ಒಂದು ಗ್ಲಾಸ್ ಮಜ್ಜಿಗೆ ಬೇಸಿಗೆಯಲ್ಲಿ ನಿಮ್ಮನ್ನು ಕೂಲ್ ಆಗಿರಿಸುತ್ತದೆ. ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಅಲ್ಲದೇ ಇದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳು ಸಿಗುತ್ತದೆ. ಹಾಲಿನಿಂದ ಬೆಣ್ಣೆಯನ್ನು ತೆಗೆದ ನಂತರ ಉಳಿದ ನೀರನ್ನು ಮಜ್ಜಿಗೆ ಎಂದು ಕರೆಯಲಾಗುತ್ತದೆ. ಮೊಸರಿನೊಂದಿಗೆ ನೀರನ್ನು ಬೆರೆಸುವ ಮೂಲಕವೂ ಇದನ್ನು ತಯಾರಿಸಬಹುದು. ಮಾರುಕಟ್ಟೆಗಳಲ್ಲಿ ವಿವಿಧ ಬಗೆಯ ಮಜ್ಜಿಗೆ ಲಭ್ಯವಿದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ನಮ್ಮ ದೇಹವನ್ನು ತಂಪಾಗಿಡುವ ಮಜ್ಜಿಗೆಯಲ್ಲಿ ಅನೇಕ ಔಷಧೀಯ ಗುಣಗಳಿದೆ. ಅವು ಯಾವುವು ಅಂತೀರಾ. ಈ ಕೆಳಗೆ ನೀಡಿರುವ ಒಂದಷ್ಟು ಮಾಹಿತಿ ಓದಿ.
ಮೂಳೆ ಆರೋಗ್ಯ: ಮಜ್ಜಿಗೆ ಆರೋಗ್ಯಕರ ಮೂಳೆಗಳಿಗೆ ಮುಖ್ಯವಾದ ಕ್ಯಾಲ್ಸಿಯಂ ಮತ್ತು ಇತರ ಖನಿಜಗಳಲ್ಲಿ ಸಮೃದ್ಧವಾಗಿದೆ. ಮಜ್ಜಿಗೆಯ ನಿಯಮಿತ ಸೇವನೆಯು ಆಸ್ಟಿಯೊಪೊರೋಸಿಸ್ನಂತಹ ಮೂಳೆ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)