ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಆದರೆ ನಾವು ತಾಜಾ ಗಾಳಿಯನ್ನು ಸೇವಿಸುವ ಮೂಲಕ ಉಸಿರಾಡುತ್ತಿದ್ದೇವೆಯೇ ಎಂದು ತಿಳಿದುಕೊಳ್ಳುವುದು ದೊಡ್ಡ ಅಂಶವಾಗಿದೆ. ಜೀವನಶೈಲಿಯ ಅಭ್ಯಾಸದ ಜೊತೆಗೆ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕೆಟ್ಟ ಗಾಳಿಯು ನಮ್ಮ ಮನೆಗೆ ಪ್ರವೇಶಿಸುತ್ತಿದೆ. ಸ್ವಲ್ಪ ಸಮಯದವರೆಗೆ ತಾಜಾ ಗಾಳಿಗಾಗಿ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದರೆ, ಗಾಳಿಯ ಜೊತೆಗೆ, ಸೊಳ್ಳೆಗಳು ಮತ್ತು ಇತರ ಅನೇಕ ಕೀಟಗಳು ಮನೆಯೊಳಗೆ ಪ್ರವೇಶಿಸುತ್ತವೆ.
ಸೊಳ್ಳೆಗಳು ತುಂಬಾ ಅಪಾಯಕಾರಿ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಸೊಳ್ಳೆಗಳನ್ನು ಕೊಲ್ಲುವ ಸೊಳ್ಳೆ ಬತ್ತಿ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಘಟನೆಯೂ ಇದಕ್ಕೆ ಪುಷ್ಟಿ ನೀಡಿದೆ. ಸೊಳ್ಳೆ ಭತ್ತಿಯಿಂದ ಹೊರಸೂಸುವ ವಿಷಕಾರಿ ಹೊಗೆಯಿಂದಾಗಿ ನಿವಾಸಿಗಳು ನಿದ್ರೆಯಲ್ಲಿ ಪ್ರಜ್ಞೆ ಕಳೆದುಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ ಸುಮಾರು 6 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ.