ಮಧ್ಯಾಹ್ನ ಚೆನ್ನಾಗಿ ತಿಂದ ನಂತರ ಅನೇಕ ಮಂದಿಗೆ ನಿದ್ರೆ ಬರುತ್ತದೆ. ಮಲಗಿ ಎದ್ದರೆ ಚೆನ್ನಾಗಿರುತ್ತದೆ ಎಂದು ದೇಹ ಹಂಬಲಿಸುತ್ತದೆ. ಇದರಿಂದ ಕೆಲವರು ಕೈತುಂಬಾ ಕೆಲಸವಿದ್ದರೂ ಸ್ವಲ್ಪ ಹೊತ್ತು ಮಲಗುತ್ತಾರೆ. ಹಾಗೇ ತಿಂದ ಮೇಲೆ ತಡೆಯಲಾರದ ನಿದ್ರೆ ಬರಲು ಕಾರಣವೇನು? ತಜ್ಞರು ಇದಕ್ಕೆ ‘ಫುಡ್ ಕೋಮಾ ಎಂದು ಹೆಸರಿಟ್ಟಿದ್ದಾರೆ. ಹಾಗಾದರೆ ಇದರ ಅರ್ಥವೇನು ಮತ್ತು ಇದನ್ನು ಸರಿಪಡಿಸುವ ಮಾರ್ಗಗಳು ಯಾವುವು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಫುಡ್ ಕೋಮಾ ಎಂದರೇನು? : ಫುಡ್ ಕೋಮಾದ ವೈದ್ಯಕೀಯ ಹೆಸರನ್ನು ಪೋಸ್ಟ್ಪ್ರಾಂಡಿಯಲ್ ಸೊಮ್ನೊಲೆನ್ಸ್ ಎಂದು ಕರೆಯಲಾಗುತ್ತದೆ. ಅಂದರೆ ತಿಂದ ನಂತರ ಮಲಗುವುದು ಎಂದರ್ಥ. ಫುಡ್ ಕೋಮಾದ ಲಕ್ಷಣಗಳು ತಿಂದ ನಂತರ ತೂಕಡಿಕೆ, ನಿದ್ರೆ, ಯಾವುದೇ ಚಟುವಟಿಕೆಯಲ್ಲಿ ತೊಡಗದೇ ಆಲಸ್ಯ ಅನುಭವ ಆಗುವುದು. ಈ ಸಮಯದಲ್ಲಿ ದೇಹವು ಕಡಿಮೆ ಶಕ್ತಿಯನ್ನು ಹೊಂದಿರುತ್ತದೆ. ಎದ್ದು ಆಕ್ಟೀವ್ ಆಗಿ ಕೆಲಸ ಮಾಡಬೇಕೆಂದರೂ ದೇಹ ಸಹಕರಿಸುವುದಿಲ್ಲ. ಅಂತಹ ರೋಗಲಕ್ಷಣಗಳನ್ನು ಫುಡ್ ಕೋಮಾ ಎಂದು ಕರೆಯಲಾಗುತ್ತದೆ.