ಹಿಮೋಗ್ಲೋಬಿನ್ ಮಟ್ಟ ಹೆಚ್ಚಳ: ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಾಗುತ್ತದೆ. ಇದರೊಂದಿಗೆ ರಕ್ತ ಪರಿಚಲನೆ ಕೂಡ ಸಮತೋಲನಗೊಳ್ಳುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುವ ಕಾರಣ, ರಕ್ತಹೀನತೆ, ದಣಿವು, ದೌರ್ಬಲ್ಯ, ತಲೆತಿರುಗುವಿಕೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೀವು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಸೇವಿಸಿ.
ಕೆಮ್ಮು ಮತ್ತು ಶೀತಕ್ಕೆ ಮನೆಮದ್ದು: ಕೆಮ್ಮು ಮತ್ತು ಶೀತವು ಸಾಮಾನ್ಯ ಸಮಸ್ಯೆಯಾಗಿದೆ. ಆಗಾಗ್ಗೆ ಕೆಮ್ಮು ಮತ್ತು ಶೀತದ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಕಲ್ಲು ಸಕ್ಕರೆ ಪುಡಿಯಲ್ಲಿ ಕರಿಮೆಣಸು ಪುಡಿ ಮತ್ತು ತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿ. ನಂತರ ರಾತ್ರಿಯ ಸಮಯದಲ್ಲಿ ಸೇವಿಸಿ. ಇದಲ್ಲದೆ, ನೀವು ಕಲ್ಲು ಸಕ್ಕರೆ ಮತ್ತು ಕರಿಮೆಣಸಿನ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಸೇವಿಸುವುದರಿಂದ ಸಹ ಕೆಮ್ಮು ನಿವಾರಣೆಯಾಗುತ್ತದೆ.