ಮಾನವ ದೇಹಕ್ಕೆ ನಿದ್ರೆ ಅಗತ್ಯ. ಒಬ್ಬ ವ್ಯಕ್ತಿಯು ಆರೋಗ್ಯವಾಗಿರಲು ಕನಿಷ್ಠ 7-8 ಗಂಟೆಗಳ ನಿದ್ದೆ ಮಾಡಬೇಕಾಗುತ್ತದೆ. ನಿದ್ರೆಯ ಕೊರತೆಯಿಂದ ಅನೇಕ ರೋಗಗಳು ಬರುತ್ತದೆ ಎಂದರೆ ತಪ್ಪಾಗಲಾರದು. ಎಷ್ಟೇ ದಣಿವಾಗಿದ್ದರೂ ಚೆನ್ನಾಗಿ ನಿದ್ರೆ ಮಾಡಿದರೆ ದಣಿವೆಲ್ಲ ದೂರವಾಗುತ್ತದೆ. ಹುಷಾರಿಲ್ಲದಿದ್ದರೂ ಔಷಧಿ, ಮಾತ್ರೆಗಳನ್ನು ಸೇವಿಸಿ ಚೆನ್ನಾಗಿ ನಿದ್ರೆ ಮಾಡಿದರೆ ಬೇಗ ಗುಣಮುಖರಾಗಬಹುದು. ರಾತ್ರಿ ಹೊತ್ತಿನ ನಿದ್ದೆಯು ನಮ್ಮ ದಿನಚರಿಯನ್ನು ಮರುದಿನ ಸರಾಗವಾಗಿ ನಡೆಸುವಂತೆ ಮಾಡುತ್ತದೆ.
ಆದರೆ ಮಲಗಲು ಹೋದಾಗ ಎಲ್ಲರಿಗೂ ನಿದ್ರೆ ಬರುವುದಿಲ್ಲ. ಕೆಲವರು ಗಂಟೆಗಟ್ಟಲೆ ಮಲಗಿದರೂ ನಿದ್ದೆ ಬಾರದೇ ಒದ್ದಾಡುತ್ತಿರುತ್ತಾರೆ. ವಯಸ್ಸಾದವರಿಗೂ ಕಡಿಮೆ ನಿದ್ರೆ ಬರುತ್ತದೆ. ಕೆಲವರಿಗೆ ನಿದ್ರೆ ಬಂದರೆ ಅವರ ತಲೆ ಕೆಟ್ಟ ಆಲೋಚನೆಗಳು ಮತ್ತು ಚಿಂತೆಗಳಿಂದ ತುಂಬಿರುತ್ತದೆ. ಅದರಿಂದಾಗಿ ನೆಮ್ಮದಿಯಿಂದ ನಿದ್ದೆ ಮಾಡಲು ಆಗುವುದಿಲ್ಲ. ಇತ್ತೀಚಿಗೆ ಕೆಲಸದ ಒತ್ತಡದಿಂದ ಅನೇಕರಿಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ. ಇಂತಹ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯಕವಾಗುವ ಕೆಲವು ಟಿಪ್ಸ್ಗಳಿ ಈ ಕೆಳಗಿನಂತಿದೆ. ರಾತ್ರಿ ಮಲಗುವ ವೇಳೆ ಇವುಗಳನ್ನು ಫಾಲೋ ಮಾಡಿದರೆ ನಿದ್ರೆ ತಾನಾಗಿಯೇ ಬರುತ್ತದೆ.
ನಿಮ್ಮ ಉಸಿರಾಟಕ್ಕೆ ಗಮನ ಕೊಡಿ: ನೀವು ರಾತ್ರಿ ಹಾಸಿಗೆ ಮೇಲೆ ಮಲಗಿದ ತಕ್ಷಣ, ನಿಮ್ಮ ತಲೆಗೆ ಕೆಟ್ಟ ಆಲೋಚನೆಗಳು ಬರಲು ಪ್ರಾರಂಭವಾಗುತ್ತವೆ. ಇದು ನಿದ್ರೆಗೆ ಭಂಗವನ್ನುಂಟು ಮಾಡುತ್ತದೆ. ಅಂತಹ ಸಂದರ್ಭದಲ್ಲಿ ನೀವು ನೇರವಾಗಿ ಮಲಗಬೇಕು ಮತ್ತು ಉಸಿರಾಟದ ಮೇಲೆ ಕೇಂದ್ರೀಕರಿಸಬೇಕು. ನಿಮ್ಮ ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಿ ಮತ್ತು ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ, ನಂತರ ಅವುಗಳನ್ನು ನಿಧಾನವಾಗಿ ಹೊರಗೆ ಬಿಡಿ. ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಿದಾಗ, ಕೆಟ್ಟ ಆಲೋಚನೆಗಳು ತಲೆಗೆ ಬರುವುದಿಲ್ಲ. ಆಗ ನಿದ್ದೆಯೂ ಚೆನ್ನಾಗಿ ಬರುತ್ತದೆ.
ಮಿತವಾದ ಆಹಾರ ಸೇವನೆ: ನಿಮ್ಮ ನಿದ್ರೆ ನೀವು ತಿನ್ನುವ ಆಹಾರದ ಮೇಲೆ ಕೂಡ ಅವಲಂಬಿತವಾಗಿರುತ್ತದೆ. ರಾತ್ರಿ ಬೇಗ ಆಹಾರವನ್ನು ಸೇವಿಸಿ. ರಾತ್ರಿ ಎಂಟು ಗಂಟೆಯ ಮೊದಲು ಆಹಾರ ಸೇವಿಸುವುದು ದೇಹಕ್ಕೆ ತುಂಬಾ ಒಳ್ಳೆಯದು. ಭೋಜನವನ್ನು ಲಿಮಿಟ್ ಆಗಿ ಸೇವಿಸಬೇಕು. ತಿಂದ ಕೆಲವು ಗಂಟೆಗಳ ನಂತರ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಉತ್ತಮ ನಿದ್ರೆ ಬರುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)