Valentine’s Day: ವಿಶೇಷ ದಿನದಂದು ನೀವು ಒಂಟಿಯಾಗಿದ್ರೆ ಇಲ್ಲಿದೆ ಕೆಲ ಟಿಪ್ಸ್
Valentine's day Celebration: ಪ್ರೇಮಿಗಳ ದಿನದಂದು ಕೆಲ ಜನರು ಸಂತೋಷವಾಗಿರುತ್ತಾರೆ. ಇನ್ನೂ ಕೆಲ ಜನರು ದುಃಖದಲ್ಲಿರುತ್ತಾರೆ. ಕೆಲವರು ತಮ್ಮ ಆತ್ಮ ಸಂಗಾತಿಯನ್ನು ಹುಡುಕಲಾಗದೆ ಕಷ್ಟಪಡುತ್ತಿದ್ದರೆ, ಇನ್ನೂ ಕೆಲವರು ಬ್ರೇಕಪ್ ನೋವಿನಿಂದ ಬಳಲುತ್ತಿರುತ್ತಾರೆ. ನೀವು ಸಹ ಈ ವಿಶೇಷ ದಿನದಂದು ಒಬ್ಬಂಟಿಯಾಗಿದ್ದರೆ ಇಲ್ಲಿದೆ ಕೆಲ ಟಿಪ್ಸ್.
ವ್ಯಾಲೆಂಟೈನ್ಸ್ ವೀಕ್ನಲ್ಲಿ ಪ್ರೀತಿಯ ಜೊತೆ ಬ್ರೇಕಪ್ ಸಹ ಇರುತ್ತದೆ. ಈ ರೀತಿ ಬ್ರೇಕಪ್ ಆದವರು ತನ್ನ ಸಂಗಾತಿಯೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಅದನ್ನು ಮಾಡುವ ಬದಲು ನಿಮ್ಮನ್ನ ನೀವು ಬದಲಾಯಿಸಿಕೊಳ್ಳಬೇಕು.
2/ 7
ಮೊದಲು ನೀವು ಒಂದು ದಿನ ಬಿಡುವು ಮಾಡಿಕೊಂಡು ಏಕಾಂಗಿಯಾಗಿ ಹಾಡುಗಳನ್ನು ಕೇಳುತ್ತಾ ಕಾಲ ಕಳೆಯಿರಿ. ಜೋಶ್ ಇರುವ ಹಾಡುಗಳನ್ನು ಕೇಳಿ, ನೋವುಂಟು ಮಾಡುವ ಹಾಡುಗಳನ್ನ ಕೇಳಬೇಡಿ. ಇದರಿಂದ ನೀವು ರಿಫ್ರೆಶ್ ಆಗಿರುತ್ತೀರಿ
3/ 7
ಪ್ರೇಮಿಗಳ ದಿನದಂದು ಬೇಸರದಿಂದ ಕುಳಿತಿರುವ ಬದಲು ನಿಮ್ಮ ಸ್ನೇಹಿತರ ಜೊತೆ ರೆಸ್ಟೋರೆಂಟ್ಗೆ ಹೋಗಿ. ನೀವು ಸ್ನೇಹಿತರೊಂದಿಗೆ ಹೋಗಲು ಇಷ್ಟಪಡದಿದ್ದರೆ, ಒಬ್ಬರೆ ಹೋಗಿ. ಅಲ್ಲಿ ಇಷ್ಟದ ಆಹಾರಗಳನ್ನು ತಿಂದು ಎಂಜಾಯ್ ಮಾಡಿ.
4/ 7
ಆರ್ಥಿಕವಾಗಿ ಸ್ವಲ್ಪ ಉತ್ತಮವಾಗಿದ್ದರೆ. ಅಂಗಡಿಗೆ ಹೋಗಿ ನಿಮಗಾಗಿ, ನೀವು ವಸ್ತುಗಳನ್ನು ಖರೀದಿಸಿ. ಅವುಗಳನ್ನು ಬಳಸಿ. ಇದು ನಿಮಗೆ ಉತ್ತಮ ಅನುಭವವನ್ನು ನೀಡುತ್ತದೆ
5/ 7
ಇದೆಲ್ಲ ಬೇಡವೆಂದಾದರೆ ಗೇಮ್ ಆಡಿ, ಟಿವಿ ನೋಡಿ. ನಿಮಗೆ ಇಷ್ಟವಾದ ಚಟುವಟಿಕೆಯನ್ನು ಮಾಡಬಹುದು. ಅಲ್ಲದೇ ಮನೆಯ ಸುತ್ತ ಮುತ್ತ ಮಕ್ಕಳಿದ್ದರೆ ಅವರ ಜೊತೆ ಸಮಯ ಕಳೆಯಿರಿ.
6/ 7
ನೀವು ಒಬ್ಬಂಟಿಯಾಗಿದ್ದರೆ, ಪುಸ್ತಕಗಳೊಂದಿಗೆ ಸಮಯ ಕಳೆಯಿರಿ. ಇದು ನಿಮ್ಮ ಉತ್ತಮ ಸ್ನೆಹಿತ ಎಂಬುದನನ್ ಮರೆಯಬೇಡಿ. ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
7/ 7
ಮುಖ್ಯವಾಗಿ ಹಳೆಯ ನೆನಪುಗಳನ್ನು ಅಳಿಸಿ ಹಾಕಿ. ಟ್ರಿಪ್ ಹೋಗಿ, ಪಾರ್ಟಿಗಳನ್ನು ಅಟೆಂಡ್ ಮಾಡಿ. ಇವೆಲ್ಲವೂ ನಿಮ್ಮ ನೋವನ್ನು ಅಳಿಸಿ ಹಾಕುತ್ತದೆ.