ಮಾಂಸಾಹಾರಿಗಳೇ ನನ್ನ ಜೊತೆ ಚರ್ಚೆಗಳಿಯಬೇಡಿ ಎಂದಿದ್ದೇಕೆ ನಟಿ Anushka Sharma
ಪ್ರಾಣಿ ಪ್ರಿಯೆ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಇಂದು ಪೋಸ್ಟ್ ಮಾಡಿದ್ದು, ಅದರಲ್ಲಿ ಮಾಂಸಾಹಾರಿಗಳೇ ನನ್ನ ಜೊತೆ ಚರ್ಚೆಗಿಳಿಯಬೇಡಿ ಎಂದು ಬರೆದುಕೊಂಡಿದ್ದಾರೆ. ಅನುಷ್ಕಾ ಶರ್ಮಾ ಹೀಗೆ ಬರೆದುಕೊಳ್ಳಲು ಒಂದು ಕಾರಣವಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಅನುಷ್ಕಾ ಶರ್ಮಾ ಅವರಿ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವರ ಪ್ರಾಣಿ ಪ್ರೀತಿ ಸಾರಿ ಹೇಳುವ ಸಾಕಷ್ಟು ಘಟನೆಗಳು ಹಾಗೂ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ಅನುಷ್ಕಾ ಮಾಡುವ ಕೆಲ ಕೆಲಸಗಳನ್ನು ಪ್ರಾಣಿ ದಯಾ ಸಂಸ್ಥೆ ಪೇಟಾ ಆಗಾಗ ಮೆಚ್ಚಿಕೊಳ್ಳುತ್ತಿರುತ್ತದೆ ಕೂಡ.
2/ 7
ಇನ್ನು ಅನುಷ್ಕಾ ಶರ್ಮಾ ಅವರು ಸಸ್ಯಾಹಾರಿ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಹಾಗೂ ಪ್ರಶ್ನೆಗಳು ಎದುರಾಗುತ್ತವೆ. ಅದರಲ್ಲೂ ಅವರ ಆಹಾರ ಕ್ರಮ ಹಾಗೂ ಜೀವನ ಶೈಲಿಯ ಬಗ್ಗೆಯೂ ನಾನಾ ರೀತಿಯ ಪ್ರಶ್ನೆಗಳಿಗೆ ಅನುಷ್ಕಾ ಉತ್ತರಿಸಬೇಕಾಗುತ್ತದೆ.
3/ 7
ಸಸ್ಯಾಹಾರಿ ಎಂದ ಕೂಡಲೇ ಮಾಂಸಾಹಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿರುವ ನಟಿ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಆಸಕ್ತಿಕರ ಪೋಸ್ಟ್ ಮಾಡಿದ್ದಾರೆ.
4/ 7
ಮಾಂಸಾಹಾರಿಗಳು ನೀವು ನನ್ನ ಜೊತೆ ಚರ್ಚೆಗಿಳಿಯಬೇಡಿ, ನಾನು ಸಸ್ಯಾಹಾರಿ ಎಂದ ಕೂಡಲೇ ಆ ಬಗ್ಗೆ ವಾದ ಮಾಡಲಾರಂಭಿಸಬೇಡಿ ಅಂತ ನಗುವ ಇಮೋಜಿ ಹಾಕಿ ಒಂದು ನಿಯತಕಾಲಿಕೆಯ ಕವರ್ ಫೋಟೋ ಶೇರ್ ಮಾಡಿದ್ದಾರೆ.
5/ 7
ಇದನ್ನು ಓದಿ ನಿಮಗೆ ಉತ್ತರ ಸಿಗುತ್ತದೆ ಎಂದು ಬರೆದುಕೊಂಡಿರುವ ಅನುಷ್ಕಾ ಶರ್ಮಾ, ಈ ಹಿಂದೆ ಪ್ರಾಣಿಗಳ ವಿಷಯದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಪ್ರಾಣಿಗಳ ಮೇಲೆ ನಡೆಯುವ ಹಲ್ಲೆ ಹಾಗೂ ಅಮಾನವೀಯ ಕೃತ್ಯಗಳ ಬಗ್ಗೆ ದನಿ ಎತ್ತುತ್ತಿರುತ್ತಾರೆ.
6/ 7
ಪತಿ ವಿರಾಟ್ ಕೊಹ್ಲಿ ಅವರಿಗೆ ಎರಡು ಪ್ರಾಣಿಗಳ ಶೆಲ್ಟರ್ ನಿರ್ಮಿಸುವಲ್ಲಿ ಸಾಕಷ್ಟು ಸಹಾಯ ಮಡಿದ್ದಾರೆ ಅನುಷ್ಕಾ ಶರ್ಮಾ. ಸದ್ಯ ಮಗಳು ವಾಮಿಕಾಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಈ ನಟಿ ಹೊಸ ಸಿನಿಮಾಗಳ ಪ್ರಕಟಣೆ ಮಾಡಿಲ್ಲ.
7/ 7
ಗರ್ಭಿಣಿಯಾದಾಗಿನಿಂದ ಅಭಿನಯದಿಂದ ದೂರ ಇರುವ ಅನುಷ್ಕಾ ಶರ್ಮಾ, ಕೇವಲ ಫೋಟೋಶೂಟ್ ಹಾಗೂ ವೆಬ್ ಸರಣಿಗಳ ನಿರ್ಮಾಣದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೂ ಅವರು ಫೋಟೋಶೂಟ್ ಒಂದರಲ್ಲಿ ಭಾಗಿಯಾಗಿದ್ದರು.