಣಗಳು ಕಂಡುಬರುತ್ತವೆ. (ಸಾಂಕೇತಿಕ ಚಿತ್ರ)