ಕಡಲೆಬೇಳೆ ಹಿಟ್ಟು, ಅರಿಶಿನ ಮತ್ತು ಹಾಲು ಮಾಸ್ಕ್. ಇದು ಮೊಡವೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಒಂದು ಚಮಚ ಬೇಳೆ ಹಿಟ್ಟಿಗೆ ಎರಡು ಚಮಚ ಹಾಲು ಮತ್ತು ಒಂದು ಚಿಟಿಕೆ ಹಸಿ ಅರಿಶಿನ ಸೇರಿಸಿ. ಸ್ಕ್ರಬ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. ನಂತರ ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ. ಇದು ಮುಖದ ಮೇಲೆ ಸಂಗ್ರಹವಾಗಿರುವ ಧೂಳಿನ ಕಣಗಳನ್ನು ತೆಗೆದು ಹಾಕುತ್ತದೆ.
ಕಡಲೆಬೇಳೆ ಹಿಟ್ಟು, ಜೇನುತುಪ್ಪ ಮತ್ತು ಮುಲ್ತಾಲಿ ಮಿಟ್ಟಿ ಮಾಸ್ಕ್. ಇದು ಸುಕ್ಕುಗಳ ಸಮಸ್ಯೆ ಹೋಗಲಾಡಿಸುತ್ತದೆ. ಮಿಲ್ಟಾಲಿ ಮಿಟ್ಟಿ, ಕಡಲೆಬೇಳೆ ಹಿಟ್ಟು ಮತ್ತು ಜೇನುತುಪ್ಪ ಮಿಕ್ಸ್ ಮಾಡಿ, ಪೇಸ್ಟ್ ನ್ನು ಮುಖ, ಕುತ್ತಿಗೆ ಮತ್ತು ಗಲ್ಲಕ್ಕೆ ಚೆನ್ನಾಗಿ ಹಚ್ಚಿರಿ. ನಂತರ ಮಸಾಜ್ ಮಾಡಿ. ಸ್ವಲ್ಪ ಸಮಯ ಹಾಗೇ ಬಿಟ್ಟು, ನಂತರ ತೊಳೆಯಿರಿ. ಇದು ಸುಕ್ಕುಗಳ ಸಮಸ್ಯೆ ಕಡಿಮೆ ಮಾಡಿ, ತ್ವಚೆ ಬಿಗಿಯಾಗಿಸುತ್ತದೆ.