ಜೀವನದ ಈ ಪ್ರಮುಖ ಘಟ್ಟ ಬರುವ ಮುನ್ನವೇ ನಿಮ್ಮ ಸಂಗಾತಿ ಆಗುವವರು ನಿಮಗೆ ಗುಡ್ ಮ್ಯಾಚ್ ಆಗ್ತಾರಾ ಎಂದು ಎಂದು ತಿಳಿದುಕೊಳ್ಳಿ. ಅದಕ್ಕಾಗಿ ಕೆಲವು ಪ್ರಶ್ನೆಗಳನ್ನು ಕೇಳುವುದು ಬಹಳ ಮುಖ್ಯ. ಹಾಗಾದ್ರೆ ಯಾವ ಪ್ರಶ್ನೆಗಳನ್ನು ಕೇಳಬೇಕು ಅಂತ ಯೋಚಿಸ್ಬೇಡಿ. ಈ ಆರು ಪ್ರಶ್ನೆಗಳನ್ನು ಕೇಳಿ. ನೀವು ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿದ್ದೀರಾ ಅಥವಾ ತಪ್ಪಾದ ಸಂಗಾತಿಯನ್ನು ಆರಿಸಿಕೊಂಡಿದ್ದೀರಾ ಎಂಬುವುದಕ್ಕೆ ನಿಮಗೆ ಉತ್ತರ ಸಿಗುತ್ತೆ. (ಸಾಂಕೇತಿಕ ಚಿತ್ರ)
ನೀವು ನನ್ನನ್ನು ಏಕೆ ಪ್ರೀತಿಸ್ತೀರಾ?: ಜೀವನದಲ್ಲಿ ಒಟ್ಟಿಗೆ ಇರಲು ಸಿದ್ಧರಾಗುವ ಮುನ್ನ ಕೇಳುವ ಪ್ರಮುಖ ಪ್ರಶ್ನೆ ಇದಾಗಿದೆ. ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ತಮ್ಮ ಸಂಗಾತಿಯಿಂದ ಪಡೆಯಲು ಪ್ರತಿಯೊಬ್ಬರು ಬಯಸುತ್ತಾರೆ. ಈ ಪ್ರಶ್ನೆಗೆ ಯಾರಾದರೂ 'ಐ ಲವ್ ಯೂ’ ಎಂದರೆ ಅದು ತುಂಬಾ ಸ್ವೀಕಾರಾರ್ಹ ಉತ್ತರವಲ್ಲ. ನಿಮ್ಮ ಸಂಗಾತಿಯುಎಲ್ಲರಿಗಿಂತಲೂ ನಿಮ್ಮನ್ನು ಪ್ರೀತಿಸುತ್ತಾರೋ ಇಲ್ಲವೋ ಎಂಬುದನ್ನು ನಿಮ್ಮ ಸಂಗಾತಿಯ ಉತ್ತರದಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮಲ್ಲಿರುವ ಒಳ್ಳೆಯದ್ದನ್ನು ಮಾತ್ರವಲ್ಲ ಪಾಸಿಟಿವ್ ಮತ್ತು ನೆಗೆಟಿವ್ ಎರಡನ್ನು ಸ್ವೀಕರಿಸಲು ಅವನು ಸಿದ್ಧರಿದ್ದಾರೆ ತಿಳಿದುಕೊಳ್ಳಿ. (ಸಾಂಕೇತಿಕ ಚಿತ್ರ)
ನಿಮ್ಮ ಉಳಿದ ಜೀವನವನ್ನು ನನ್ನೊಂದಿಗೆ ಏಕೆ ಕಳೆಯಲು ಬಯಸುತ್ತೀರಿ: ಸಾಮಾನ್ಯವಾಗಿ ಈ ಪ್ರಶ್ನೆಗೆ ಉತ್ತರವಾಗಿ, 'ನಾನು ನಿನ್ನನ್ನು ಪ್ರೀತಿಸುತ್ತೇನೆ ಏಕೆಂದರೆ ನಾನು ನನ್ನ ಜೀವನವನ್ನು ನಿಮ್ಮೊಂದಿಗೆ ಕಳೆಯಲು ಬಯಸುತ್ತೇನೆ' ಎಂದು ಹೇಳುತ್ತಾರೆ. ಆದರೆ ನೀವು ಕೇಳಲು ಬಯಸುವ ಉತ್ತರ ಇದಲ್ಲ ಬಹುಷಃ ಬೇರೆಯದ್ದಾಗಿರುತ್ತದೆ. ಬದಲಾಗಿ, ಅವರ ಉತ್ತರದಿಂದ ನಿಮ್ಮ ಜೀವನದ ಅಗತ್ಯತೆ, ನಿಮ್ಮ ಮೌಲ್ಯದ ಬಗ್ಗೆ ನೀವು ಕಲ್ಪನೆಯನ್ನು ರೂಪಿಸಬಹುದೇ ಎಂದು ನೋಡಿ. ನಿಮ್ಮ ಸಂಗಾತಿ (ಸಾಂಕೇತಿಕ ಚಿತ್ರ).
ಮದುವೆಯ ಬಳಿಕ ಪ್ರೀತಿ ಉಳಿಸಿಕೊಳ್ಳಲು ಏನು ಮಾಡುತ್ತೀರಾ: ಈ ಪ್ರಶ್ನೆ ಚೈಲ್ಡಿಶ್ ಆಗಿ ಕಾಣಿಸಬಹುದು. ಏಕೆಂದರೆ ಅಗತ್ಯವು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತದೆ. ಆದರೆ ನಿಮ್ಮ ಸಂಗಾತಿ ಈ ಪ್ರಶ್ನೆಗೆ ಉತ್ತರಿಸಲು ಹಿಂಜರಿಯುತ್ತಿದ್ದರೆ, ಅವರು ನಿಮ್ಮ ಸಂಬಂಧದ ಭವಿಷ್ಯದ ಬಗ್ಗೆ ಯೋಚಿಸುತ್ತಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಆದರೆ ಶಾಶ್ವತ ಸಂಬಂಧಕ್ಕೆ ಇದು ಒಳ್ಳೆಯ ಸಂಕೇತವಲ್ಲ. (ಸಾಂಕೇತಿಕ ಚಿತ್ರ)
ನನ್ನ ದುಃಖವನ್ನು ಹಂಚಿಕೊಳ್ಳು ರೆಡಿ ಇದ್ದೀರಾ: ಮದುವೆಗೂ ಮುನ್ನವೇ ತಿಳಿದುಕೊಳ್ಳಬೇಕಾದ ಬಹುಮುಖ್ಯ ವಿಷಯವೆಂದರೆ ನೀವು ಮದುವೆಯಾಗಲಿರುವ ವ್ಯಕ್ತಿ ನಿಮ್ಮ ದುಃಖ ಮತ್ತು ನೋವುಗಳನ್ನು ಹಂಚಿಕೊಳ್ಳಲು ಸಿದ್ಧರಿದ್ದಾರೆಯೇ ಎಂಬುದು. ನಿಮ್ಮ ಜೀವನದ ಕಷ್ಟಕರವಾದ ಕಾಲದಲ್ಲಿ ನಿಮ್ಮ ನೋವನ್ನು ಹಂಚಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ನಿಮಗೆ ಸೂಕ್ತ ವ್ಯಕ್ತಿ ಅಲ್ಲ ಎಂದರ್ಥ. (ಸಾಂಕೇತಿಕ)
ನಿಮ್ಮ ಜೊತೆ ಕಾಂಪ್ರೋಮೈಸ್ ಮಾಡಿಕೊಳ್ಳಲು ಸಿದ್ಧವಾಗಿದ್ದಾರಾ?: ಮದುವೆ ಅಂದರೆ ಕಾಂಪ್ರೋಮೈಸ್. ನಿಮ್ಮ ಜೊತೆ ಕೆಲವು ವಿಚಾರಗಳಲ್ಲಿ ಕಾಂಪ್ರೋಮೈಸ್ ಮಾಡಿಕೊಳ್ಳಲು ಸಿದ್ದರಾಗಿದ್ದಾರೆಯೇ ಎಂದು ತಿಳಿದುಕೊಳ್ಳಿ. ಪ್ರೀತಿ ಮತ್ತು ಅವರ ಸ್ವಂತ ಜೀವನದಲ್ಲಿ ನೀವು ಪ್ರವೇಶಿಸಿದಾಗ ನಿಮ್ಮ ಜೊತೆಗೆ ಜಗಳವಾಡದೇ ಕಾಂಪ್ರೋಮೈಸ್ ಮಾಡಿಕೊಳ್ಳಲು ರೆಡಿಯಾಗಿದ್ದಾರಾ ತಿಳಿದುಕೊಳ್ಳಲು ಪ್ರಯತ್ನಿಸಿ. (ಸಾಂಕೇತಿಕ ಚಿತ್ರ)