ಚಳಿಗಾಲದಲ್ಲಿ ವಾತಾವರಣವು ಯಾವಾಗ ಹೇಗೆ ಇರುತ್ತದೆ ಎಂದು ಊಹಿಸಲು ಅಸಾಧ್ಯ. ಹೀಗಾಗಿ ನಮ್ಮ ಆರೋಗ್ಯದ ಮೇಲೆ ನಾವು ಸದಾ ಕಾಳಜಿಯನ್ನು ವಹಿಸಲೇಬೇಕು.
2/ 8
ಚಳಿಗಾಲ ಬಂದಾಯ್ತು, ಇನ್ನು ಶೀತ, ಕೆಮ್ಮು ಹೀಗೆ ನಾನಾರೀತಿಯ ಅನಾರೋಗ್ಯ ಕಾಡಲು ಆರಂಭವಾಗುತ್ತದೆ. ಹಾಗಾದ್ರೆ ಕೆಮ್ಮಿಗೆ ಯಾವುದೇ ಮನೆಮದ್ದು ಇಲ್ವಾ ಅಂತ ಕೇಳಿದ್ರೆ , ಇದೆ.
3/ 8
ನಾನಾರೀತಿಯ ಸಿರಪ್ಗಳನ್ನು ಕುಡಿಯುವುದರ ಬದಲು, ಈ ನೆಲ್ಲಿಕಾಯಿ ಟಿಪ್ಸ್ಗಳನ್ನು ಫಾಲೋ ಮಾಡಿ. ಅಂದರೆ, ನೆಲ್ಲಿಕಾಯಿ ರಸವನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ದಿನಕ್ಕೆ 2 ಬಾರಿ ಕುಡಿಯಿರಿ.
4/ 8
ಒಣ ಕೆಮ್ಮು ಆಗಿರಲಿ ಅಥವಾ ಕಫದ ಕೆಮ್ಮು ಆಗಿರಲಿ, ನೀವು ನಿರ್ಲಕ್ಷ್ಯ ಮಾಡುವಂತೇ ಇಲ್ಲ. ಯಾಕೆಂದರೆ ಒಂದು ಬಾರಿ ಆರಂಭವಾದ ಕೆಮ್ಮು ಅದೆಷ್ಟೇ ದಿನಗಳು ಆದರೂ ಕಡಿಮೆ ಆಗುವುದಿಲ್ಲ.
5/ 8
ದೊಡ್ಡ ಗಾತ್ರದ ನೆಲ್ಲಿಕಾಯಿಯನ್ನು ನೀಟಾಗಿ ತೊಳೆದು ಅದರಿಂದ ಬೀಜವನ್ನು ಬೇರ್ಪಡಿಸಿ, ಅದಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನೀವು ಕುಡಿಯಬೇಕು. 2 ದಿನಗಳಲ್ಲಿ ನಿಮ್ಮ ಕೆಮ್ಮು ಸಂಪೂರ್ಣವಾಗಿ ಮಾಯವಾಗುತ್ತೆ.
6/ 8
ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು, ಅದನ್ನು ಪೇಸ್ಟ್ಮಾಡಿ. ನಂತರ ಅದನ್ನು ನೆಲ್ಲಿಕಾಯಿ ಜೊತೆಗೆ ಮಿಶ್ರಣ ಮಾಡಿ ಸೇವಿಸಿ. ಕಫದಿಂದ ಬಳಲುತ್ತಿದ್ದವರಿಗೆ ಈ ಟಿಪ್ಸ್ ಅನುಸರಿಸುವುದರಿಂದ ಬೇಗನೆ ಕಡಿಮೆ ಆಗುತ್ತದೆ.
7/ 8
ನೆಲ್ಲಿಕಾಯಿ ಕೆಮ್ಮನ್ನು ಗುಣಪಡಿಸುವುದು ಮಾತ್ರವಲ್ಲದೆ ಹೈಪರ್ಆಸಿಡಿಟಿಯ ಲಕ್ಷಣಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಸಮಸ್ಯೆಯನ್ನು ತಪ್ಪಿಸಲು, ನೀವು ಊಟಕ್ಕೆ ಮೊದಲು 1 ಟೀಚಮಚ + 1/2 ಟೀಸ್ಪೂನ್ ಕಲ್ಲುಸಕ್ಕರೆ ಯೊಂದಿಗೆ ನೆಲ್ಲಿಕಾಯಿ ರಸವನ್ನು ತೆಗೆದುಕೊಳ್ಳಬೇಕು.
8/ 8
ಕೆಂಪು ಕಲ್ಲುಸಕ್ಕರೆಯನ್ನು ಕೆಲಕಾಲ ಬಾಯಲ್ಲಿ ಇಟ್ಟು ಅದರ ರಸವನ್ನು ಚೆನ್ನಾಗಿ ಕುಡಿಯಿರಿ. ಇದನ್ನು ರಾತ್ರಿ ಮಲಗುವಾಗ ಮಾಡಿದರೆ ಒಳಿತು. ಯಾಕೆಂದರೆ, ರಾತ್ರಿ ಹೆಚ್ಚು ಕೆಮ್ಮು ಬರುತ್ತದೆ. ಇದರಿಂದ ಎದೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಲ್ಲುಸಕ್ಕರೆ ಬಾಯಲ್ಲಿ ಇಟ್ಟುಕೊಂಡು ನಿದ್ರಿಸಿ.