ಮೊಸರಿಗೆ ಉಪ್ಪು ಬೆರೆಸಿ ಅನೇಕ ಮಂದಿ ಸೇವಿಸುತ್ತಾರೆ. ಊಟ ಮಾಡುವಾಗ ಸರಿಯಾದ ಪ್ರಮಾಣದಲ್ಲಿಉಪ್ಪು ಇಲ್ಲದಿದ್ದರೆ, ತಿನ್ನಲು ಕಷ್ಟವಾಗುತ್ತದೆ. ಹಾಗಾಗಿ ಕನಿಷ್ಟ ಪ್ರಮಾಣ ಉಪ್ಪನ್ನು ನಾವು ತಿನ್ನುವ ಆಹಾರದಲ್ಲಿ ಬೆರೆಸಿರಬೇಕು. ಏಕೆಂದರೆ ಪ್ರತಿಯೊಂದು ಖಾದ್ಯಕ್ಕೂ ಉಪ್ಪು ಅತ್ಯಗತ್ಯವಾಗಿದೆ. ಆದರೆ ಇದನ್ನು ಅರಿಯದೇ ಮಿತಿಮೀರಿದ ಪ್ರಮಾಣದಲ್ಲಿ ನಾವು ಉಪ್ಪನ್ನು ಸೇವಿಸುತ್ತೇವೆ. ಇದರಿಂದ ನಾವು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತೇವೆ.